ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಮಿಡಿತ-ತುಡಿತ

image_
ರಘು ಸಂವೇದನ್,
9902191549

ಪೋಷಕರು

2

ನಾನು ನಿಮ್ಮ ಪತ್ರಿಕೆಯನ್ನು ನಮ್ಮ ಸ್ನೇಹಿತರ ಮನೆಯಲ್ಲಿ ನೋಡಿದೆ. ತುಂಬಾ ಆಕರ್ಷಣೀಯವಾಗಿತ್ತು. ಫೋಟೋದೊಂದಿಗೆ ಮಾಹಿತಿ ಇರುವ ಪತ್ರಿಕೆಗಳು ತುಂಬಾ ವಿರಳ ಮತ್ತು ಬಹುವರ್ಣದಲ್ಲಿ ಪ್ರಿಂಟ್ ಆಗುತ್ತಿರುವುದು. ಅದರ ಮುದ್ರಣದ ಗುಣಮಟ್ಟ ಚೆನ್ನಾಗಿದೆ. ವಿಶ್ವವಿದ್ಯಾಲಯವು ಕಡಿಮೆ ಬೆಲೆಯಲ್ಲಿ ರೈತರಿಗೆ ತಲುಪಿಸುತ್ತಿರುವುದು ಕೂಡ ಒಂದು ಉತ್ತಮ ಕೆಲಸ. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ನೀರಿನ ಅಳತೆ ಲೇಖನ ತುಂಬಾ ಸರಳ ಭಾಷೆ ಮತ್ತು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಹಾಗೂ ಸರಿಯಾದ ಸಮಯದಲ್ಲಿ ಪ್ರಕಟಣೆಯಾಗಿದೆ. ಟಿವಿಯಲ್ಲಿ ಜಲಾಶಯದಲ್ಲಿ ಅಷ್ಟು ಟಿಎಂಸಿ ನೀರಿದೆ, ಇಷ್ಟು ಇದೆ ಎಂದು ಹೇಳುವ ಎಲ್ಲರಲ್ಲೂ ಹುಟ್ಟುವ ಪ್ರಶ್ನೆ ಟಿಎಂಸಿ ಅಂದರೆ ಏನು ಮತ್ತು ಅದರ ಅಳತೆ ಎಷ್ಟು ಎಂದು ಈಗ ಆ ಪ್ರಶ್ನೆಗೆ ಸರಿಯಾದ ಉತ್ತರ ನನಗೆ ಸಿಕ್ಕಿದೆ. ಈ ಲೇಖನವನ್ನು ಬರೆದ ಲೇಖಕರಿಗೂ ಮತ್ತು ಪ್ರಕಟಿಸಿದ ತಮಗೂ ಧನ್ಯವಾದಗಳು.

--ನೀಲಕಂಠಪ್ಪ, ಸೊರಬ

 

ಐದು ತಿಂಗಳ ಹಿಂದೆ ನೇಗಿಲ ಮಿಡಿತ ಪತ್ರಿಕೆಗೆ ಚಂದಾದಾರನಾಗಿದ್ದೇನೆ. ಪೇಪರ್ ಕ್ವಾಲಿಟಿ ಚೆನ್ನಾಗಿದೆ. ಎಲ್ಲಾ ಕೃಷಿ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೀರಿ. ಸಾವಯವ ಗೊಬ್ಬರದ ಬಗ್ಗೆ ಹೆಚ್ಚು ಒತ್ತು ನೀಡಿದ್ದೀರಿ. ಮುಖಪುಟ ಚೆನ್ನಾಗಿ ಬರುತ್ತಿದೆ. ಅಕ್ಷರ ಜೋಡಣೆ ಚೆನ್ನಾಗಿ ಬರುತ್ತಿದೆ. ನಾವು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆಯುವ ಅಡಿಕೆ, ಕಾಫಿ, ಮೆಣಸು ಬಗ್ಗೆ ಮಾಹಿತಿ ಬರುತ್ತೆ ಅಂತ ಅಂದುಕೊಂಡಿದ್ದೆವು. ಆದರೆ ಪತ್ರಿಕೆ ನಮ್ಮ ಉತ್ತರನ ಕರ್ನಾಟಕ ಭಾಗದ ಕಬ್ಬು, ಜೋಳ, ಅರಿಶಿಣ ಎಲ್ಲಾ ಬೆಳೆಗಳ ಮಾಹಿತಿಯನ್ನು ಅಂಕಿ ಅಂಶಗಳನ್ನು ಸಂಗ್ರಹಿಸಿ ಬರೆದಿದ್ದೀರಿ. ವಿಶ್ವವಿದ್ಯಾಲಯದಿಂದ ಪ್ರಕಟಣೆಯಾಗುವ ನೇಗಿಲ ಮಿಡಿತ ಪತ್ರಿಕೆಯಲ್ಲಿ ಮಾಹಿತಿ ವಿಷಯ ಆಧಾರಿತವಾಗಿದ್ದು ನಿಖರವಾಗಿದೆ.

--ಶ್ರೀಕಾಂತ್ ಕುಂಬಾರ್, ಮುಧೋಳ

 

ಕಳೆದ ಒಂದು ವರ್ಷದಿಂದ ಪತ್ರಿಕೆಗೆ ಚಂದಾದಾರನಾಗಿದ್ದೇನೆ. ಪತ್ರಿಕೆ ಚೆನ್ನಾಗಿ ಬರುತ್ತಿದೆ. ಪತ್ರಿಕೆಗೆ ನಾವು ಅಭಿಮಾನಿಯಾಗಿದ್ದೇವೆ. ಪತ್ರಿಕೆಯಲ್ಲಿ ಮಾಹಿತಿ ನೇರವಾಗಿ ಸಂಕ್ಷಿಪ್ತವಾಗಿ ಉಪಯುಕ್ತ ಮಾಹಿತಿಯನ್ನು ಹೊಂದಿದೆ. ಇತರೆ ಪತ್ರಿಕೆಯಲ್ಲಿ ೪ ಅಥವಾ ೫ ಪುಸ್ತಕ ಓದಿ ತಿಳಿಯುವುದನ್ನು ಇದರಲ್ಲಿ ಒಂದೇ ಪತ್ರಿಕೆಯಲ್ಲಿ ಮಾಹಿತಿ ಸಿಗುತ್ತಿದೆ. ಪತ್ರಿಕೆಯಲ್ಲಿ ನಮ್ಮ ಭಾಗಕ್ಕೆ ಉಪಯೋಗವಾಗುವಂತಹ ಒಣ ಬೇಸಾಯ ಪದ್ಧತಿಯ ಬಗ್ಗೆ ಹೆಚ್ಚು ಮಾಹಿತಿ ತಿಳಿಸಿದ್ದರೆ ಹೆಚ್ಚು ಉಪಯೋಗವಾಗುತ್ತದೆ. ನಾವು ನೇಗಿಲ ಮಿಡಿತ ಓದಿದ ಮೇಲೆ ಮಾಡಿಕೊಂಡಿರುವ ಬದಲಾವಣೆ ಸಾವಯವ ಗೊಬ್ಬರ ಹೆಚ್ಚು ಉಪಯೋಗಿಸುತ್ತಿದ್ದು, ಪತ್ರಿಕೆಯಲ್ಲಿರುವ ಕೊಡವ ರೈತರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತಿದ್ದೇವೆ.

--ಬಸವನಗೌಡ ಮಲ್ಲಿಕಾರ್ಜುನಗೌಡ ಪಾಟೀಲ, ಬಾಗಲಕೋಟ.

 

ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ನಾನು ಒಬ್ಬ ಗ್ರಾಮೀಣ ಬ್ಯಾಂಕ್ ಉದ್ಯೋಗಿಯಾಗಿದ್ದು ೨೦೧೫ರಲ್ಲಿ ಬಾಗಲಕೋಟೆಯಲ್ಲಿ ಕೃಷಿ ಮೇಳದಲ್ಲಿ ತಮ್ಮ ಸಿಬ್ಬಂದಿಯವರು ಸ್ಟಾಲ್ ಹಾಕಿಕೊಂಡು ಕುಳಿತಿದ್ದರು. ಅವರಲ್ಲಿ ವಿಚಾರಿಸಿದಾಗ ನೇಗಿಲ ಮಿಡಿತ ಬಗ್ಗೆ ಬಹಳ ಆಸಕ್ತಿಯಿಂದ ಚಂದಾದಾರನಾಗಿದ್ದೇನೆ. ಈಗ ಚಂದಾದಾರನಾಗುವ ಜೊತೆಗೂ ಇನ್ನೊಬ್ಬ ರೈತನನ್ನು ಚಂದಾದಾರನಾಗಲು ಮಾಡಿರುತ್ತೇನೆ. ಅವರು ಈ ಪತ್ರಿಕೆಯನ್ನು ಬ್ಯಾಂಕಿನಲ್ಲಿ ನೋಡಿ ನಾನು ಚಂದಾದಾರನಾಗುತ್ತೇನೆ ಅಂತ ಎರಡು ವರ್ಷದ ಚಂದಾದಾರರಾಗಿರುತ್ತಾರೆ. ನನ್ನ ಬ್ಯಾಂಕಿನಲ್ಲಿ ಬಂದ ಎಲ್ಲಾ ರೈತ ಬಾಂಧವರನ್ನು ಈ ನೇಗಿಲ ಮಿಡಿತ ಪತ್ರಿಕೆಯ ಚಂದಾದಾರರಾಗಲು ಪ್ರಯತ್ನಿಸುತ್ತೇನೆ. ಇದರಿಂದ ರೈತನ ಬಾಳು ಹಸನಾಗಲು ಒಳ್ಳೆಯ ಮಾಹಿತಿಯ ಪತ್ರಿಕೆ ಆಗಿರುತ್ತದೆ.

--ಶ್ರೀ ಎಚ್. ಆರ್. ಹೊದ್ಲೂರ, ಬಸರಿಕಟ್ಟಿ, ಬಾಗಲಕೋಟ

 

ಮಿಡಿತ-ತುಡಿತ ಅಂಕಣಕ್ಕೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವವರು ತಮ್ಮ ಭಾವಚಿತ್ರಗಳನ್ನು ಜೊತೆಗೆ ಕಳುಹಿಸಿದಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು