ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಮಿಡಿತ-ತುಡಿತ

image_
ರಘು ಸಂವೇದನ್
9902191549

ಪ್ರತಿ ತಿಂಗಳು ನೇಗಿಲ ಮಿಡಿತ ಮಾಸ ಪತ್ರಿಕೆ ತಪ್ಪದೇ ಓದುತ್ತೇನೆ. ತುಂಬಾ ಚೆನ್ನಾಗಿ ಬರುತ್ತಿದೆ. ಸಂಪಾದಕರು ಮತ್ತು ಅವರ ತಂಡದ ಕೆಲಸ ಶ್ಲಾಘನಾರ್ಹ. ಪತ್ರಿಕೆಯಲ್ಲಿನ ಲೇಖನಗಳನ್ನು ಓದಿ ರೈತರಿಗೆ ನನ್ನಿಂದ ಸಾಧ್ಯವಾದಷ್ಟು ಮಾಹಿತಿ ನೀಡುವುದಕ್ಕೆ ನಾನು ಕೂಡ ಲೇಖನಗಳನ್ನು ಕಳುಹಿಸುತ್ತೇನೆ. ಮುಂದೆಯು ಪತ್ರಿಕೆ ಹೀಗೆ ಮೂಡಿಬರಲಿ ಹಾಗೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ

--ಡಾ. ಸಂತೋಷ್, ಯು. ಎನ್., ರಾಯಚೂರು


ನೇಗಿಲ ಮಿಡಿತ ಮಾಸಿಕ ನಿರಂತರವಾಗಿ ಪ್ರಕಟವಾಗುತ್ತಿರುವುದು ಬಹಳ ಸಂತಸದ ವಿಷಯ. ಈ ಪತ್ರಿಕೆಯ ವಿನ್ಯಾಸ ಮತ್ತು ಲೇಖನಗಳಲ್ಲಿನ ವರ್ಣಚಿತ್ರಗಳನ್ನು ಅದ್ಬುತವಾಗಿ ಮೂಡಿಸಲಾಗಿದೆ. ಇಲ್ಲಿ ಪ್ರಕಟವಾಗುತ್ತಿರುವ ಲೇಖನಗಳು ರೈತರಿಗೇ ಅಲ್ಲದೆ, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಸಹ ಓದುವ ಹಾಗಿದೆ. ಲೇಖನಗಳು ಸರಳ ಭಾಷೆಯಲ್ಲಿ ಇರುವುದರಿಂದ ಎಲ್ಲ್ಲರಿಗೂ ಅರ್ಥವಾಗುವ ರೀತಿಯಲ್ಲಿವೆ. ಅದರಲ್ಲೂ ವಿಶೇಷ ಸಂಚಿಕೆಗಳಿಂದ ನಿರ್ಧಿಷ್ಟ ವಿಷಯದ ಬಗ್ಗೆ ಪರಿಚಯ ಮತ್ತು ತಂತ್ರಜ್ಞಾನಗಳು ಒಂದೇ ಸೂರಿನಡಿ ದೊರೆಯುತ್ತವೆ. ನಮ್ಮಲ್ಲಿ ಅಭಿವೃದ್ದಿ ಪಡಿಸಲಾದ ಹಲವು ತಂತ್ರಜ್ಞಾನಗಳು ರೈತರ ವರೆಗೂ ತಲುಪಲಿ ಮತ್ತು ಇದರಿಂದ ಹೆಚ್ಛಿನ ಲಾಭವಾಗಲಿ ಎಂಬುದೆ ನನ್ನ ಹರಕೆ. ಈ ನೇಗಿಲ ಮಿಡಿತ ಬಹಳಷ್ಟು ರೈತರ ಮನ ಮಿಡಿತವಾಗಲಿ

--ಹರೀಶ, ಸಿ. ಬಿ., ವಿಜ್ಞಾನಿ (ತೋಟಗಾರಿಕೆ), ಆಜ್ಮೀರ್, ರಾಜಸ್ಥಾನ


ಇವತ್ತಿನ ಈ ಸಂದರ್ಭಕ್ಕೆ ರೈತರಿಗೆ ಕೃಷಿ ಬಗ್ಗೆ ಸಮಗ್ರ ಮಾಹಿತಿವುಳ್ಳ ಪತ್ರಿಕೆಯ ಅಗತ್ಯ ಇದೆ. ಅದರಂತೆಯೇ ಶಿವಮೊಗ್ಗ ವಿಶ್ವವಿದ್ಯಾಲಯ ಈ ಕಾರ್ಯ ಕೈಗೆತ್ತಿಕೊಂಡಿರುವುದು ಉತ್ತಮ ಕೆಲಸ. ಅದಕ್ಕೆ ಮೊದಲು ನನ್ನ ಅಭಿನಂದನೆ. ಇನ್ನು ಪತ್ರಿಕೆಯ ಬಗ್ಗೆ ಹೇಳಬೇಕೆಂದರೆ ಪತ್ರಿಕೆಯ ಗುಣಮಟ್ಟ, ಸಚಿತ್ರ ಲೇಖನಗಳು ಮತ್ತು ಬಹುವರ್ಣದಲ್ಲಿ ಮುದ್ರಿತವಾಗಿರುವುದು ತುಂಬಾ ಚೆನ್ನಾಗಿದೆ. ಆದಷ್ಟು ರಾಜ್ಯದ ಎಲ್ಲಾ ಭಾಗದ ರೈತರಿಗೆ ಇದು ತಲುಪಿದರೆ ತುಂಬಾ ಉಪಯೋಗವಾಗುವುದು. ಪತ್ರಿಕೆಯ ವಿನ್ಯಾಸ ಇನ್ನೂ ಸ್ವಲ್ಪ ಆಕರ್ಷಕ ಮಾಡಬಹುದೆನಿಸುತ್ತದೆ

--ಡಾ. ನಾ. ಸೋಮೇಶ್ವರ, ವೈದ್ಯರು ಹಾಗೂ ವಿಜ್ಞಾನಸಾಹಿತಿ, ಬೆಂಗಳೂರು


ನಾನು ನಿಮ್ಮ ಸಂಸ್ಥೆಯಿಂದ ಹೊರಡಿಸುವ ಕೃಷಿ ಪತ್ರಿಕೆಯಾದ ’ನೇಗಿಲ ಮಿಡಿತ’ ಮಾಸ ಪತ್ರಿಕೆಯ ಚಂದಾದಾರನಾಗಿದ್ದು, ಪತ್ರಿಕೆಯು ರೈತರಿಗೆ ಉಪಯುಕ್ತವಾಗಿದ್ದು, ಪ್ರತಿ ತಿಂಗಳ ಪತ್ರಿಕೆಯಲ್ಲಿ ಪ್ರಗತಿ ಪರ ಕೃಷಿಕರ ಯಶೋಗಾಥೆಯನ್ನು ಪ್ರಕಟಿಸುವುದು ಬೇರೆ ರೈತರಿಗೆ ಮಾರ್ಗದರ್ಶಿಯಾಗಿರುತ್ತದೆ

--ಎಂ. ತಿಮ್ಮದಾಸಪ್ಪ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ


ನೇಗಿಲ ಮಿಡಿತವನ್ನು ತಿಂಗಳು ತಪ್ಪದೆ ಓದುತ್ತೇವೆ. ಡಾ.ಶಶಿಧರ ಅವರ ಸಂಪಾದಕೀಯ ಅರ್ಥಪೂರ್ಣ ಹಾಗು ಸಮಯೋಚಿತವಾಗಿದ್ದು , ಇಡೀ ಸಂಚಿಕೆಯ ಕೇಂದ್ರಬಿಂದು. ಜನವರಿ ಸಂಚಿಕೆಯ ’ಕಾಣೆಯಾಗುತ್ತಿರುವ ಕಣ ಸಂಸ್ಕೃತಿ’ ಇದಕ್ಕೆ ಒಂದು ಉದಾಹರಣೆ. ಇದಲ್ಲದೆ ಡಾ.ಪ್ರಭು ಅವರ ಛಾಯಾಚಿತ್ರಗಳು ಅದರೊಂದಿಗಿನ ಲೇಖನಗಳು ಉತ್ಕೃಷ್ಟವಾಗಿರುತ್ತವೆ. ದೂರದ ದೇಶದಲ್ಲಿದ್ದವರಿಗೆ ’ನೇಗಿಲ ಮಿಡಿತ’, ನಿಜಕ್ಕೂ ನಮ್ಮ ನಾಡಿನ ಕೃಷಿಕ್ಷೇತ್ರಕ್ಕೊಂದು ಬೆಳಕಿನ ಕಿಂಡಿ. ನೇಗಿಲ ಮಿಡಿತದ ಎಲ್ಲಾ ಲೇಖಕರಿಗೆ ಮತ್ತು ಅಂಕಣಕಾರರಿಗೆ ವಂದನೆಗಳು, ಹಾಗೇ .... ಕುಂಚ ಅವರ ಪದಬಂಧ ಚಿಕ್ಕದು ಮತ್ತು ಚೊಕ್ಕದಾಗಿದೆ !ನೇಗಿಲ ಮಿಡಿತ ಇನ್ನೂ ಬೆಳೆಯಲಿ

--ಶಿವಶಂಕರ್ ಹಿತ್ತಲಮನಿ, ಕ್ಯುಪರ್ಟಿನೊ, ಕ್ಯಾಲಿಫೋರ್ನಿಯ, ಅಮೇರಿಕ