ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಸೇವಂತಿಗೆ ಎಲೆ ಚುಕ್ಕೆ ರೋಗ

image_
ಡಾ. ಹೆಚ್. ನಾರಾಯಣಸ್ವಾಮಿ
9448159375
1

ಕರ್ನಾಟಕದಲ್ಲಿ ಸೇವಂತಿಗೆ ಹೂ ಮುಖ್ಯವಾದ ವಾಣ್ಯಿಜ್ಯ ಬೆಳೆ. ಬಿಡಿ ಮತ್ತು ಕತ್ತರಿಸಿದ ಹೂವನ್ನಾಗಿ ಬಳಸಲಾಗುತ್ತದೆ. ಸುಗಂಧ ತೈಲ ಮತ್ತು ಪೈರಿಥ್ರಮ್ ಕೀಟನಾಶಕ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಹಳದಿ ಮತ್ತು ಬಿಳಿ ಹೂವಿನ ತಳಿಗಳನ್ನು ಕೃಷಿ ಮಾಡುತ್ತಾರೆ.

3

ಈ ಬೆಳೆಯನ್ನು ಅನೇಕ ರೋಗಗಳು ಭಾಧಿಸುತ್ತವೆ ಅವುಗಳೆಂದರೆ ಹಳದಿ ನಂಜುರೋಗ, ಬೇರುಕೊಳೆ ರೋಗ, ತುಕ್ಕು ರೋಗ ಮತ್ತು ಎಲೆ ಚುಕ್ಕೆ ರೋಗ ಮುಖ್ಯವಾದವುಗಳು.

ಎಲೆ ಚುಕ್ಕೆ ರೋಗ ಶಿಲೀಂದ್ರ ರೋಗಾಣುವಿಂದ ಬರುವುದು. ಇದು ಸೇವಂತಿಗೆ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಕಂಡುಬಂದು ತೀವ್ರ ನಷ್ಟವನ್ನುಂಟುಮಾಡುವುದು. ಸಸಿ, ಬೆಳೆಯುವ ಮತ್ತು ಹೂ ಬಿಡುವ ಹಂತಗಳಲ್ಲಿ ಇದರ ಬಾಧೆಯನ್ನು ಕಾಣಬಹುದು. ಈ ರೋಗದ ಚಿಹ್ನೆಗಳನ್ನು ಸುಲಭವಾಗಿ ಗುರಿತಿಸಬಹುದು. ಈ ರೋಗದಿಂದ ಶೇ.೫೦ ಕ್ಕಿಂತ ಹೆಚ್ಚು ಆದಾಯ ಕಡಿಮೆಯಾಗುವುದು.

6
 • ಮೊದಲಿಗೆ ಹಳದಿ ಬಣ್ಣದ ಸಣ್ಣ ಚುಕ್ಕೆಗಳು ತಳಭಾಗದ ಎಲೆಗಳ ಮೇಲೆ ಕಾಣುತ್ತವೇ.
 • ನಂತರ ಚುಕ್ಕೆಗಳು ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗಿ ಒಂದು ಇಂಚು ಗಾತ್ರದಷ್ಟು ದೊಡ್ಡ ಮಚ್ಚೆಗಳಾಗಿ ಮಾರ್ಪಡುತ್ತವೆ.
 • ಇಂತಹ ಮಚ್ಚೆಗಳು ಇಡೀ ಎಲೆಗೆ ಹರಡುವುದರಿಂದ ಎಲೆಗಳು ಸಾಯುತ್ತವೆ.
 • ತೀವ್ರವಾಗಿ ರೋಗಪೀಡಿತ ಎಲೆಗಳು ಉದುರುತ್ತವೆ.
 • ಸೂಜಿಮೊನೆಯಾಕಾರದ ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಚುಕ್ಕೆಗಳನ್ನು ಎಲೆ ತೊಟ್ಟು, ಹೂವಿನ ತೊಟ್ಟು ಮತ್ತು ಕಾಂಡದ ಮೇಲೆ ಕಾಣಬಹುದು.
 • ನಂತರ ಈ ಮಚ್ಚೆಗಳು ದೊಡ್ಡದಾಗಬಹುದು, ರೋಗಾಣುಗಳು ಹೂವಿನ ದಳಗಳಿಗೆ ಹರಡುವುದರಿಂದ ಹೂಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
 • ಮೊದಲಿಗೆ ಗಿಡಗಳ ಒಂದೆರಡು ಹೂಗಳು ರೋಗಕ್ಕೆ ತುತ್ತಾಗಿ ನಂತರ ಇಡೀ ಗಿಡದ ಎಲ್ಲಾ ಹೂಗಳಿಗೆ ಹರಡಿದಾಗ ಹೂಗಳು ತನ್ನ ಬಣ್ಣವನ್ನು ಕಳೆದುಕೊಳ್ಳುತ್ತವೆ. ಇದರಿಂದ ಮಾರುಕಟ್ಟೆ ಮಾಡಲು ಕಷ್ಟವಾಗುವುದು.
 • ರೋಗ ನಿರ್ವಹಣೆ

 • ತುಂತುರು ನೀರಾವರಿ ಪದ್ದತಿಯನ್ನು ನಿಲ್ಲಿಸಬೇಕು.
 • ಹಸಿರು ಮನೆಯಲ್ಲಿ ವಾತಾವರಣದ ತೇವಾಂಶವನ್ನು ಶೇ ೯೮ ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.
 • ಪ್ರತೀ ೨೦೦ ಲೀಟರ್ ನೀರಿಗೆ ಕ್ಲೋರೋಥೆಲೋನಿಲ್ - ೪೦೦ಗ್ರಾಂ ಅಥವಾ ಮ್ಯಾಂಕೋಜೆಬ್ - ೪೦೦ಗ್ರಾಂ ಅಥವಾ ೨೦೦ ಮಿ, ಲೀ ಹೆಕ್ಸಾಕೋನಜೆಲ್ನಿಂದ ೧೫ ದಿನ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡುವುದು.
 •