ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಸೌತೆಕಾಯಿ ಬೆಳೆಯ ಬೂದಿ ರೋಗ

ರಾಜು ಜೆ
9844525164
12

ಸೌತೆಕಾಯಿ ಒಂದು ಪ್ರಮುಖ ಉಷ್ಣವಲಯದ ತರಕಾರಿ ಬೆಳೆಯಾಗಿದ್ದು, ಹಲವಾರು ರೋಗಳಿಗೆ ತುತ್ತಾಗುತ್ತಿದೆ. ಬೂದಿ ರೋಗವು ಸೌತೆಕಾಯಿಯಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಮುಖ ರೋಗವಾಗಿದ್ದು, ದಿನದ ಉಷ್ಣಾಂಶ ಹೆಚ್ಚು ಇದ್ದು ರಾತ್ರಿ ಉಷ್ಣಾಂಶ ಕಡಿಮೆಯಿದ್ದರೆ ಈ ರೋಗದ ತೀವ್ರತೆ ಹೆಚ್ಚಾಗುವುದು. ಅಂದರೆ, ಈ ರೋಗವನ್ನು ಹೆಚ್ಚಾಗಿ ಚಳಿಗಾಲದಲ್ಲಿ ನೋಡಬಹುದು. ಈ ರೋಗವು ಶಿಲೀಂಧ್ರದಿಂದ ಉಂಟಾಗುತ್ತಿದ್ದು ಇದರ ಬೀಜಾಣುಗಳು ಗಾಳಿಯ ಮುಖಾಂತರ ಪ್ರಸಾರ ಹೊಂದುತ್ತದೆ. ಈ ಬೀಜಾಣುಗಳಿಂದಾಗಿ ಎಲೆಯ ಮೇಲೆ ಬಿಳಿ ಬೂದಿಯಂತಹ ಹುಡಿ ಉಂಟಾಗಿ ಕ್ರಮೇಣವಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗಿ, ರೋಗದ ತೀವ್ರತೆ ಹೆಚ್ಚಾದಂತೆ ಎಲೆಗಳು ಒಣಗಿ ಉದುರುತ್ತವೆ. ಈ ರೋಗದ ಸೋಂಕು ತಗುಲಿದ ಕಾಯಿಗಳ ಗಾತ್ರ ಕಡಿಮೆಯಾಗುವುದಲ್ಲದೇ, ರುಚಿ ಕಳೆದುಕೊಳ್ಳುತ್ತವೆ. ಈ ರೋಗವನ್ನು ಹತೋಟಿ ಮಾಡಲು ಶೇ. ೦.೧ ರ ಬೆನ್ಲೇಟ್ ಅಥವಾ ಶೇ. ೦.೦೫ ರ ದಿನೋಕ್ಯಾಪ್ ಅಥವಾ ಶೇ. ೦.೧ ರ ಕಾರ್ಬೆಂಡೈಜಿಮ್ನ್ನು ೧೫ ದಿನಗಳ ಅಂತರದಲ್ಲಿ ಎರಡರಿಂದ ಮೂರು ಬಾರಿ ಸಿಂಪರಣೆ ಕೈಗೊಳ್ಳಬೇಕು.