ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಮೀನಿನ ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಾಂಶಗಳು

ಡಾ. ಎಸ್. ವಿಜಯಕುಮಾರ,
9141885905

ಜೀವಸತ್ವಗಳು ಮತ್ತು ಖನಿಜಾಂಶಗಳು

ನಮ್ಮದೇಹದ ಸಹಜಆರೋಗ್ಯಕ್ಕೆ, ಬೆಳವಣಿಗೆಗೆ ಮತ್ತು ಸಂತಾನಕಾರ್ಯ ಚಟುವಟಿಕೆಗಳಿಗೆ ಅವಶ್ಯವಾದ (ನೀರು ಮತ್ತುಕೊಬ್ಬಿನಲ್ಲಿಕರಗುವ-ಎರಡೂ ತೆರನಾದ) ಜೀವಸತ್ವಗಳು ಮೀನಿನಲ್ಲಿಅಡಕವಾಗಿವೆ (ಮೀನಿನ ಎಣ್ಣೆಯಲ್ಲಿ ಜೀವಸತ್ವ ’ಂ’ ಮತ್ತು ’ಆ’ ಗಳು ಅಧಿಕವಾಗಿವೆ). ನೀರಿನಲ್ಲಿ ಕರಗುವ ಃ ಸಮುದಾಯದ ಜೀವಸತ್ವಗಳು ಮತ್ತು ನಯಾಸಿನ್ಗಳು ಮೀನಿನಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ. ಜೀವಸತ್ವಗಳ ಕೊರತೆಯಿಂದ ನರಳುತ್ತಿರುವವರು ದಿನಾಲೂ ಮೀನು ಸೇವಿಸುವುದರಿಂದ ಆ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಮೀನಿನ ಲಿವರ್ ಎಣ್ಣೆಯಲ್ಲಿ ಈ ಜೀವಸತ್ವಗಳು ಅಧಿಕವಾಗಿ ಶೇಖರ ಗೊಂಡಿರುವುದರಿಂದ, ಅದರ ಸೇವನೆಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತದೆ. ಕಾಡ್ ಮತ್ತು ಶಾರ್ಕ ಲಿವರ್ ಎಣ್ಣೆಗಳು ಈ ದೃಷ್ಟಿಯಲ್ಲಿ ಗಮನಸೆಳೆಯುತ್ತವೆ.

ವಿವಿಧ ಆಹಾರ ವಸ್ತುಗಳಲ್ಲಿರುವ ಜೀವಸತ್ವ D ಪ್ರಮಾಣ

5

ಜೀವಸತ್ವ D (ಅಂತಾರಾಷ್ಟೀಯ ಮೂಲಮಾನ (i. u.)ಪ್ರತಿ ೧೦೦ ಗ್ರಾಂ ಗೆ)*

 • ಹಾಲು-1-4
 • ಬೆಣ್ಣೆ-30-100,
 • ಮೊಟ್ಟೆ (ಇಡೀ ಮೊಟ್ಟೆ) 50-60
 • ಮೊಟ್ಟೆ (ಹಳದಿ ಭಾಗ)150-400
 • ಕೊಬ್ಬುಯುಕ್ತ ಮೀನು-200-1800
 • ಶಾರ್ಕ್ಲಿವರ್ಎಣ್ಣೆ-1300-5000
 • ಕಾಡ್ಲಿವರ್ಎಣ್ಣೆ-8000-30000
 • ಹ್ಯಾಲಿಬಟ್ ಮೀನಿನ ಲಿವರ್ಎಣ್ಣೆ-20000-40000
 • ಸಸ್ಯಮೂಲ ಆಹಾರ-’ಇಲ್ಲವೇಇಲ್ಲ’
 • ಪ್ರೋಟೀನ್, ಕೊಬ್ಬು ಮತ್ತು ಜೀವಸತ್ವಗಳಷ್ಟೇ ಅಲ್ಲದೆ, ಮೀನಿನಲ್ಲಿ ಹಲವು ಖನಿಜಗಳು ಅಡಕವಾಗಿವೆ. ಉದಾಹರಣೆಗೆ, ಸಮುದ್ರ ಮೀನುಗಳಲ್ಲಿ ಅಧಿಕ ಪ್ರಮಾಣದಲ್ಲಿ ದೊರಕುವ ಐಯೋಡಿನ್, ಕಬ್ಬಿಣ, ಪ್ಲೂರಿನ್ ಮುಂತಾದವು. ಐಯೋಡಿನ್ ಥೈರ್ಯಾಿಡ್ ಗ್ರಂಥಿಯ ಚಟುವಟಿಕೆಗೆ ಬಹಳ ಅಗತ್ಯ. ಹೀಗಾಗಿ, ಐಯೋಡಿನ್ ಕೊರತೆಯಿಂದ ಉಂಟಾಗುವ ’ಗಾಯಿಟರ್’ ಎಂಬ ಸಾಮಾನ್ಯರೋಗವು ಸಮುದ್ರತೀರದಲ್ಲಿ ವಾಸಿಸುವ ಜನರಲ್ಲಿತುಂಬಾ ವಿರಳ. ಜೀವಕೋಶಗಳ ಚಟುವಟಿಕೆಗಳಿಗೆ ಅಗತ್ಯವಾದ - ಸೋಡಿಯಂ ಮತ್ತು ಪೊಟ್ಯಾಶಿಯಂ, ಕಿಣ್ವಗಳ ರಾಸಾಯನಿಕಕ್ರಿಯೆಗೆ ಬೇಕಾದ ಮೆಗ್ನೇಷಿಯಂ; ಹಿಮೋಗ್ಲೋಬಿನ್ ಉತ್ಪತ್ತಿಗೆ ಅವಶ್ಯವಾದ ಕಬ್ಬಿಣ ಹಾಗೂ ತಾಮ್ರದ ಅಂಶ, ಮೂಳೆಗಳ ಬೆಳವಣಿಗೆ ಬೇಕಾದ ಕ್ಯಾಲ್ಸಿಯಂ, ಉತ್ತಮ ಹುಲ್ಲುಗಳ ಬೆಳವಣಿಗೆಗೆ ಬೇಕಾದ ಫ್ಲೂರಿನ್ ಹೀಗೆ ಹಲವು ಖನಿಜಾಂಶಗಳನ್ನು ಮೀನಿನ ಬಳಕೆಯಿಂದ ಪಡೆದುಕೊಳ್ಳಬಹುದು, ಅಲ್ಲದೇ ಆರೋಗ್ಯಕ್ಕೆ ಸೂಕ್ಷ್ಮ ಪ್ರಮಾಣದಲ್ಲಿ ಬೇಕಿರುವ ಮೂಲ ವಸ್ತಗಳಾದ ಸತುವು ಮ್ಯಾಂಗನೀಸ್, ಜಿಂಕ್, ಕೊಬಾಲ್ಟ್, ಮಾಲಿಬ್ಡಿನಂ, ಕ್ರೋಮಿಯಂ ಮತ್ತು ವ್ಯಾಸೇಡಿಯಂಗಳೂ ಮೀನಿನಲ್ಲಿಅಧಿಕ ಪ್ರಮಾಣದಲ್ಲಿ ದೊರಕುತ್ತವೆ. ಕಾಡ್ ಲಿವರ್ ಎಣ್ಣೆಯಲ್ಲಿ ೩೦೦ ರಿಂದ ೧೮೦೦ mg ಹಾಗೂ ಶಾರ್ಕ್ ಲಿವರ್ ಎಣ್ಣೆಯಲ್ಲಿ ೨೫೦೦ ರಿಂದ ೩೬೦೦ mg (ಮೈಕ್ರೋ ಗ್ರಾಂ) ಜೀವಸತ್ವ

  ಪಶ್ಚಿಮ ಬಂಗಾಳದಲ್ಲಿ ರಕ್ತ ಹೀನತೆಯಿಂದ ನರಳುವ ಗರ್ಭಿಣಿ ಹೆಂಗಸರಿಗೆ ವೈದ್ಯರು ಗಾಳಿ ಉಸಿರಾಡುವ ಮೀನುಗಳನ್ನ (ಮಾಗುರ್, ಸಿಂಘಿ ಇತ್ಯಾದಿ) ಪ್ರತಿನಿತ್ಯ ಆಹಾರದಲ್ಲಿ ಬಳಸುವಂತೆ ಸಲಹೆ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಈ ಮೀನುಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವ ಕಬ್ಬಿಣ ಮತ್ತು ತಾಮ್ರದ ಅಂಶಗಳು.

  ಇದೇ ರೀತಿ, ಭಾರತೀಯ ಗೆಂಡೆ ಮೀನು-’ರೋಹು’ವಿನ ತಲೆಯನ್ನು ದೃಷ್ಟಿದೋಷದಿಂದ ನರಳುತ್ತಿರುವವರು ಬಳಸುವಂತೆ ತಿಳಿಸುತ್ತಾರೆ.ಈ ಮೀನಿನ ತಲೆಯ ಭಾಗದ ಮಾಂಸದಲ್ಲಿ ಫಾಸ್ಪೋಪ್ರೋಟೀನ್ ಅಂಶ ಜಾಸ್ತಿ ಇರುವುದರಿದಅದರ ಸತತ ಬಳಕೆ ಕಣ್ಣಿನ ದೃಷ್ಟಿದೋಷಕ್ಕೆ ಉತ್ತಮ ಮದ್ದು ಎನಿಸಿದೆ. ಚಿಕ್ಕಗಾತ್ರದ ಮೀನುಗಳನ್ನು ಅವುಗಳ ಮೂಳೆ ಸಹಿತವಾಗಿ ಇಡೀ ತಿನ್ನುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದ ಪೂರೈಕೆಯಾಗುತ್ತದೆ.