ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಕಾಳು ಮೆಣಸು ಬಳ್ಳಿ ಹಳದಿಯಾಗುವುದು ಕಾರಣ ಮತ್ತು ಪರಿಹಾರಗಳು

ವೀರೇಂದ್ರ ಕುಮಾರ್. ಕೆ.ವಿ
9481180251
1

ಮಸಾಲೆ ಬೆಳೆಗಳ ರಾಜ ಕಾಳು ಮೆಣಸು ಬೆಳೆಯನ್ನು ಮಿಶ್ರಬೆಳೆಯಾಗಿ ಕೊಡಗು, ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಕಾಫ಼ಿ, ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಕಾಳು ಮೆಣಸು ಬೆಳೆಗೆ ಅನೇಕ ಸಮಸ್ಯೆಗಳು ಕಂಡುಬರುತ್ತಿದ್ದು, ಅವುಗಳಲ್ಲಿ ಪ್ರಮುಖವಾಗಿ ಕಾಳುಮೆಣಸಿನ ಬಳ್ಳಿ ಹಳದಿ ಯಾಗುವುದು ಕಂಡುಬರುತ್ತಿದೆ. ಕಾಳು ಮೆಣಸು ಬಳ್ಳಿ ಹಳದಿಯಾಗುವುದಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಪ್ರಮುಖವಾಗಿ ಶೀಘ್ರ ಸೊರಗು ರೋಗ, ನಿಧಾನ ಸೊರಗು ರೋಗ, ಬೇರಿನ ಮಿಲಿ ಬಗ್ಸ್, ಬಳ್ಳಿಗೆ ತೇವಾಂಶದ ಕೊರತೆ, ನೇರವಾದ ಸೂರ್ಯನ ರಶ್ಮಿ ಬಳ್ಳಿಯ ಮೇಲೆ ಬಿದ್ದಾಗ ಮತ್ತು ಶಲ್ಕ ಕೀಟದ ಸಮಸ್ಯೆ ಇದ್ದಾಗ ಕಾಳುಮೆಣಸು ಬಳ್ಳಿಗಳು ಹಳದಿಯಾಗಿ ಇಳುವರಿಯಲ್ಲಿ ಕುಂಠಿತವಾಗುತ್ತಿದೆ. ಆದ್ದರಿಂದ ಕಾಳುಮೆಣಸು ಬಳ್ಳಿ ಹಳದಿಯಾಗುವುದನ್ನು ತಪ್ಪಿಸಲು ಸೂಕ್ತ ಸಮಯದಲ್ಲಿ ಗುರುತಿಸಿ, ಹತೋಟಿ ಕ್ರಮಗಳನ್ನು ಕೈಗೊಂಡು ಬಳ್ಳಿಗಳನ್ನು ಕಾಪಾಡಬಹುದು

ಬೇರು ಕೊಳೆ ರೋಗ: ಶೀಘ್ರ ಸೊರಗು ರೋಗ, ಹಳದಿ ರೋಗ, ಕಾಳು ಮೆಣಸಿನ ಕಟ್ಟೆರೋಗ ಎಂದೆಲ್ಲಾ ಕರೆಯುವ ಈ ರೋಗ ಕಳೆದ ಎರಡು ದಶಕಗಳಿಂದೀಚೆಗೆ ತೀವ್ರವಾಗಿ ಕಾಳುಮೆಣಸಿನ ಬೆಳೆಯನ್ನು ವಿನಾಶದಂಚಿಗೆ ತಲುಪಿಸುವ ದಿಕ್ಕಿನಲ್ಲಿದೆ. ಈ ರೋಗದ ಬಾಧೆಯಿಂದ ಶೇ. ೨೫ ರಿಂದ ೩೦ರಷ್ಟು ಬೆಳೆ ಹಾನಿಗೊಳಗಾಗುತ್ತದೆ. ಆದುದರಿಂದ ಈ ರೋಗವನ್ನು ಸೂಕ್ತ ಸಮಯದಲ್ಲಿ ಗುರುತಿಸಿ, ಅದರ ಹತೋಟಿ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ

4
 • ರೋಗದ ಲಕ್ಷಣಗಳು: ಬಳ್ಳಿಯ ಕೆಳಭಾಗದ ಎಲೆಗಳ ತುದಿಗಳಲ್ಲಿ ಅರ್ಧಚಂದ್ರಾಕೃತಿಯ ನೀರಿನಿಂದ ತೊಯ್ದಂತಹ ಬೂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ. ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಇಡೀ ಎಲೆಯನ್ನು ಕಪ್ಪಾಗಿಸಿ, ಸೋಂಕು ಎಲೆ ತೊಟ್ಟುಗಳಿಗೆ ಹರಡಿ ಕೊಳೆತು ಉದುರುತ್ತವೆ. ಕಾಂಡವು ಕೊಳೆತು ಆ ಭಾಗದ ತೊಗಟೆ ಸುಲಿದು ಬಿದ್ದು ಬಳ್ಳಿ ಸಂಪೂರ್ಣವಾಗಿ ಸಾಯುತ್ತದೆ.
 • ಸಮಗ್ರ ಹತೋಟಿ ಕ್ರಮಗಳು: ಪ್ರತೀ ಬಳ್ಳಿಗೆ ೫೦ ರಿಂದ ೬೦ ಗ್ರಾಂ ಟ್ರೈಕೋಡರ್ಮಾ ಎಂಬ ಜೈವಿಕ ಶಿಲೀಂಧ್ರವನ್ನು ೧ ಕೆ.ಜಿ ಬೇವಿನ ಹಿಂಡಿ ಅಥವಾ ೫ ಕೆ.ಜಿ ಕೊಟ್ಟಿಗೆ ಗೊಬ್ಬರದಲ್ಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು (ಮೇ-ಜೂನ್ ಮತ್ತು ಆಗಸ್ಟ್-ಸೆಪ್ಟಂಬರ್) ಅಥವಾ ೪ ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (೪ ರಿಂದ ೫ ಲೀಟರ್ನಷ್ಟು) ಸುರಿಯಬೇಕು. ಮೇ-ಜೂನ್ ತಿಂಗಳಲ್ಲಿ ಬಳ್ಳಿ, ಎಲೆ ಮತ್ತು ಕಾಂಡ ಪೂರ್ಣ ತೊಯ್ಯುವಂತೆ ಶೇ. ೧ ರ ಬೋರ್ಡೊ ದ್ರಾವಣ ಅಥವಾ ೩.೦ ಮಿ. ಲೀ. ಪೊಟ್ಯಾಸಿಯಂ ಪಾಸ್ಪೋನೇಟ್ನ್ನು ಸಿಂಪರಣೆ ಮಾಡಬೇಕು ಮತ್ತು ೩.೦ ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ನ್ನು ಪ್ರತಿ ಲೀಟರ್ ನೀರಿಗೆ ಬೆರಸಿದ ದ್ರಾವಣವನ್ನು ಬಳ್ಳಿಯ ಬುಡಭಾಗಕ್ಕೆ ಸುರಿಯಬೇಕು.
 • ಶೀಘ್ರ ಸೊರಗುರೋಗಕ್ಕೆ ತುತ್ತಾದ ಬಳ್ಳಿಗಳಿಗೆ ಮೆಟಾಲಾಕ್ಸಿಲ್ + ಮ್ಯಾಂಕೋಜೆಬ್ (೧.೨೫ ಗ್ರಾಂ) ಪ್ರತೀ ಲೀಟರ್ ನೀರಿಗೆ ಬೆರಸಿದ ದ್ರಾವಣವನ್ನು ಗಿಡದ ಬುಡ ಭಾಗಕ್ಕೆ ಸುರಿಯಬೇಕು ಮತ್ತು ಬಳ್ಳಿ, ಎಲೆ ಮತ್ತು ಕಾಂಡ ಪೂರ್ಣ ತೊಯ್ಯುವಂತೆ ಸಿಂಪರಣೆ ಮಾಡಬೇಕು.
 • 8

  ನಿಧಾನ ಸೊರಗು ರೋಗ: ನಿಧಾನ ಸೊರಗುರೋಗವು ಜಂತುಹುಳುಗಳ ಬಾಧೆಯಿಂದ ಉಂಟಾಗುತ್ತದೆ. ಈ ರೋಗಕ್ಕೆ ತುತ್ತಾದ ಬಳ್ಳಿಯನ್ನು ವಿಕ್ಷೀಸಿದಾಗ ಎಲೆ ಹಳದಿಯಾಗುವಿಕೆ, ಎಲೆ ಉದುರುವಿಕೆ ಮತ್ತು ಬಳ್ಳಿಯು ತುದಿಯಿಂದ ಒಣಗುವುದನ್ನು ಕಾಣಬಹುದು. ಈ ರೋಗ ತಗುಲಿದ ಬಳ್ಳಿಗಳಲ್ಲಿ ಅಕ್ಟೋಬರ್ ನಂತರ ತೇವಾಂಶ ಕೊರತೆ ಯಾಗುತ್ತಿದ್ದಂತೆ ಹಳದಿಯಾಗುತ್ತವೆ. ಮಳೆಗಾಲ ಪ್ರಾರಂಭವಾದೂಡೆನೆ (ಮೇ-ಜೂನ್) ಸೋಂಕು ಇರುವ ಬಳ್ಳಿಗಳು ಸಹಜ ಸ್ಥಿತಿಗೆ ಬರುತ್ತವೆ.

 • ರೋಗದ ನಿರ್ವಹಣೆ: ಜಂತು ಹುಳುವಿನ ಬಾಧೆ ಜಾಸ್ತಿ ಇರುವ ಪ್ರದೇಶದಲ್ಲಿ ನಿರೋಧಕ ತಳಿಯಾದ ಪೌರ್ಣಮಿಯನ್ನು ನಾಟಿ ಮಾಡಬೇಕು. ಜೈವಿಕ ನಿಯಂತ್ರಣವಾದ ಪೊಚೊನಿಯ ಕ್ಲೇಮೆಡೊಸ್ಪೋರಿಯ ಅಥವಾ ಟ್ರೈಕೋಡರ್ಮ ಹಾರಜಿಯಾನಮ್ನನ್ನು ಬೇವಿನ ಹಿಂಡಿಯ ಜೊತೆ ಮಿಶ್ರಣಮಾಡಿ ವರ್ಷದಲ್ಲಿ ಎರಡು ಬಾರಿ ಪ್ರತಿ ಗಿಡಕ್ಕೆ ೧ ಕೆ.ಜಿಯಂತೆ ಏಪ್ರಿಲ್-ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಕೊಡುವುದು. ಪ್ರತೀ ಬಳ್ಳಿಗೆ ೧೦ ಗ್ರಾಂ ಪೋರೆಟ್ ಹರಳುಗಳನ್ನು ಗಿಡದ ಬುಡಕ್ಕೆ ಹಾಕಬೇಕು.
 • ಬೇರಿನ ಮಿಲಿ ಬಗ್ಸ್: ಬೇರಿನ ಮಿಲಿ ಬಗ್ಸ್ ಕೀಟವು ಇತ್ತೀಚೆಗೆ ತೀವ್ರ ಸ್ವರೂಪದ ಹಾನಿಯನ್ನು ಮಾಡುತ್ತಿದೆ. ಈ ಕೀಟವು ಕಾಳುಮೆಣಸಿನ ಗಿಡದ ಬೇರಿನಲ್ಲಿದ್ದು ರಸವನ್ನು ಹೀರುವುದರಿಂದ ಬಾಧೆಗೊಳಗಾದ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರಿಂದ ಸಂಪೂರ್ಣ ಗಿಡ ಹಳದಿ ಬಣ್ಣಕ್ಕೆ ತಿರುಗಿ ಇಳುವರಿಯಲ್ಲಿ ಕಡಿಮೆಯಾಗುತ್ತದೆ.

 • ಹತೋಟಿ ಕ್ರಮಗಳು: ಬೇರಿನ ಮಿಲಿ ಬಗ್ಸ್ ಕೀಟವನ್ನು ಹತೋಟಿ ಯಲ್ಲಿಡಲು ೨.೦ ಮಿ.ಲೀ. ಕ್ಲೋರೋಪೈರಿಪಾಸ್ ಅಥವಾ ೦.೩ ಮಿ.ಲೀ. ಇಮೀಡಾಕ್ಲೋಪ್ರೀಡ್ ದ್ರಾವಣವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ನಿಧಾನವಾಗಿ ಗಿಡದ ಬುಡದ ಭಾಗಕ್ಕೆ ಎಲ್ಲಾ ಬೇರುಗಳು ಚೆನ್ನಾಗೆ ನೆನೆಯುವಂತೆ ಸುರಿಯಬೇಕು.
 • ತೇವಾಂಶದ ಕೊರತೆ: ಕಾಳುಮೆಣಸು ಬಳ್ಳಿಗಳಿಗೆ ಸೂಕ್ತ ಸಮಯದಲ್ಲಿ ಮಳೆಯಾಗದೆ ತೇವಾಂಶದ ಕೊರೆತೆಯಿಂದ ಬಳ್ಳಿಗಳು ಹಳದಿಯಾಗುತ್ತವೆ. ತೇವಾಂಶದ ಕೊರತೆಯಿಂದ ಬಳ್ಳಿಗಳು ಹಳದಿಯಾಗುವುದು ಇತ್ತೀಚಿನ ದಿನಗಳಲ್ಲಿ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತೀವ್ರವಾಗಿ ಕಂಡುಬರುತ್ತಿದ್ದು, ಇದರ ಹತೋಟಿ ಕ್ರಮಗಳನ್ನು ಸೂಕ್ತರೀತಿಯಲ್ಲಿ ಅನುಸರಿಸಿದರೆ ಬಳ್ಳಿಗಳು ಹಳದಿಯಾಗುವುದನ್ನು ತಪ್ಪಿಸ ಬಹುದಾಗಿದೆ.
 • ಹತೋಟಿ ಕ್ರಮಗಳು: ಮಳೆಯನ್ನು ಆಧರಿಸಿ ನೀರನ್ನು ಬಳ್ಳಿಯ ಬುಡಕ್ಕೆ ಕೊಡಬೇಕು ಮತ್ತು ಮುಂಗಾರು ಮಳೆ ಬಿಟ್ಟ ನಂತರ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಬಳ್ಳಿಯ ಬುಡದ ಭಾಗವನ್ನು ತರಗೆಲೆಗಳಿಂದ ಮುಚ್ಚಬೇಕು. ಇದರಿಂದ ಮಣ್ಣಿನ ತೇವಾಂಶವನ್ನು ಕಾಪಾಡಲು ಸಹಾಯ ಮಾಡುವುದಲ್ಲದೆ, ಕೊಳೆತು ಸಾವಯವ ಗೊಬ್ಬರವಾಗಿ ಬಳ್ಳಿಗೆ ಸಿಗುತ್ತದೆ
 • 15

  ಶಲ್ಕ ಕೀಟ:ಶಲ್ಕ ಕೀಟವು ಕಾಳುಮೆಣಸಿನ ಬೆಳೆಗಳಿಗೆ ತೀವ್ರ ಸ್ವರೂಪದ ಹಾನಿಯನ್ನು ಸಮುದ್ರ ಮಟ್ಟಕ್ಕಿಂತ ಎತ್ತರವಿರುವ ಪ್ರದೇಶದಲ್ಲಿ ಮತ್ತು ಮೈದಾನ ಪ್ರದೇಶಗಳಲ್ಲಿ ಬೆಳೆದ ಕಾಳುಮೆಣಸು ಬಳ್ಳಿಗಳಲ್ಲಿ ಮಾಡುತ್ತದೆ. ಈ ಕೀಟದ ಬಾಧೆಗೊಳಗಾದ ಕವಲುಗಳಲ್ಲಿ ಎಲೆ, ಸರ ಮತ್ತು ಕಾಯಿ ಗೊಂಚಲುಗಳು ಉದುರುತ್ತವೆ ಮತ್ತು ಬಳ್ಳಿಗಳು ಹಳದಿಯಾಗುತ್ತವೆ.

 • ಹತೋಟಿ ಕ್ರಮಗಳು: ೧.೭ ಮಿ.ಲೀ. ಡೈಮಿಥೋಯೇಟ್ ಅಥವಾ ೦.೩ ಮಿ.ಲೀ. ಇಮೀಡಾಕ್ಲೋಪ್ರೀಡ್ ಎಂಬ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಇದೇ ಕೀಟನಾಶಕವನ್ನು ೨೧ ದಿನದ ನಂತರ ಶುಲ್ಕ ಕೀಟದ ಬಾಧೆಗೆ ತುತ್ತಾದ ಎಲೆ ಮತ್ತು ಕಾಂಡದ ಮೇಲೆ ಸಿಂಪಡಿಸುವುದರಿಂದ ಕೀಟವನ್ನು ನಿಯಂತ್ರಿಸಬಹುದು.
 • ಸೂರ್ಯನ ರಶ್ಮಿ ನೇರವಾಗಿ ಬಿದ್ದಾಗ ಬಳ್ಳಿಗಳು ಹಳದಿಯಾಗುವುದು, ತೋಟಗಳ ಅಂಚಿನಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳ ಮೇಲೆ ಸೂರ್ಯನ ರಶ್ಮಿ ನೇರವಾಗಿ ಬಿದ್ದಾಗ ಬಳ್ಳಿಗಳು ಸಂಪೂರ್ಣ ಹಳದಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ
 • ಹತೋಟಿ ಕ್ರಮಗಳು: ಕಾಳುಮೆಣಸು ಬೆಳೆಸುವ ತೋಟಗಳಲ್ಲಿ ನಿಯಮಿತವಾದ ನೆರಳನ್ನು ಕಾಪಾಡಬೇಕು. ತೋಟಗಳ ಅಂಚಿನಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳ ಮೇಲೆ ೨ ರಿಂದ ೪ ಕೆ.ಜಿ ಸುಣ್ಣವನ್ನು ೨೦೦ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು.