ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ವನೌಷಧಿ

ಉದ್ದು

ತಿರುಕ
1

ಮಾಂಸಾಹಾರಿಗಳಲ್ಲಿ ಮಾಂಸವು ಹೇಗೆ ಪುಷ್ಟಿದಾಯಕವೆಂದು ಪರಿಗಣಿಸಲ್ಪಟ್ಟಿದೆಯೋ ಅದೇ ರೀತಿಯಲ್ಲಿ ಉದ್ದು ಸಸ್ಯಾಹಾರಿಗಳಲ್ಲಿ (ಶಾಖಾಹಾರಿ) ಪುಷ್ಟಿಕಾರಕವೆಂದು ತಿಳಿಯಲಾಗಿದೆ; ಅಂದರೆ ಉದ್ದಿನಲ್ಲಿ ಮಾಂಸವರ್ಧಕವೂ, ಪುಷ್ಟಿದಾಯಕವೂ ಆದ ಗುಣವಿದೆ; ಇದು ಸ್ನಿಗ್ಧವೂ, ಜಡವೂ, ವಿಪಾಕದಲ್ಲಿ ಮಧುರವೂ, ರಸಯುಕ್ತವೂ, ಬಲದಾಯಕವೂ, ರುಚಿಕಾರಕವೂ, ವೀರ್ಯವರ್ಧಕವೂ, ಮಲಕಾರಕವೂ ಆಗಿದ್ದು ಉಷ್ಣವೀರ್ಯವುಳ್ಳದ್ದಾಗಿರುತ್ತದೆ. ಅಲ್ಲದೆ ಇದು ಕಫಪಿತ್ತಕಾರಕವೂ, ಹೃದ್ಯವೂ, ಸ್ತನ್ಯವರ್ಧಕವೂ, ಮಾಂಸ ಮತ್ತು ಮೇಧೋವರ್ಧಕವೂ, ರಕ್ತಪಿತ್ತ ಪ್ರಕೋಪಕಾರಕವೂ ಆಗಿರುತ್ತದೆ. ಇದರಿಂದ ಶ್ರಮಶ್ವಾಸ, ಪರಿಣಾಮಶೂಲೆ, ಮೂಲವ್ಯಾಧಿ, ಅರ್ಧಾಂಗವಾಯುಗಳು ನಿವಾರಣೆಯಾಗುತ್ತವೆ. ಆದರೆ ಕೆಲವರ ಅಭಿಪ್ರಾಯದಲ್ಲಿ ಇದು ವಾತ ವೃದ್ಧಿಯನ್ನುಂಟು ಮಾಡುವುದೆಂದೂ, ಶೀತಕಾರಿ ಎಂದೂ ಇದೆ. ಆದರೆ ಇತರ ಎಷ್ಟೋ ಧಾನ್ಯಗಳಿಗಿಂತ ಇದರಲ್ಲಿ ಅರ್ಧದಷ್ಟೂ ವಾತಕಾರಕ ಗುಣವಿಲ್ಲವೆಂಬುದು ತೀರಸತ್ಯ, ಇದರಲ್ಲಿ ಕಾಡುಉದ್ದೆಂದು ಇನ್ನೊಂದು ಜಾತಿಯಿದೆ.

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಉದ್ದು/ಮಾಷಾ/ಉಡದ್/ಉಳಂದುಪರಪು/ಮಿಲುಮಲು/Blackgram