ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ವನೌಷಧಿ

ಕಕ್ಕೆಗಿಡ

1

ಇದರ ಪಂಚಮೂಲಗಳೂ ವೈದ್ಯಕೀಯ ಚಿಕಿತ್ಸೆಗೆ ಬಂದರೂ ಕಾಯಿಯೊಳಗಿನ ಪೊಪ್ಪನ್ನೇ ಹೆಚ್ಚಾಗಿ ಉಪಯೋಗಿಸುವುದುಂಟು; ಈ ಪೊಪ್ಪು ವಿರೇಚನಕಾರಿ, ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ವಾಂತಿ, ಭೆದಿಯನ್ನುಂಟು ಮಾಡುತ್ತದೆ. ಇದನ್ನು ಸೋನಾಮುಖಿಯೊಂದಿಗೆ ಅಥವಾ ಅಳಲೇಕಾಯಿ ಚೂರ್ಣದೊಂದಿಗೆ ಅಲ್ಪಪ್ರಮಾಣದಲ್ಲಿ ಬೆರೆಸಿ ಉಪಯೋಗಿಸುವ ರೂಢಿಯಿದೆ, ಹೊತ್ತಿಗೆ ಕಾಲು ತೊಲೆಯಿಂದ ಅರ್ಧ ತೊಲೆಯವರೆಗೆ ಬಿಸಿನೀರಿನಲ್ಲಿ ಸೇವಿಸಬೇಕು. ಜೊತೆಗೆ ಸೋನಮುಖಿಚೂರ್ಣ ಅಥವಾ ಅಳಲೇಕಾಯಿಚೂರ್ಣ ಬೆರೆಸಲು ಹೇಳಿದೆ.

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಕಕ್ಕೆಗಿಡ/ಅರಗ್ವಧ, ರಾಜವೃಕ್ಷ,/ಅಮಲತಾಸ್, ಧನ್/ಕೋರೈಕಾಯ್/ರೆಲ್ಲಕಾಯಾ/The Indian

ಬೇಟೆಗಿಡ/ಶಮ್ಯಾಕ್, ಕೃತಮಾಲ್/ಬಹೇಡಾ, ಸೋನಾಲು/ಕೋರೈಕಕಾಯ/ರೇಲಚೆಟ್ಟು/Ladurnum

-/ಸುವರ್ಣಕ/ಕಿರಮಾಲಾ/-/ರೇಲ್ಕಾಯಲು/Pudding,pipe Tree

7