ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಮೌಲ್ಯವರ್ಧನೆ

ಸಪೋಟ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು

ಕಾಂತರಾಜು ವೈ.
9731731842
1

ಸಪೋಟ ಒಂದು ರಸಭರಿತ, ರುಚಿಯುಳ್ಳ ಹಣ್ಣಾಗಿದ್ದು ಇದರ ಜೀವಿತಾವಧಿಯು ಕಡಿಮೆ ಇರುವುದರಿಂದ ಹಣ್ಣನ್ನು ಹೆಚ್ಚಿನ ದಿನಗಳ ಕಾಲ ಸಂಗ್ರಹಿಸಲು ಆಗುವುದಿಲ್ಲ. ಆದ್ದರಿಂದ ಹಣ್ಣಿನ ಜೀವಿತಾವಧಿಯನ್ನು ಹೆಚ್ಚಿಸಲು ಮೌಲ್ಯವರ್ಧಿತ ಉತ್ಪಾನ್ನಗಳ ತಯಾರಿಕೆ ಬಹು ಮುಖ್ಯವಾಗಿರುತದೆ. ಅವುಗಳೆಂದರೆ ಸಪೋಟ ನೆಕ್ಟರ್, ಜಾಮ್, ನಿರ್ಜಲೀಕರಣ ಹಾಗೂ ಸಿರಪ್ ಸಪೋಟ ಹಣ್ಣಿನಲ್ಲಿ ಖನಿಜಾಂಶಗಳು ಹಾಗೂ ಜೀವಸತ್ವಗಳು ಹೇರಳವಾಗಿರುತ್ತದೆ. ಅವುಗಳೆಂದರೆ ಕ್ಯಾಲೊರಿ-೮೩ ಗ್ರಾಂ, ಕೊಬ್ಬು-೧.೧ ಗ್ರಾಂ, ಜೀವಸತ್ವ ಎ-೨೪%.

 

 

4

ಬೇಕಾಗುವ ಸಾಮಗ್ರಿಗಳು:

ಸಪೋಟ-೧ ಕೆ.ಜಿ , ಸಕ್ಕರೆ- ೨೦೦ ಗ್ರಾಂ , ನೀರು- ೧ ಲೀ.

7

ತಯಾರಿಸುವ ವಿಧಾನ:

910

ಚೆನ್ನಾಗಿ ಮಾಗಿದ ಹಣ್ಣನ್ನು ಆಯ್ಕೆ ಮಾಡಿ ಶುದ್ದ ನೀರಿನಲ್ಲಿ ತೊಳೆದು ನಂತರ ಸಿಪ್ಪೆ ತೆಗೆದು ಹಣ್ಣುಗಳನ್ನು ಸಣ್ಣ ಸಣ್ಣ ಚೊರುಗಳನ್ನಾಗಿ ಮಾಡಿ ಬೀಜಗಳನ್ನು ಬೇರ್ಪಡಿಸಿ ನಂತರ ಮಿಕ್ಸಿಯಲ್ಲಿ ಹಾಕಿ ತಿರುಳನ್ನು ಮಾಡಿಕೊಂಡು ಅದಕ್ಕೆ ಶಿಫಾರಸ್ಸು ಮಾಡಿದಷ್ಟು ಸಕ್ಕರೆ ಹಾಗೂ ನೀರು ಹಾಕಿ ಮಿಶ್ರಮಾಡಿ. ಈ ರೀತಿ ಸಿದ್ದವಾದ ಪದಾರ್ಥವನ್ನು ಶುದ್ದವಾದ ಬಾಟಲಿಗಳಿಗೆ ತುಂಬಿ, ಮುಚ್ಚುಳದಿಂದ ಭದ್ರಪಡಿಸಿ ಜೋಪಾನವಾಗಿ ಶೇಖರಿಸಬೇಕು.

12