ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಆ್ಯಪ್ ಲೋಕ

image_
ಪ್ರದೀಪ್ ಕುಮಾರ್
9538125130

ರೈತರು ತಮ್ಮ ಕೈತೋಟ / ಹೊಲ / ಲ್ಯಾನ್ನ ಯೋಜನೆಗೆ ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಮಾರುಕಟ್ಟೆಯಿಂದ ಖರೀದಿ ಮಾಡಬೇಕು ಎಂಬುದರ ಗೊಂದಲದಲ್ಲಿದ್ದರೆ ಈ ಆಪ್ವು ಸಹಾಯವನ್ನು ಮಾಡುತ್ತದೆ. ಈ ಆಪ್ಅನ್ನು ಉಪಯೋಗಿಸುವುದು ತುಂಬಾ ಸುಲಭ. ಪ್ರಾರಂಭದಲ್ಲಿ ರೈತರು ತಮ್ಮ ಯೋಜನೆಗೆ ಎಷ್ಟು ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ (ಎನ್.ಪಿ.ಕೆ.) ಬೇಕು ಎಂದು ತಿಳಿಸಬೇಕು. ನಂತರ ಗಣಕ (ಕ್ಯಾಲುಕ್ಯೂಲೇಟ್) ಮಾಡು ಗುಂಡಿಯನ್ನು ಒತ್ತಬೇಕು. ನಂತರ ಈ ಆಪ್ವು ಮೇಲೆ ತಿಳಿಸಿದ ಎನ್.ಪಿ.ಕೆ. ಗೆ ವಿವಿಧ ೧೧ ರಾಸಾಯನಿಕ ಗೊಬ್ಬರದ ಸಂಯೋಗವನ್ನು ಸೂಚಿಸುತ್ತದೆ. ಈ ೧೧ ರಾಸಾಯನಿಕ ಗೊಬ್ಬರ ಸಂಯೋಗವು ದೇಶದಾದ್ಯಂತ ಈಗಾಗಲೆ ಉಪಯೋಗಿಸಲ್ಪಡುತ್ತಿರುವುದಾಗಿರುತ್ತವೆ. ಅವುಗಳೆಂದರೆ ಸಂಯೋಗ ೧: ಯೂರಿಯಾ, ಎಸ್.ಎಸ್.ಪಿ., ಎಮ್.ಓ.ಪಿ, ಸಂಯೋಗ ೨: ಡಿ.ಎ.ಪಿ., ಯೂರಿಯಾ, ಎಮ್.ಓ.ಪಿ, ಸಂಯೋಗ ೩: ೧೭;೧೭;೧೭, ಯೂರಿಯಾ, ಎಸ್.ಎಸ್.ಪಿ., ಸಂಯೋಗ ೪: ೨೦;೨೦;೨೦, ಯೂರಿಯಾ, ಎಸ್.ಎಸ್.ಪಿ. ಸಂಯೋಗ ೫: ೧೯;೧೯;೧೯, ಯೂರಿಯಾ, ಎಸ್.ಎಸ್.ಪಿ., ಸಂಯೋಗ ೬: ೧೦;೨೬;೨೬, ಯೂರಿಯಾ, ಎಸ್.ಎಸ್.ಪಿ., ಸಂಯೋಗ ೭: ೨೦;೨೦;೨೦, ಯೂರಿಯಾ, ಎಮ್.ಓ.ಪಿ, ಸಂಯೋಗ ೮: ೧೮;೧೮;೦, ಯೂರಿಯಾ, ಎಮ್.ಓ.ಪಿ, ಸಂಯೋಗ ೯: ಸಿ.ಎ.ಎನ್., ಎಸ್.ಎಸ್.ಪಿ., ಎಮ್.ಓ.ಪಿ, ಸಂಯೋಗ ೧೦: ಎ.ಎಮ್.ಓ. ಪಿ.ಹೆಚ್.ಓ.ಎಸ್., ಯೂರಿಯಾ, ಎಮ್.ಓ.ಪಿ, ಸಂಯೋಗ ೧೧: ಎ.ಎಮ್.ಓ. ಎಸ್.ಯು.ಎಲ್.ಪಿ., ಎಸ್.ಎಸ್.ಪಿ., ಎಮ್.ಓ.ಪಿ. ಈ ಮೇಲ್ಕಂಡ ಎಲ್ಲಾ ಸಂಯೋಗದಲ್ಲಿನ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಕಿಲೋ ಗ್ರಾಂನಲ್ಲಿ ಆಪ್ವು ತೋರಿಸುತ್ತದೆ.

2