ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಚೆಂಡು ಹೂವಿನ ಎಲೆ ಚುಕ್ಕೆ ಮತ್ತು ಹೂ ಅಂಗಮಾರಿ ರೋಗ

ಡಾ. ಹೆಚ್. ನಾರಾಯಣಸ್ವಾಮಿ
9448159375
1

ಚೆಂಡು ಹೂ ಬೆಳೆಗೆ ಬಾಧಿಸುವ ರೋಗಗಳಲ್ಲಿ ಎಲೆ ಚುಕ್ಕೆ ಮತ್ತು ಹೂ ಅಂಗಮಾರಿ ರೋಗವು ಅತ್ಯಂತ ಹಾನಿಕಾರಕ ರೋಗವಾಗಿದೆ. ಈ ರೋಗದಿಂದ ಸುಮಾರು ಪ್ರತಿ ಶತ ೫೦-೬೦ ರಷ್ಟು ಇಳುವರಿ ನಷ್ಟವಾಗುತ್ತದೆ. ಹಳದಿ ಬಣ್ಣದ ತಳಿಗಳು ಈ ರೋಗಕ್ಕೆ ಹೆಚ್ಚು ತುತ್ತಾಗುತ್ತವೆ. ಈ ರೋಗಕ್ಕೆ ಶಿಲೀಂಧ್ರವು ಕಾರಣವಾಗಿರುತ್ತದೆ.

3

ರೋಗದ ಲಕ್ಷಣಗಳು:

  • ಪ್ರಾರಂಭಿಕ ಹಂತದಲ್ಲಿ ತಳಭಾಗದ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ.
  • ಆರಂಭದಲ್ಲಿ ಚುಕ್ಕೆಗಳು ೧ ರಿಂದ ೩ ಮಿ.ಮೀ. ಅಗಲ ಇದ್ದು, ತೀವ್ರತೆ ಹೆಚ್ಚಾದಂತೆ ಒಂದಕ್ಕೊಂದು ಕೂಡಿಕೊಂಡು ಕಡುಕಂದು ಬಣ್ಣದ ದೊಡ್ಡ ಮಚ್ಚೆಗಳಾಗಿ ಕಾಣಿಸಿಕೊಳ್ಳುತ್ತವೆ. ಇದರಿಂದ ಎಲೆಗಳು ಒಣಗುತ್ತವೆ. ನಂತರ ಎಲ್ಲಾ ಎಲೆಗಳಿಗೆ ಹರಡಿ ಪೂರ್ತಿ ಗಿಡ ಒಣಗುತ್ತದೆ.
  • ಆ ಮಚ್ಚೆಗಳಲ್ಲಿ ಅನೇಕ ವೃತ್ತಗಳು ಒಂದರ ಪಕ್ಕ ಒಂದರಂತೆ ಹೊಂದಿಕೊಂಡಂತೆ ಕಂಡು ಬರುತ್ತವೆ.
  • ನಂತರ ಅದೇ ತರಹದ ಮಚ್ಚೆಗಳು ಹೂ ಮತ್ತು ಕಾಂಡಗಳ ಮೇಲೆ ಕಂಡುಬಂದು ಆ ಭಾಗಗಳು ಒಣಗುತ್ತವೆ. ರೋಗಪೀಡಿತ ಮೊಗ್ಗುಗಳು ಕಂದು ಬಣ್ಣಕ್ಕೆ ತಿರುಗಿ ಸಣ್ಣವಾಗುತ್ತವೆ. ಅಲ್ಲದೆ ಅವು ಅರಳುವುದಿಲ್ಲ. ಅರಳಿದ ಹೂ ಕೂಡ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ. ಇದರಿಂದ ಹೂ ಆಕರ್ಷಕ ಬಣ್ಣ ಕಳೆದುಕೊಳ್ಳುವುದು. ಹಾಗೆಯೇ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ.
  • ನಿರ್ವಹಣಾ ಕ್ರಮಗಳು :-

  • ಬೀಜ ಬಿತ್ತುವುದಕ್ಕಿಂತ ಮೊದಲು ಒಂದು ಕಿ.ಗ್ರಾಂ ಬೀಜಕ್ಕೆ ೨ ಗ್ರಾಂ ಕ್ಯಾಪ್ಟಾನ್ ೮೦ ಡಬ್ಲ್ಯೂಪಿ ಅಥವಾ ಕಾರ್ಬಾಕ್ಸಿನ್ ೭೫ ಡಬ್ಲ್ಯೂಪಿ ಅಥವಾ ಮ್ಯಾಂಕೋಜೆಬ್ ೭೫ ಡಬ್ಲ್ಯೂಪಿನಿಂದ ಬೀಜೋಪಚಾರ ಮಾಡಬೇಕು.
  • ರೋಗಪೀಡಿತ ಎಲೆ ಮತ್ತು ಹೂಗಳನ್ನು ತೆಗೆಯಬೇಕು.
  • ಬೆಳೆಯಲ್ಲಿ ಮೇಲೆ ವಿವರಿಸಿದ ಲಕ್ಷಣಗಳು ಕಂಡುಬಂದಲ್ಲಿ ೨ ಗ್ರಾಂ ಮ್ಯಾಂಕೋಜೆಬ್ ೭೫ ಡಬ್ಲ್ಯೂಪಿ ಅಥವಾ ೧ ಮಿ.ಲೀ. ಹೆಕ್ಸಾಕೋನೋಜೋಲ್ ೫ ಇ.ಸಿ ಅಥವಾ ೨ ಗ್ರಾಂ ರಿಡೋಮಿಲ್ ಶಿಲೀಂಧ್ರ ನಾಶಕಗಳನ್ನು ೧ ಲೀ. ನೀರಿನಲ್ಲಿ ಬೆರೆಸಿ ೧೦ ದಿನಕ್ಕೊಮ್ಮೆ ಎರಡು ಬಾರಿ ಸಿಂಪಡಿಸಬೇಕು.
  •