ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ವಿಭಿನ್ನ ಚಿಂತನೆ

ಹೊಸ ಆಯಾಮಕ್ಕೆ ನಾಂದಿ

image_
ಬಿ. ಎಮ್. ಚಿತ್ತಾಪೂರ
9448821755

ಕರ್ನಾಟಕದಲ್ಲಿ ಅಡಿಕೆಗೊನೆಗೆ ಬರುವ ಕೊಳೆ ರೋಗದಿಂದ ರಕ್ಷಿಸಲು ವಿಜ್ಞಾನಿಯೊಬ್ಬ ಗೊನೆಗಳನ್ನು ಪ್ಲಾಸ್ಟಿಕ್ ಚೀಲಗಳಿಂದ ಮುಚ್ಚಬಹುದಾದ ಸರಳ ಮಾರ್ಗವೊಂದನ್ನು ಕಂಡುಹಿಡಿದ. ಅಂತೆಯೇ ಬೆಳೆಗಳಲ್ಲಿ ನಾಟಿ ಬೇಸಾಯ ಸಾಮಾನ್ಯವಾದರೂ ತೊಗರಿಯಲ್ಲಿ ನಾಟಿ ಬೇಸಾಯ ವಿನೂತನ ವಿಸ್ಮಯಕಾರಿ ಬೆಳವಣಿಗೆ. ಎಕರೆಗೆ ೫-೬ ಕ್ವಿಂಟಾಲ್ ಇಳುವರಿ ಬರುವಲ್ಲಿ ೧೫-೧೮ ಕ್ವಿಂಟಾಲ್ ಇಳುವರಿಯನ್ನು ನೀರಾವರಿಯಲ್ಲಿ ರೈತರು ಪಡೆದಿದ್ದಾರೆ. ಹಾಗೆಯೇ ಹಾವೇರಿ ಭಾಗದಲ್ಲಿ ಬಿಟಿ ಹತ್ತಿಯಲ್ಲಿ ನಾಟಿ ಬೇಸಾಯ ಪದ್ಧತಿಯನ್ನು ಅನುಸರಿಸಿದ ವರದಿಗಳಿವೆ ಮತ್ತು ಈ ಪದ್ಧತಿಯನ್ನು ಇಂದು ವಿಶ್ವವಿದ್ಯಾಲಯದಿಂದ ಶಿಫಾರಸ್ಸು ಕೂಡ ಮಾಡಲಾಗಿದೆ. ಬೆಳಗಾವಿಯ ಚಿಕ್ಕೋಡಿ ರಾಯಭಾಗ ಭಾಗದಲ್ಲಿ ಕೇವಲ ೫ ಕಿ.ಗ್ರಾಂ ಬೀಜ ಬಳಸಿ ಟ್ರೇಯಲ್ಲಿ ಸಸಿ ತಯಾರಿಸಿ ಸೋಯಾ ಅವರೆಯನ್ನು ೨ ಅಡಿ ಘಿ ೧ ಅಡಿ ಅಂತರದಲ್ಲಿ ನಾಟಿಮಾಡಿ ಎಕರೆಗೆ ೧೫ ಕ್ವಿಂಟಾಲ್ವರೆಗೂ ಮಳೆಯಾಶ್ರಯದಲ್ಲಿ ಇಳುವರಿ ಪಡೆಯುತ್ತಿದ್ದಾರಂತೆ. ಬೀಜದ ಉಳಿತಾಯ ದೊಂದಿಗೆ ಉತ್ತಮ ಇಳುವರಿ ಬೇರೆ.

ಧನ್ಯಪ್ರಸಾದರು ಪ್ರಜಾವಾಣಿಯ ಆಗಸ್ಟ್ ೩ರ ಕೃಷಿಕಣಜ ಸಂಚಿಕೆಯಲ್ಲಿ ನಾಟಿ ಕಬ್ಬಿನ ಬೇಸಾಯ ಮತ್ತು ಭತ್ತದಲ್ಲಿ ಮಡಗಾಸ್ಕರ ನಾಟಿ ಪದ್ಧತಿಯ ಬಗ್ಗೆ ವಿವರಿಸಿದ್ದಾರೆ. ಕಬ್ಬಿನ ಜಲ್ಲೆಯಿಂದ ಇಂಗ್ಲೀಷ್ ಸಿ ಆಕಾರದಲ್ಲಿ ಅರ್ಧ ಚಂದ್ರಾಕಾರದ ಗಿಣ್ಣುಗಳನ್ನು ತೆಗೆದು ತೆಂಗಿನ ನಾರು ಪುಡಿತುಂಬಿದ ಟ್ರೇಗಳಲ್ಲಿ ಬಿತ್ತನೆ ಮಾಡಿ ಒಂದು ತಿಂಗಳ (೨೫ ರಿಂದ ೩೫ ದಿನಗಳಲ್ಲಿ) ನಂತರ ಮುಖ್ಯ ಕ್ಷೇತ್ರದಲ್ಲಿ ೪ ಅಡಿ ಘಿ ೨ ಅಡಿ ಅಥವಾ ೫ ಅಡಿ ಘಿ ೨ ಅಡಿ ಅಂತರದಲ್ಲಿ ನಾಟಿ ಮಾಡಬಹುದು. ಎಕರೆಗೆ ೫-೬ ಸಾವಿರ ಸಸಿಗಳು ಸಾಕು. ಈ ಕ್ರಮಕ್ಕೆ ಬಿತ್ತನೆಗೆ ಬೇಕಾದ ಬೀಜದ (ಕಬ್ಬಿನ ಜಲ್ಲೆಗಳ) ಅವಶ್ಯಕತೆಯೂ ಕಡಿಮೆ. ತಳಮಟ್ಟದಲ್ಲಿ ಆರು ಉಪಗಿಣ್ಣುಗಳು ಹುಟ್ಟುತ್ತವೆ. ಈ ಉಪಗಿಣ್ಣುಗಳು ೪೫ ದಿನಗಳ ನಂತರ ಕಾಣುತ್ತವೆ. ೧೦ ದಿನಗಳ ನಂತರ ತೆಂಡೆಗಳು ಹೊಡೆಯಲು ಪ್ರಾರಂಭಿಸುತ್ತವೆ. ಸಸಿಯೊಂದಕ್ಕೆ ಸುಮಾರು ೩೫ ತೆಂಡೆಗಳು ಬರುತ್ತವೆ. ಮತ್ತು ೭ ರಿಂದ ೮ ಟನ್ ಇಳುವರಿಯೂ ಹೆಚ್ಚು.

3