ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಬೆಂಡೆ ನಂಜುರೋಗ

ಜಯಲಕ್ಷ್ಮೀ ಕೆ
9741847223
1

ಬೆಂಡೆ ನಮ್ಮ ರಾಜ್ಯದಲ್ಲಿ ಬೆಳೆಯುವ ಪ್ರಮುಖ ತರಕಾರಿ ಬೆಳೆಯಾಗಿದ್ದು, ಜೀವಸತ್ವ ’ಸಿಐಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ. ಈ ತರಕಾರಿಯು ನಂಜಾಣುವಿಗೆ (ಬಿವೈಎಮ್ವಿ) ತುತ್ತಾಗುತ್ತ್ತಿದ್ದು, ಬಿಳಿ ನೊಣಗಳಿಂದ (ಬೆಮಿಸಿಯಾ ಟೆಬಾಸಿ) ಪ್ರಸಾರ ಹೊಂದುತ್ತವೆ. ರೋಗಕ್ಕೆ ತುತ್ತಾದ ಗಿಡದಲ್ಲಿ ಎಲೆಯ ನರಗಳು ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ. ಈ ರೋಗಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸುವುದರಿಂದ ಹಾಗೂ ನಂಜುರೋಗ ಹರಡುವ ಬಿಳಿ ನೊಣಗಳ ನಿಯಂತ್ರಣಕ್ಕೆ ೧.೭ ಮಿ.ಲೀ. ಡೈಮಿಥೋಯೆಟ್ ಅಥವಾ ೦.೨೫ ಮಿಲಿ ಇಮಿಡಾಕ್ಲೋಪ್ರಿಡ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಒಂದು ವೇಳೆ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದಿದ್ದಲ್ಲಿ ೧೫ ದಿವಸಗಳ ಅಂತರದಲ್ಲಿ ಎರಡು ಬಾರಿ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.