ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಕೃಷಿರಂಗ

ಬಾಳು ಬೆಳಗಿದ ಕಿರುಕಾಮಧೇನು

image_
ಡಾ ಪಿ ರವಿಕುಮಾರ್
9228598835

ಬಾಳಜ್ಜ: ಕೇಳೋ ಬುದ್ಧಿಗೇಡಿ. ನೀ ಇಂಥಾ ಯಡವಟ್ ಮಾಡ್ಕಬೌದು ಅಂತ ನಂಗೆ ಮೊದ್ಲೇ ಗೊತ್ತಿತ್ತು. ಕಷ್ಟಕಾಲಕ್ಕೆ ಆಗ್ತವ ಅಂತ ನನ್ ಕಿವ್ಯಾಗ ಇದ್ದ ಕಟಕಗೋಳ್ನ ಒಳಾಗ ಕಬ್ಬಿಣದ ಪೆಟ್ಟಿಗ್ಯಾಗ ಇಟ್ಟೀನಿ. ಅವುನ್ನ ಮಾರೀ ಮೊದ್ಲು ನಾಕು ಕುರೀನೋ, ಮ್ಯಾಕೀನೊ ತಕ್ಕಂಬಾ. ಒಕ್ಕಲುತನದ ಜೋಡಿ ಕುರಿ-ಮೇಕೇನೂ ಸಾಕೊದ ರೂಢಿ ಮಾಡ್ಕ. ಹಂಗ ದನೀನ ದವಾಖಾನೀಗ ಹೋಗಿ ಡಾಕ್ಟ್ರನೂ ಕಂಡು ಬಾ. ಸರ್ಕಾರದಿಂದ ನಿಂಗೇನಾರ ಸಹಾಯ ಸಿಕ್ತೈತಾ ಕೇಳ್ಕಂಡು ಬಾ. ಹೋದ್ ವರ್ಷದ್ ಜೋಳದ ಬೆಳೀ ಇನ್ನಾರ್ ತಿಂಗಳೀಗ ಆಗೋವಷ್ಟು ಅವ. ನೀ ಕಾಳಜಿ ಮಾಡಬ್ಯಾಡ. ಮುಂದೇನ್ ಆಗ್ಬೇಕೋ ಅದ ನೋಡು.ರಾಮ: ಆತಪ್ಪಾ, ಹಂಗೇ ಮಾಡತೇನು

ರಾಮ: ಆತಪ್ಪಾ, ಹಂಗೇ ಮಾಡತೇನು

ದೃಶ್ಯ-೩

(ಪಶುಚಿಕಿತ್ಸಾಲಯದ ದೃಶ್ಯ. ಪಶುವೈದ್ಯರು ಎಮ್ಮೆಯೊಂದಕ್ಕೆ ಗರ್ಭಧಾರಣೆ ಮಾಡುತ್ತಿರುತ್ತಾರೆ. ರಾಮಣ್ಣ ಬಂದು ಅವರ ಬಳಿ ಕೈ ಕಟ್ಟಿ ನಿಲ್ಲುತ್ತಾನೆ)/strong>

ವೈದ್ಯರು: (ಗರ್ಭಧಾರಣೆ ಮುಗಿಸಿ ಕೈತೊಳೆಯುತ್ತಾ) ಏನ್ ರಾಮಣ್ಣಾ, ನಿನ್ನ ಎಮ್ಮಿಗೆ ಮೈಯಾಗ ಆರಾಮಿಲ್ಲೇನೋ? ಒಬ್ನೇ ಬಂದೀಯಲ್ಲಾ, ಏನ್ಸಮಾಚಾರ?

ರಾಮಣ್ಣ: ಎಮ್ಮಿ ಆರಾಮೈತ್ರೀ. ನಿಮ್ಕೂಡ ಸ್ವಲ್ಪ ಮಾತಡಬೇಕ್ರಿ. ಅದುಕ್ಕಾ ಬಂದೀನ್ರಿ ಯಪ್ಪ

ವೈದ್ಯರು: ಒಳಕ್ಕೆ ಹೋಗುತ್ತಾ)-ಬಾ ರಾಮಣ್ಣ ಕುಂತು ಮಾತಾಡೋಣಂತ (ತಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ರಾಮಣ್ಣನಿಗೂ ಕೂರಲು ಸನ್ನೆ ಮಾಡಿ) ಈಗ ಹೇಳು, ಏನ್ಸಮಾಚಾರ?

ರಾಮಣ್ಣ: ಏನ್ ಹೇಳ್ಲಿ ಸ್ವಾಮೀ? ನೆರೀ ಬಂದು ಕೈಯಾಗ ಬಂದಿದ್ದ ತುತ್ತು ಬಾಯಾಗಿಲ್ಲ ಅನ್ನಂಗ ಆಗೇದ. ಹೊಲಾ ಬೆಳೀ ಎಲ್ಲಾ ಮುಳ್ಗಾಕ ಹತ್ತ್ಯಾವ. ಮುಂದೇನ್ಮಾಡೋದೋ ತೋಚಂಗಿಲ್ಲ.

ವೈದ್ಯರು: (ಸಹಾನುಭೂತಿ ತೋರಿಸುತ್ತಾ) ಹೌದು ಹೇಳೋ ರಾಮಣ್ಣ, ಇಂಥಾ ಪರಿಸ್ಥಿತಿ ಯಾವ ರೈತನಿಗೂ ಬರಬಾರ್ದು. ನನ್ ಮನ್ಸಿಗೂ ಬಾಳಾ ಖೇದ ಆಗೈತಿ ನೋಡಪಾ

ರಾಮಣ್ಣ: ಈಗ ನೀವಾ ನನಗ ದಾರಿ ತೋರಿಸ್ಬೇಕು ನೋಡ್ರೀ ಯಪ್ಪಾ.

ವೈದ್ಯರು: ನೋಡ್ ರಾಮಣ್ಣಾ, ನನ್ಕೈಲಿ ಏನ್ ಸಹಕಾರ ಮಾಡಾಕಾಗ್ತೈತೋ ಅದನ್ನ ನಾನು ಖಂಡಿತವಾಗ್ಲೂ ಮಾಡ್ತೇನು. ಮೊದ್ಲ ನೀ ಏನ್ ಮಾಡ್ಬೇಕು ಅಚಿತಿದೀಯೋ ಅದನ್ನ ಹೇಳು

ರಾಮಣ್ಣ: ಡಾಕ್ಟ್ರೇ, ನಮ್ಮಪ್ಪಾ ಆಡು-ಕುರಿ ಸಾಕ್ಕೊಳೋ ಮಗಾ ಅಂತ ಹೇಳಾಕ ಹತ್ಯಾನ. ನಂಗೂ ಅದೇ ಪಾಡನ್ನಿಸ್ತದ. ನೀವಾ ನಂಗ ದಾರಿ ತೋರುಸ್ಬೇಕು ನೋಡ್ರಿ.

ವೈದ್ಯರು: ಛಲೋ ನಿರ್ಧಾರನ ತಗೊಂಡೀ ಬಿಡೋ ರಾಮಣ್ಣ. ಈ ಊರಿನ್ ಸುತ್ತಾ ಸಣ್ ಸಣ್ ಗುಡ್ಡಾ ಅದಾವು. ಕುರಿಗೋಳ ಮೇವಿಗೆ ತೊಂದ್ರಿ ಆಗಾಂಗಿಲ್ಲ. ಆದ್ರ ಜೊತೀಗೆ ನಾ ಹೇಳ್ದಂಗ ಕೇಳಿದ್ರೆ, ನಿಂಗ ಒಳ್ಳೇ ಲಾಭ ಆಗೋದ್ರಲ್ಲಿ ಸಂಶಯಾ ಇಲ್ಲ ನೋಡಪಾ.

ರಾಮಣ್ಣ: ಅದುಕ್ಕೇ ನಿಮ್ ಕಡೀ ಬಂದೀನ್ ನೋಡ್ರೀ ಸರ. ನಮ್ಮಪ್ಪ ಅವನ ಕಡೀ ಇದ್ದಿದ್ದ ಚಿನ್ನದ ವಾಲೀ ಕೊಟ್ಟಾನ್ರೀ. ಅವುನ್ನ ಮಾರೀ ಐದ್ ಸಾವಿರ ತಂದೀನ್ರಿ. ನಾ ಯೇನ್ ಮಾಡ್ಬೌದು, ನಿಮ್ಕಡಿಂದ ನಂಗೆ ಏನ್ ಸಹಾಯ ಸಿಗಬೌದು ಹೇಳ್ರಿ

ವೈದ್ಯರು: ನೋಡ್ ರಾಮಣ್ಣಾ, ಸರ್ಕಾರದಿಂದ ಅಂಚಿನ ಹಣದ ಯೋಜನೆ ಅಂತ ಒಂದೈತಿ. ಅದ್ರಾಗ ನಿನ್ನೆಸ್ರು ಸೇರ್ಸಿ ಏನಾರ ಮಾಡಾಣಂತೆ. ಬ್ಯಾಂಕ್ನೋರೂಸೈತ ಕಡಿಮೆ ಬಡ್ಡಿಗೆ ಸಾಲ ಕೊಡತಾರು. ದವಾಖಾನ್ಯಾಗ ಸಿಗೋ ಔಸ್ದಿ, ಗುಳ್ಗಿ ಎಲ್ಲಾ ಮುಫತ್ತಾಗಿ ನಿಂಗ ಕೊಡ್ತೇನು. ಕಾಲಕಾಲಕ್ಕೆ ಏನ್ ಉಪಚಾರ ಮಾಡ್ಬೇಕೋ ಅದನ್ನೆಲ್ಲಾ ಮಾಡಾಣಂತೆ ಮೊದ್ಲಿಗೆ ಹತ್ತು ಹೆಣ್ಣು ಕುರಿ, ಒಂದು ಟಗರು ಕೊಂಡ್ಕಂಡು ನೀ ಸುರು ಮಾಡ್ಬಿಡು.