ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಮಿಡಿತ-ತುಡಿತ

image_
ರಘು ಸಂವೇದನ್
9902191549

ಪತ್ರಿಕೆ ಚೆನ್ನಾಗಿ ಬರುತ್ತಿದೆ. ಇದರಲ್ಲಿ ಬರುವ ಹಲವಾರು ಲೇಖನಗಳು ರೈತರ ಯಶೋಗಾಥೆಗಳ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಬೇರೆ ರೈತರಿಗೆ ಮಾರ್ಗದರ್ಶನವಾಗಿದೆ. ಅರಳಿಹಳ್ಳಿಯ ರೈತರಾದ ಮಲಿಯಪ್ಪರವರು ತಮ್ಮ ದಾಳಿಂಬೆ ತೋಟದಲ್ಲಿ ಅಳವಡಿಸಿಕೊಂಡಿರುವ ಒಂದು ಸಣ್ಣ ತಾಂತ್ರಿಕತೆ ಪಕ್ಷಿ ಓಡಿಸುವ ಧ್ವನಿವರ್ಧಕ, ಹಲವು ವಿಷಯವನ್ನು ಹೇಳುತ್ತದೆ. ತಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿನ ವಿಜ್ಞಾನಿಗಳನ್ನು ಹೆಚ್ಚು ಸದುಪಯೋಗಪಡಿಸಿಕೊಂಡಿರುವುದು ಅವರು ಯಶಸ್ಸಿನಲ್ಲಿ ಒಂದು ಹೆಜ್ಜೆಯಾಗಿರುವುದು. ಸಮಗ್ರ ಕೃಷಿ ಪದ್ಧತಿ ಹೀಗೆ ಹಲವಾರು ವಿಷಯ ಅಳವಡಿಸಿಕೊಂಡಿರುವ ಮಲಿಯಪ್ಪನವರು ಹಲವಾರು ರೈತರಿಗೆ ಸ್ಫೂರ್ತಿಯಾಗಿದ್ದಾರೆ. ಇಂತಹ ಒಬ್ಬ ರೈತರನ್ನು ಪರಿಚಯಿಸಿದ ನೇಗಿಲ ಮಿಡಿತ ಪತ್ರಿಕೆಗೆ ಹಾಗೂ ತಮ್ಮ ಮಧ್ಯ ವಯಸ್ಸಿನಲ್ಲಿಯು ಯಾವ ರೈತರನ್ನು ನೆಚ್ಚಿಸುವಂತಹ ಸಾಧನೆ ಮಾಡಿರುವ ರೈತರಾದ ಮಲಿಯಪ್ಪನವರಿಗೂ ಅಭಿನಂದನೆಗಳು.

--ಹಾಲೇಶ್, ಸಿ. ಎನ್., ಶಿವಮೊಗ್ಗ

 

ಸರ್ ನೇಗಿಲ ಮಿಡಿತ ಪತ್ರಿಕೆ ಬಂದು ತಲುಪಿತು. ಅಂದು ನೀವು ನನ್ನ ಡೈರಿ ಫಾರಂಗೆ ಬಂದು ನನ್ನನ್ನು ಪ್ರೋತ್ಸಾಹಿಸಿದ್ದು ಹೆಚ್ಚು ಸಂತೋಷ ತಂದಿತ್ತು. ಆದರೆ ನಿಮ್ಮ ಪತ್ರಿಕೆಯಲ್ಲಿ ನನ್ನ ಕೆಲಸವನ್ನು ಲೇಖನವಾಗಿಸುತ್ತೀರ ಎಂದು ಅಂದುಕೊಂಡಿರಲಿಲ್ಲ. ನನ್ನ ಒಂದು ಸಣ್ಣ ಪ್ರಯತ್ನವನ್ನು ನೀವು ಪತ್ರಿಕೆಯಲ್ಲಿ ಪ್ರಕಟಿಸಿರುವುದು ನನಗೆ ಇನ್ನೂ ಹೆಚ್ಚು ಸಂತೋಷ ತಂದಿದೆ ಹಾಗೂ ಇನ್ನೂ ಜವಾಬ್ದಾರಿ ಹೆಚ್ಚಿಸಿದೆ. ನನ್ನಂತೆ ಇನ್ನೂ ಹಲವಾರು ಯುವಕರು ಹಳ್ಳಿಗಳಲ್ಲಿ ಇದೇ ರೀತಿ ಇನ್ನೂ ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ. ಅವರೆಲ್ಲರ ಪ್ರಯತ್ನವು ಪತ್ರಿಕೆಯಲ್ಲಿ ಹೊರಬರಲಿ ಮತ್ತು ನನ್ನನ್ನು ಹುರಿದುಂಬಿಸಿದ್ದಕ್ಕೆ ನನ್ನ ವಂದನೆಗಳು

--ಶರತ್ಬಾಬು, ಶಿವಮೊಗ್ಗ