ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಹೆಲಿಕೋನಿಯಾ ಕೃಷಿ

image_
ಸಂತೋಷ್, ಎನ್.,
8867097307

ಅಲಂಕಾರಕ್ಕೆ ಬಳಸುವ ಹೆಲಿಕೋನಿಯಾ ಬಾಳಿಕೆ ಹೆಚ್ಚು. ಔಷಧಿ ಗುಣಗಳು ಸಹ ಇದರಲ್ಲಿವೆ.

ತಳಿಗಳು ನೇರವಾಗಿರುವ ತಳಿ ಮತ್ತು ಜೋತು ಬೀಳುವ ತಳಿ

ಅಲಾನಕಾರ್ಲೆ, ಅಂಡ್ರೊಮೆಡಾ, ಕೊಲಿನ್ಸಿಯಾನಾ, ವ್ಯಾಗ್ನೇರಿಯಾನಾ, ಡಿ-ರೌಜ್-ರೆಡ್, ಫೈರ್ ಫ್ಲಾಶ್, ಗಯಾನಾ, ಕೇನ್ಯಾರೆಡ್, ಲೇಡಿ-ಡಿ, ಲ್ಯಾಥಿಸ್ಪೇಟಾ, ಲಿಝೆಟ್ಟೆ, ಲೊಬಸ್ಟರ್ಕ್ಲಾವ್, ಮಾಥಿಯೇಸಿಯೆ, ಪ್ಯಾರೇಟ್ಸ್ ಬೀಕ, ಪೆಡ್ರೊಆರ್ಟೀಝ್, ಪೆಟ್ರಾಅರೇಂಜ್, ಸೆಕ್ಸಿಪಿಂಕ್, ಸ್ಟ್ರಾಬೆರ್ರಿ ಆಂಡ್ ಕ್ರೀಮ್, ವಾಗ್ನೇರಿಯಾನಾ ರೆಡ್, ಗೋಲ್ಡನ್ ಟಾರ್ಚ, ಇತ್ಯಾದಿ.

ಹೆಲಿಕೋನಿಯಾ ಸಿಟಾಕೋರಮ್ ಸ್ಪಾತೋಸಿರನೇಟಾ ತಳಿ ಗೋಲ್ಡನ್ ಟಾರ್ಚ್ ವಾಣಿಜ್ಯ ಮಟ್ಟದಲ್ಲಿ ಕೃಷಿ ಕೈಕೊಳ್ಳಲು ಸೂಕ್ತವಾದ ತಳಿ. ಬಂಗಾರದ ಬಣ್ಣದ ನಾವಿನಾಕಾರದ ಹೂದೆನೆ ಹೊಂದಿದೆ. ಇದರ ಎತ್ತರ ೨.೫ ರಿಂದ ೮ ಅಡಿ ಇರುತ್ತದೆ. ಹೂದಾನಿಯಲ್ಲಿ ಹೂಬಾಳಿಕೆ ೧೦ ರಿಂದ ೧೫ ದಿನ, ಸಸ್ಯಾಭಿವೃದ್ಧಿಗೆ ಕಂದುಗಳನ್ನು ಬಳಸಬೇಕು,

5

ಮಣ್ಣು : ಸ್ವಲ್ಪ ಆಮ್ಲೀಯ ಗುಣ ಹೊಂದಿರುವ, ಚೆನ್ನಾಗಿ ನೀರು ಬಸಿದು ಹೋಗುವ ಮದ್ಯಮ ಫಲವತ್ತಾದ ಮಣ್ಣು ಸೂಕ್ತ. ಆದರೆ ಅತಿ ಹೆಚ್ಚು ರಸಸಾರ ಇರುವ ಮಣ್ಣು ಸೂಕ್ತವಲ್ಲ.>

ಅಂತರ: ೪೦ * ೪೦ ಸೆಂ.ಮೀ. ಒತ್ತಾಗಿ ನಾಟಿ ಮಾಡಿದಾಗ ೨ ವರ್ಗಗಳ ನಂತರ ಬಹಳಷ್ಟು ರೈಜೋಮ್ಗಳಾಗಿ ಸಸಿಗಳ ಬೆಳವಣಿಗೆ ಕುಂಠಿತ ವಾಗುವದು. ಆದ್ದರಿಂದ ೨ ವರ್ಷಕ್ಕೊಮ್ಮೆ ರೈಜೋಮ್ ಅಗೆದು ತೆಗೆದು ಪುನಃ ನಾಟಿ ಮಾಡಬೇಕು.ನೀರಾವರಿ: ಅಗತ್ಯವರಿತು ನೀರು ಒದಗಿಸಬೇಕು.

ಪೋಷಕಾಂಶಗಳು: ಪ್ರತಿ ಚ.ಮೀ. ಗೆ ಚೆನ್ನಾಗಿ ಕೊಳೆತ ತಿಪ್ಪೆಗೊಬ್ಬರ ೪ ಕಿ.ಗ್ರಾಂ. ಹಾಗೂ ೨೦ ಗ್ರಾಂ: ೨೦ ಗ್ರಾಂ : ೨೦ ಗ್ರಾಂ ಸಾರಜನಕ : ರಂಜಕ : ಪೊಟ್ಯಾಷ್ ನಾಟಿ ಮಾಡುವಾಗ ಒದಗಿಸಬೇಕು. ಇದಲ್ಲದೆ ಮೇಲು ಗೊಬ್ಬರವಾಗಿ ೨೦ ಗ್ರಾಂ. ಸಾರಜನಕ ಪ್ರತಿ ಚ.ಮೀ. ಗೆ ನಾಟಿಮಾಡಿದ ೨ ತಿಂಗಳ ನಂತರ ಒದಗಿಸಬೇಕು. ಲಘು ಪೋಷಕಾಂಶಗಳ ಸಿಂಪರಣೆ ವರ್ಷದಲ್ಲಿ ೩-೪ ಸಲ ಮಾಡುವುದರಿಂದ ಎಲೆಗಳ ಬಣ್ಣ ಚೆನ್ನಾಗಿ ಬರುವುದಲ್ಲದೇ ಹೂವಿನ ಗುಣಮಟ್ಟ ಹೆಚ್ಚುವುದು.

ಕೊಯ್ಲು : ನಾಟಿ ಮಾಡಿದ ೬-೭ ತಿಂಗಳ ನಂತರ ಹೂ ದೊರೆಯಲು ಪ್ರಾರಂಭವಾಗುತ್ತವೆ. ವರ್ಷಪೂರ್ತಿ ಹೂ ದೊರೆಯುತ್ತಿದ್ದರೂ ನವೆಂಬರ್-ಡಿಸೆಂಬರ್ ತಿಂಗಳುಗಳಲ್ಲಿ ಹೆಚ್ಚು ಹೂ ದೊರೆಯುತ್ತವೆ. ಉದ್ದವಾದ ದಂಟಿನೊಂದಿಗೆ ಬೆಳಗಿನಜಾವ ಅರಳಿದ ಹೂ ಕೊಯ್ಲು ಮಾಡಬೇಕು. ಕೊಯ್ಲು ಮಾಡುವ ಪೂರ್ವ, ಭೂಮಿಯಲ್ಲಿ ಸಾಕಷ್ಟು ತೇವಾಂಶವಿದ್ದಲ್ಲಿ ಹೂಬಾಳಿಕೆ ಹೆಚ್ಚಾಗಿರುತ್ತದೆ.>

ಇಳುವರಿ : ಸರಿಸುಮಾರು ೧ ಚ.ಮೀ. ಕ್ಷೇತ್ರದಲ್ಲಿ ನಾಟಿಮಾಡಿದ ಸಸಿಗಳಿಂದ ಸರಾಸರಿ ಮೊದಲನೇ ವರ್ಗ ೩೫-೪೦ ಹೂದಂಟು ಮತ್ತು ಎರಡನೇ ವರ್ಗದಿಂದ ೬೦-೭೫ ಹೂದಂಟು ಪಡೆಯಬಹುದು.

ಕೊಯ್ಲೋತ್ತರ: ಹೂದಂಟುಗಳನ್ನು ಒಂದೇ ಸಮನಾಗಿ ಕತ್ತರಿಸಿದ ನಂತರ ಕೀಟನಾಶಕ ದ್ರಾವಣದಲ್ಲಿ ೫ ನಿಮಿಷ ಅದ್ದಿ ನೀರಿನಲ್ಲಿ ಇರಿಸಬೇಕು. ಹೂದಂಟುಗಳನ್ನು ಪ್ಯಾಕ್ ಮಾಡುವ ಮೊದಲು ನೀರಿನಲ್ಲಿ ಇರಿಸುವುದು ಅಥವಾ ಪ್ರಿಕೂಲಿಂಗ್ ಮಾಡುವುದು ಸೂಕ್ತ. ಹೂದಾನಿಯಲ್ಲಿ ಹೂಬಾಳಿಕೆ ೧೦-೧೫ ದಿವಸ ಹೊಂದಿದ್ದು. ಶೇಖರಣೆ ಮಾಡಲು ೧೦-೧೩೦ ಸೆ. ಉಷ್ಣಾಂಶ ಸೂಕ್ತ.

ಗ್ರೇಡಿಂಗ್/ ಪ್ಯಾಕಿಂಗ್: ಬಹಳ ಉದ್ದನೆಯ ಹೆಲಿಕೋನಿಯ ದಂಟುಗಳನ್ನು ೧೫೦ ಸೆಂ.ಮೀ. ಗೂ ಇನ್ನುಳಿದವುಗಳನ್ನು ೬೦ ರಿಂದ ೯೦ ಸೆಂ.ಮೀ ಉದ್ದ ಬಿಟ್ಟು ಕತ್ತರಿಸಬೇಕು. ನಂತರ ೧೦ ರ ಒಂದು ಕಂತೆಮಾಡಿ ಪ್ಲಾಸ್ಟಿಕ್/ ಪೇಪರ್ ಸ್ಲೀವ್ನಲ್ಲಿ ಇರಿಸಿ ೧೫೦ ಘಿ ೫೦ ಘಿ ೨೫ ಸೆಂ.ಮೀ. ಅಳತೆಯ ಸಿಎಫ್ಬಿ ಪೆಟ್ಟಿಗೆಯಲ್ಲಿ ಇರಿಸುತ್ತಾರೆ. ಈ ರೀತಿ ಸುಮಾರು ೨೫ ಕಂತೆಗಳನ್ನು ಇರಿಸಿ ಪ್ಯಾಕ್ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

  • ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು,2.
  • ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
  •