ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಆ್ಯಪ್ ಲೋಕ

ಕೃಷಿಕರ ಪೋರ್ಟಲ್ ಭಾರತ ಕಿರುತಂತ್ರಾಂಶ

image_
ಪ್ರದೀಪ್ ಕುಮಾರ್
9538125130
1

ಕೃಷಿಕರ ಪೋರ್ಟಲ್ ಭಾರತ ಕಿರುತಂತ್ರಾಂಶವು ಹಲವಾರು ಕೃಷಿ ಸಂಬಂಧಿತ ಮಾಹಿತಿಯನ್ನು ನೀಡುತ್ತದೆ. ಅವುಗಳೆಂದರೆ ದೇಶದ ವಿವಿದೆಡೆ ಇರುವ ಕೃಷಿ ಸಂಬಂಧಿತ ಪರಿಕರ ವ್ಯಾಪಾರಿಗಳ ವಿವರ, ಬೆಳೆ ನಿರ್ವಹಣೆ ಮಾಹಿತಿ, ಬೆಳೆ ಕಟಾವು ನಂತರ ನಿರ್ವಹಣೆಯ ಮಾಹಿತಿ, ದೇಶದ ವಿವಿದೆಡೆ ಇರುವ ಪ್ರಾಣಿ ಡಯಾಗ್ನೋಸ್ಟಿಕ್ ಪ್ರಯೋಗಾಲಯಗಳ ವಿವರ, ಪ್ರಾಣಿಗಳಿಗೆ ಬರುವ ರೋಗಗಳು ಮತ್ತು ಅದರ ಲಕ್ಷಣಗಳ ಮಾಹಿತಿ. ಕೃಷಿಕರ ಪೋರ್ಟಲ್ ಭಾರತ ಕಿರುತಂತ್ರಾಂಶವನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ವುಳ್ಳವರು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆಪ್ ಡೌನ್ಲೋಡ್ ಯಶಸ್ವಿಯಾದ ನಂತರ ಮೊಬೈಲ್ ಪರದೆಯ ಮೇಲೆ ಕೃಷಿಕರ ಪೋರ್ಟಲ್ ಭಾರತ ಆಪ್ನ ಶಾರ್ಟ್ಕಟ್ ಗುಂಡಿಯು ಗೋಚರವಾಗುತ್ತದೆ. ಬಳಕೆದಾರರು ಆಪ್ಅನ್ನು ಉಪಯೋಗಿಸಲು ಕ್ರಮವಾಗಿ ಆಪ್ನ ಶಾರ್ಟ್ಕಟ್ ಗುಂಡಿಯನ್ನು ಒತ್ತಿ ನಂತರ ವ್ಯೂ ಲಿಂಕನ್ನು ಒತ್ತಬೇಕು. ಆಪ್ಅನ್ನು ಉಪಯೋಗಿಸಲು ತಕ್ಕಮಟ್ಟಿನ ಇಂಟರ್ನೆಟ್ ಸೌಲಭ್ಯ ಹಾಕಿಸಿ ಇಟ್ಟುಕೊಂಡಿರಬೇಕು. ಆಪ್ನ ಎಡಭಾಗದಲ್ಲಿ ಕಂಡುಬರುವ ಇನ್ಪುಟ್ ಗುಂಡಿಯನ್ನು ಒತ್ತುವ ಮೂಲಕ ಬಳಕೆದಾರರು ಕೃಷಿ ಸಂಬಂಧಿತ ಪರಿಕರಗಳಾದ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣ ವ್ಯಾಪಾರಿಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ಬೀಜಗಳು (ಸೀಡ್ಸ್) ವಿಭಾಗದಲ್ಲಿ ಕಂಡುಬರುವ ವೆರೈಟಿ ಗುಂಡಿಯನ್ನು ಒತ್ತಿ ಕಳೆದ ೩೦ ವರ್ಷಗಳಿಂದ ಸಾಮಾನ್ಯವಾಗಿ ಸೂಚಿತವಾದ ತಳಿಗಳ ವಿವರವನ್ನು ಪಡೆಯಬಹುದು. ತಳಿಯ ವಿವರವು ಬಳಕೆದಾರರು ಆಯ್ಕೆ ಮಾಡಿದ ತಳಿಯ ಪ್ರಧಾನ ಗುಣಲಕ್ಷಣಗಳನ್ನು ತಿಳಿಸುತ್ತದೆ. ಅವುಗಳೆಂದರೆ ತಳಿಯ ಹೆಸರು, ತಳಿ ಬಿಡುಗಡೆಯಾದ ವರ್ಷ, ತಳಿಯನ್ನು ಉತ್ಪಾದಿಸಲು ತೊಡಗಿರುವ ಸಂಸ್ಥೆ, ಬೆಳೆ ಕಟಾವಿಗೆ ಬರಲು ತೆಗೆದುಕೊಳ್ಳುವ ಸಮಯ (ದಿನಗಳಲ್ಲಿ), ಬಿತ್ತನೆಗೆ ಬೇಕಾದ ಬೀಜದ ಪ್ರಮಾಣ (ಕಿ.ಗ್ರಾಂ/ ಹೆಕ್ಟೇರ್), ಸರಾಸರಿ ಇಳುವರಿ (ಕಿ.ಗ್ರಾಂ/ ಹೆಕ್ಟೇರ್), ಸಾಲಿನಿಂದ ಸಾಲಿಗೆ ಬಿಡಬೇಕಾಗುವ ಅಂತರ (ಸೆಂ.ಮೀ.), ಸಾಮಾನ್ಯ ಸಸ್ಯ ಆಕೃತಿಯ ಲಕ್ಷಣಗಳು (ಸಸ್ಯದ ಎತ್ತರ, ಕಾಂಡದ ಗಾತ್ರ ಇತ್ಯಾದಿ...), ರಸಗೊಬ್ಬರದ ಪ್ರಮಾಣ (ಕಿ.ಗ್ರಾಂ./ ಹೆಕ್ಟೇರ್) ಇತ್ಯಾದಿ. ಬಳಕೆದಾರರು ಆಪ್ನಲ್ಲಿರುವ ಬೆಳೆ ನಿರ್ವಹಣೆ (ಕ್ರಾಪ್ ಮ್ಯಾನೇಜ್ಮೆಂಟ್) ಲಿಂಕ್ಅನ್ನು ಒತ್ತುವ ಮೂಲಕ ಹಲವಾರು ಬೆಳೆಗಳ ಸಮಗ್ರ ಬೇಸಾಯ ಪದ್ಧತಿಯ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ಆಪ್ನಲ್ಲಿರುವ ಬೆಳೆ ಕಟಾವು ನಂತರ ನಿರ್ವಹಣೆ (ಪೋಸ್ಟ್ ಹಾರ್ವೆಸ್ಟ್) ಗುಂಡಿಯನ್ನು ಒತ್ತುವ ಮೂಲಕ ಬಳಕೆದಾರರು ಬೆಳೆ ಕೊಯ್ಲಿನ ನಂತರ ಅದರ ಸಂಗ್ರಹಣೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಬಳಕೆದಾರರು ಆಪ್ನಲ್ಲಿರುವ ಡಯಾಗ್ನೋಸ್ಟಿಕ್ ಪ್ರಯೋಗಾಲಯ (ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ) ಗುಂಡಿಯನ್ನು ಒತ್ತುವ ಮೂಲಕ ದೇಶದ ವಿವಿಧೆಡೆ ಇರುವ ಪ್ರಾಣಿ ಡಯಾಗ್ನೋಸ್ಟಿಕ್ ಪ್ರಯೋಗಾಲಯದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಆಪ್ವು ಪ್ರಾಣಿ ಡಯಾಗ್ನೋಸ್ಟಿಕ್ ಪ್ರಯೋಗಾಲಯವಿರುವ ವಿಳಾಸವನ್ನು ತಿಳಿಸುತ್ತದೆ. ಅಲ್ಲದೆ ಪ್ರಯೋಗಾಲಯ ಮುಖ್ಯಸ್ಥರು ಮತ್ತು ದೂರವಾಣಿ ಸಂಖ್ಯೆ ವಿವರವನ್ನು ಪಡೆಯಬಹುದು. ಬಳಕೆದಾರರು ಆಪ್ನಲ್ಲಿರುವ ಪ್ರಾಣಿಗಳಿಗೆ ಬರುವ ರೋಗಗಳು ಮತ್ತು ಅದರ ಲಕ್ಷಣಗಳು (ಡಿಸೀಸ್ ಆಂಡ್ ಸಿಮ್ಪ್ಟೇಮ್ಸ್) ಗುಂಡಿಯನ್ನು ಒತ್ತುವ ಮೂಲಕ ವಿವಿಧ ಜಾತಿಯ ಪ್ರಾಣಿಗಳಿಗೆ ಬರುವ ವಿವಿಧ ರೋಗಗಳ ಲಕ್ಷಣಗಳ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ಪಡೆಯಲು ಬಳಕೆದಾರರು ಪ್ರಾಣಿಯ ಜಾತಿ ಆಯ್ಕೆ ಮಾಡಬೇಕು. ನಂತರ ಆಪ್ವು ಬಳಕೆದಾರರು ಆಯ್ಕೆ ಮಾಡಿದ ಪ್ರಾಣಿಯ ಜಾತಿಗೆ ಸಂಬಂಧಿಸಿದ ವಿವಿಧ ರೋಗಗಳ ಪಟ್ಟಿಯಿಂದ ಯಾವುದಾದರು ಒಂದು ರೊಗವನ್ನು ಆಯ್ಕೆ ಮಾಡಲು ಸಕ್ರಿಯಗೊಳಿಸುತ್ತದೆ. ನಂತರ ಬಳಕೆದಾರರು ಪ್ರಾಣಿಯ ರೋಗವನ್ನು ಆಯ್ಕೆ ಮಾಡಿ ಆ ರೋಗದ ಗುಣಲಕ್ಷಣದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.