ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಸೀತಾಫಲ

ವಿನಯ್, ಜಿ.ಎಮ್
9591195573
1

ಹಲವು ಔಷಧೀಯ ಗುಣಗಳಿರುವ, ರುಚಿಕರ ಪ್ರೂಟ್ಸಲಾಡ್ಗೆ ಬಹು ಬೇಡಿಕೆಯಲ್ಲಿರುವ, ಸ್ವಾದಿಷ್ಟ ಹಣ್ಣು. ನಮ್ಮ ರಾಜ್ಯದ ಚಿತ್ರದುರ್ಗ, ರಾಯಚೂರು, ಬಿಜಾಪುರ, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

34
 • ಮಣ್ಣು : ನೀರು ಬಸಿಯುವ ಬಿರುಸಾದ ಮರಳು ಮಿಶ್ರಿತ ಮಣ್ಣು ಉತ್ತಮ ಇತರೆ ಮಣ್ಣುಗಳಲ್ಲಿ ಬೆಳೆಯಬಹುದು. ಹೆಚ್ಚು ಮಳೆ ಬಾರದ ಯಾವುದೇ ಒಣ ವಾತಾವರಣದಲ್ಲಿ ಬೆಳೆಯಬಹುದು.
 • ನಾಟಿಕಾಲ:-ಜೂನ್-ಜುಲೈ ತಿಂಗಳು (ಮುಂಗಾರಿನಲ್ಲಿ) ನಾಟಿಗೆ ಅತಿ ಸೂಕ್ತವಾಗಿದೆ. ನೀರಿರುವಲ್ಲಿ ಎಲ್ಲಾ ಕಾಲದ ಆಗಬಹುದು
 • ಸಂಕರಣ ತಳಿ : ಅರ್ಕ ಸಹನ ತಳಿಗಳು: ಬಾಲನಗರ, ಮೆಮೊಥ, ಕೆಂಪು ಸೀತಾಫಲ, ಆಫ್ರಿಕನ್ ಪ್ರೆಡ್, ಬ್ರೀಟಿಷ್ ಜೆನೆವ, ವಾಷಿಂಗ್ಟನ್, ಎಪಿಕೆ-೧ ಹಾಗು ಬಾರ್ಬಡಸ್ ತಳಿಗಳು ಮುಖ್ಯವಾದವುಗಳು.

  89

  ಬೇಸಾಯ ಕ್ರಮಗಳು

 • ಅಂತರ: ೪.೫ ಘಿ ೪.೫ ಮೀಟರ್
 • ಗುಣಿ: ೪೫ ಘಿ ೪೫ ಘಿ ೪೫ ಸೆಂ. ಮೀ.
 • ಗುಣಿ ತುಂಬುವಾಗ ಮೇಲಿನ ಪದರದ ಮಣ್ಣು, ಕೊಟ್ಟಿಗೆ ಗೊಬ್ಬರ ಬೇವಿನ ಹಿಂಡಿ ಬೆರಸಿ ತುಂಬಬೇಕು.
 • ಬೇಸಾಯ:

 • ಮೊದಲು ೩ ವರ್ಷದ ನಂತರ ಮರಗಳನ್ನು ಚಾಟನಿ ಮಾಡುವುದು ಸೂಕ್ತ
 • 16
 • ಮಳೆಗಾಲದ ಪ್ರಾರಂಭದಲ್ಲಿ ಪಾತಿಗಳನ್ನು ತೆಗೆದು ಗೊಬ್ಬರ ಹಾಕಬೇಕು ನಂತರ ಕಳೆಗಳನ್ನು ತೆಗೆಯುತ್ತಿರಬೇಕು.
 • ಪೋಷಕಾಂಶಗಳು: ಪ್ರತೀ ಗಿಡಕ್ಕೆ ಕೊಟ್ಟಿಗೆ ಗೊಬ್ಬರ ೨೫ ಕಿ. ಗ್ರಾಂ , ೨೫೦:೧೨೫:೧೨೫ ಗ್ರಾಂ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ (೨ ಸಮಭಾಗ)
 • ಕೊಯ್ಲು ಮತ್ತು ಇಳುವರಿ: ೪-೫ ವರ್ಷಗಳಲ್ಲಿ ಹಣ್ಣುಗಳನ್ನು ಕೊಡುತ್ತದೆ. ಆಗಸ್ಟ್-ಅಕ್ಟೋಬರ್ಗಳಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಹಣ್ಣುಗಳು ತಿಳಿಹಸಿರಿನಿಂದ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲುಮಾಡಬೇಕು. ಇಳುವರಿಯು ತಳಿಗಳ ಮೇಲೆ ಅವಲಂಬಿತವಾಗಿರುತ್ತದೆ, ಸಾಮಾನ್ಯವಾಗಿ ಪ್ರತಿ ಹೆಕ್ಟೇರಿಗೆ ೮-೧೦ ಟನ್ ಇಳುವರಿ ದೊರೆಯುತ್ತದೆ, ಸಂಸ್ಕರಣೆ: ಹಣ್ಣುಗಳನ್ನು ಶೇ. ೮ರಷ್ಟು ಮೇಣದಲ್ಲಿ ಅದ್ದುವುದರಿಂದ ಹಣ್ಣಿನ ಸಂಗ್ರಹಣೆಯನ್ನು ೭ ದಿನಗಳವರೆಗೆ ಹೆಚ್ಚಿಸಬಹುದಾಗಿದೆ, ಇದು ಸಾಗಾಣಿಕೆ ಮಾಡಲು ಬಹು ಮುಖ್ಯವಾಗಿದೆ.

 • ರೋಗ ಮತ್ತು ಕೀಟ: ಭಾದೆ ಕಡಿಮೆ. ಕೆಲವು ಕೀಟ ರೋಗ ಕಾಣಬರುತ್ತವೆ
 • ಸೀತಾಫಲದಲ್ಲಿ ಕೃತಕ ಪರಾಗಸ್ಪರ್ಶ

  222324

  ಬೆಂಗಳೂರಿನ ಭಾರತೀಯ ತೊಟಗಾರಿಕಾ ಸಂಸ್ಥೆಯು ಅರ್ಕ ಸಹನ ಎಂಬ ಸಂಕರಣ ತಳಿಯನ್ನು ಅಭಿವೃದ್ದಿ ಪಡಿಸಿದೆ. ಈ ತಳಿಯು ಐಲ್ಯಾಂಡ್ ಜೆಮ್ (ಅನೊನ ಅತಿಮೊಯ) ಮತ್ತು ಮೆಮೊಥ (ಅನೊನ ಸ್ಕ್ವಮೋಸ) ತಳಿಗಳಿಂದ ಸಂಕರಣಗೊಂಡು ಅಭಿವೃದ್ದಿಯಾಗಿದೆ. ಈ ತಳಿಗೆ ಹಣ್ಣು ಕಚ್ಚಲು ಪ್ರಮುಖವಾಗಿ ಕೃತಕ ಪರಾಗಸ್ಪರ್ಶ ಮಾಡಬೇಕಿದೆ, ಅದುದರಿಂದ ಪರಾಗರೇಣುಗಳ ಮೂಲವಾಗಿ ಬಾಲನಗರ ತಳಿಯನ್ನು ಅರ್ಕ ಸಹನ ತಳಿಯನ್ನು ತೋಟದ ಬದುಗಳಲ್ಲಿ ಬೆಳೆಸುವುದು ಸೂಕ್ತವಾಗಿದೆ.

  2627

  ಪರಾಗಸ್ಪರ್ಶವನ್ನು ಬೆಳಿಗ್ಗೆ ೧೦:೦೦ಘಂಟೆಯೊಳಗೆ ಮಾಡುವುದು ಒಳ್ಳೆಯದು, ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ, ಪೇಂಟ್ ಬ್ರಷ್ (ನಂ. ೨/೩) ಹಾಗು ಪ್ಲಾಸ್ಟಿಕ್ ಲೋಟ.

  ಪರಾಗಸ್ಪರ್ಶ ಮಾಡುವ ವಿಧಾನ:-ಮೊದಲು ಬೆಳಗ್ಗೆ ೬-೭:೩೦ ರ ವರೆಗೆ ಬಾಲನಗರ ತಳಿಗಳಿಂದ ನಿನ್ನೆಯೇ ತುಂಬಿ ಅರಳಿದ ಹೊವುಗಳನ್ನು ಆಯ್ಕೆಮಾಡಿ ಅವುಗಳಿಂದ ಪರಾಗರೇಣುಗಳನ್ನು ಆಯ್ದುಕೊಂಡು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಳ್ಳಬೇಕು. ನಂತರ ಅರ್ಕ ಸಹನ ತಳಿಯ ಅರಳುತ್ತಿರುವ ಹೂವುಗಳಿಗೆ ಬ್ರಷ್ನಿಂದ ಲೋಟದಲ್ಲಿರುವ ಪರಾಗರೇಣುಗಳನ್ನು ತೆಗೆದು ಬೆಳಗ್ಗೆ ೧೦ ಘಂಟೆಯೊಳಗೆ ಸೇರಿಸಬೇಕು. ಹೀಗೆ ಹೂವು ಬಿಡುವ ಕಾಲದಲ್ಲಿ ೨೦-೩೦ ದಿನ ಪರಾಗಸ್ಪರ್ಶವನ್ನು ಬೆಳಿಗ್ಗೆ ೧೦:೦೦ ಘಂಟೆಯೊಳಗೆ ಮಾಡಬೇಕು. ೫ ವರ್ಷದ ಒಂದು ಗಿಡಕ್ಕೆ ೪೦-೫೦ ಹೊವುಗಳಿಗೆ ಪರಾಗಸ್ಪರ್ಶ ಮಾಡಬಹುದು, ಹೀಗೆಯೇ ಗಿಡಗಳ ವಯಸ್ಸು ಹೆಚ್ಚಾದಂತೇ ಪರಾಗಸ್ಪರ್ಶ ಮಾಡುವ ಹೊವುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಪರಾಗಸ್ಪರ್ಶ ಮಾಡಿದ ಹೂವುಗಳು ೧೦-೧೫ ದಿನಗಳಲ್ಲಿ ಹಣ್ಣುಗಳನ್ನು ಕಚ್ಚುತ್ತವೆ, ೪ ತಿಂಗಳ ನಂತರ ಆಗಸ್ಟ್-ಅಕ್ಟೋಬರ್ ಕೊಯ್ಲಿಗೆ ಬರುತ್ತದೆ ಮತ್ತು ಇದರ ಹಣ್ಣಿನ ತೂಕ ೫೦೦-೭೦೦ ಗ್ರಾಂ. ಹೊಂದಿದ್ದು ದೊಡ್ಡದಾಗಿರುತ್ತವೆ, ಇದರ ಹಣ್ಣುಗಳು ತಿಳಿಹಸಿರು ಬಣ್ಣದಿಂದ ಕೂಡಿರುತ್ತದೆ, ತಿರುಳು ತುಂಬ ರುಚಿಕರವಾಗಿದ್ದು ಇದರಲ್ಲಿನ ಸಿಹಿ ೩೨೦ ಬ್ರಿಕ್ಸ್, ೨೭.೮ ಶೇ. ಸಕ್ಕರೆ ಇದ್ದು ತುಂಬ ಕಡಿಮೆ ಬೀಜಗಳನ್ನು (೯/೧೦೦ ಗ್ರಾಂ.) ಹೊಂದಿರುತ್ತದೆ. ಈ ಹಣ್ಣಿನ ಸಿಪ್ಪೆಯು ದಪ್ಪವಾಗಿದ್ದು ಸಾಗಾಣಿಕೆಗೆ ತುಂಬ ಉಪಯುಕ್ತವಾಗಿವೆ, ಹಾಗೆಯೇ ಇದರ ಹೊರಮೈ ಮೇಣದ ತರಹ ಇದ್ದು ಹಿಟ್ಟುತಿಗಣೆ ಕೀಟಗಳ ಹಾವಳಿಯನ್ನು ತಡೆಯುತ್ತದೆ. ಈ ತಳಿಯು ಬೇರೆ ತಳಿಗಳಿಗಿಂತ ವಿಭಿನ್ನವಾಗಿದ್ದು, ರೈತರು ಅರ್ಕ ಸಹನ ತಳಿಯನ್ನು ಬೆಳೆಯುವುದರಿಂದ ಅಧಿಕ ಲಾಭ ಗಳಿಸಬಹುದಾಗಿದೆ.