ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಸೇವಂತಿಗೆಯಲ್ಲಿ ಬಿಳಿ ನೊಣ ನಿರ್ವಹಣೆ

image_
ಡಾ. ಶರಣಬಸಪ್ಪ
9448238571
12

ಹಾನಿಯ ಲಕ್ಷಣಗಳು:

 • ಅಪ್ಸರೆ ಮತ್ತು ಪ್ರೌಢ ಕೀಟಗಳು ಎಲೆಗಳ ಕೆಳಭಾಗದಲ್ಲಿ ಕುಳಿತು ರಸವನ್ನು ಹೀರುತ್ತವೆ. ಇದರಿಂದ ಎಲೆಗಳು ಮುದುರಿಕೊಳ್ಳುತ್ತವೆ.
 • ಈ ಕೀಟವು ರಸಹೀರುವುದರ ಜೊತೆಗೆ ಅಂಟಿನಂತಹ ದ್ರಾವಣವನ್ನು ಕೂಡ ಸ್ರವಿಸುತ್ತದೆ.
 • ಈ ದ್ರಾವಣವು ಎಲೆಗಳ ತುಂಬಾ ಹರಡಿ, ಕಪ್ಪು ಪದರಿನಂತಾಗುತ್ತದೆ. ಇದರಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಡಚಣೆಯುಂಟಾಗುತ್ತದೆ. ಇದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಗಣನೀಯ ಇಳಿಕೆಯಾಗುತ್ತದೆ.
 • ನಿರ್ವಹಣೆ:

 • ಸೇವಂತಿಗೆಯ ಗಿಡಗಳನ್ನು ಪ್ರತಿದಿನ ಬಿಳಿನೊಣದ ಬಾಧೆ ಮತ್ತು ಅದರ ಲಕ್ಷಣಗಳಿಗಾಗಿ ಪರಿವೀಕ್ಷಣೆ ಮಾಡುವುದು. ಯಾವುದಾದರೂ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು.
 • ತೀವ್ರವಾಗಿ ಬಾಧೆಗೊಳಗಾದ ಗಿಡಗಳನ್ನು ಕಿತ್ತು ಸುಟ್ಟು ಹಾಕುವುದು.
 • ಹೊಸ ಗಿಡಗಳ ನಾಟಿಯ ಮೊದಲು, ಬಿಳಿ ನೊಣದ ಬಾಧೆಯ ಬಗ್ಗೆ ವೀಕ್ಷಣೆ ಮಾಡುವುದು.
 • ಕೀಟ ನಿರೋಧಕ ತಳಿಗಳನ್ನು ಬಳಸುವುದು.
 • ಹಳದಿ ಬಣ್ಣದ ಮೋಹಕ ಬಲೆಗಳನ್ನು ಬಳಸುವುದು.
 • ಇಮಿಡಾಕ್ಲೋಪ್ರಿಡ್ ೦.೫ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
 • 14