ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಚಿತ್ರ ಲೇಖನ

ಸೇವಂತಿಗೆಯಲ್ಲಿ ಸಸ್ಯ ಹೇನು ಬಾಧೆ

image_
ಡಾ.ಎಸ್.ಟಿ. ಪ್ರಭು
9448182225
12

ಮ್ಯಾಕ್ರೋಸೈಫೋನಿಯೆಲ್ಲಾ ಸ್ಯಾನ್ಬೋರ್ನಿ (Macrosiphoniella sanborni) ಎಂಬ ವೈಜ್ಞಾನಿಕ ಹೆಸರಿನೊಂದಿಗೆ ಸೇವಂತಿಗೆಯ ಕಪ್ಪು ಹೇನು ಎಂದು ಕರೆಯಿಸಿಕೊಳ್ಳುವ ಈ ಸಸ್ಯಹೇನುಗಳು ಗಾತ್ರದಲ್ಲಿ ೨ ರಿಂದ ೩ ಮಿ. ಮೀ. ಉದ್ದವಿದ್ದು ಗಾಢ ಕಂದು ಅಥವಾ ಕಪ್ಪು ಬಣ್ಣವಾಗಿರುತ್ತವೆ. ಈ ಕೀಟದ ವಿವಿಧ ಹಂತದ ಮರಿಗಳು ಮತ್ತು ಪ್ರೌಢ ಹೇನುಗಳು ಸೇವಂತಿಗೆ ಗಿಡದ ಚಿಗುರುಗಳಲ್ಲಿ, ಹೂಗಳ ಬುಡದಲ್ಲಿ ಮತ್ತು ಎಲೆಗಳ ಕೆಳಭಾಗದಲ್ಲಿ ಅಸಂಖ್ಯಾತವಾಗಿ ಗುಂಪಾಗಿ ಇದ್ದು ಎಲೆಗಳ ಕೆಳಭಾಗದಿಂದ ಮತ್ತು ಎಳೆಯದಾದ ರೆಂಬೆಗಳಿಂದ ರಸ ಹೀರುತ್ತವೆ. ಎಲೆಗಳು ಹಳದಿಯಾಗಿ ನಂತರ ಒಣಗಿ ಕೆಳಗೆ ಬೀಳುತ್ತವೆ. ಇವುಗಳ ಹಾವಳಿ ತೀವ್ರವಾದಾಗ ಸಿಹಿಯಾದ ಅಂಟು ದ್ರವ ಕೀಟಗಳಿಂದ ಸ್ರವಿಸಲ್ಪಟ್ಟು ಅದರ ಮೇಲೆ ಕಪ್ಪು ಬೂಸ್ಟ್ ಬೆಳವಣಿಗೆ ಆಗುತ್ತದೆ.

ನಿರ್ವಹಣ: ಕೀಟಗಳ ಬಾಧೆ ಕಂಡು ಬಂದಾಗ ಬೆಳೆಗೆ ಪ್ರತಿ ಲೀಟರ್ ನೀರಿಗೆ ೧ ಮಿ.ಲೀ. ಡೈಕ್ಲೋರೋವಾಸ್ ೭೬ ಇ.ಸಿ. ಕೀಟನಾಶಕವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಕರೆಗೆ ೨೫೦ ಮಿ. ಲೀ. ಕೀಟನಾಶಕ ಬೇಕಾಗುತ್ತದೆ ಮತ್ತು ಎಕರೆಗೆ ೨೫೦ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.