ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
9449623275
1

ಕೃಷಿಯ ಭಾಗವಾಗಿರುವ ಗೋವುಗಳ ಸಾಕಣೆಯು ಇತ್ತೀಚಿನ ದಿನಗಳಲ್ಲಿ ಕಷ್ಟ ಎನಿಸುತ್ತಿರುವ ಸಂದರ್ಭದಲ್ಲಿ ಮಲೆನಾಡು ಗಿಡ್ಡ ಗೋವುಗಳನ್ನು ಸಂರಕ್ಷಿಸುತ್ತಾ ಗವ್ಯ ಉತ್ಪನ್ನಗಳ ಅನೇಕ ಸಾಧ್ಯತೆಗಳನ್ನು ಸಮಾಜಕ್ಕೆ ಪರಿಚಯಿಸಿ ಪ್ರಚಾರ ಪ್ರಸಾರ ಮಾಡುತ್ತಿರುವ ತೀರ್ಥಹಳ್ಳಿ ಸಮೀಪದ ಮಜ್ಜಿಗೆ ಹೊಳೆ ಗ್ರಾಮದ ಶಂಕರನಾರಾಯಣ ಮಜ್ಜಿಗೆ ಹೊಳೆಯವರು ಸಾವಯವ ಸರದಾರರೆನಿಸಿದ್ದಾರೆ.ಈ ಮಲೆನಾಡು ಗಿಡ್ಡ ತಳಿಗಳು ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಈ ತಳಿಯ ಗೋವುಗಳು ಕಡಿಮೆ ಆಹಾರ ತಿಂದು, ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಾಗೂ ಪೌಷ್ಟಿಕಾಂಶಯುಕ್ತ ಹಾಲನ್ನು ನೀಡುತ್ತವೆ. ಸಾಮಾನ್ಯವಾಗಿ ಮಲೆನಾಡು ಪ್ರದೇಶಗಳಲ್ಲಿನ ಗಿಡ ಮರ ಬಳ್ಳಿಗಳು ಔಷಧೀಯ ಗುಣಗಳನ್ನು ಹೊಂದಿವೆ. ಹಾಗಾಗಿ ಇವುಗಳನ್ನು ತಿಂದ ಈ ಗೋವುಗಳ ಹಾಲು, ಮೂತ್ರ, ಗೋಮಯ ಎಲ್ಲವೂ ಔಷಧೀಯವಾಗಿ ಅತಿ ಶ್ರೇಷ್ಠವಾಗಿರುತ್ತವೆ. ಗೋಮೂತ್ರವೂ ಅನೇಕ ಉತ್ಪನ್ನಗಳಿಗೆ ಮೂಲದ್ರವ್ಯವಾಗಬಲ್ಲದೆಂಬುದನ್ನು ಅರಿತ ಶಂಕರನಾರಾಯಣ ಭಟ್ಟರು ಈ ನಿಟ್ಟಿನಲ್ಲಿ ಪ್ರಯೋಗಶೀಲರಾದರು

34

ಈ ಗೋಮೂತ್ರದಿಂದ ಔಷಧೀಯ ಹಲವು ಉಪ ಉತ್ಪನ್ನಗಳನ್ನು ತಯಾರಿಸಲು ಭಟ್ಟರು ಕಾರ್ಯ ಪ್ರವೃತ್ತರಾದರು. ಗೋಮೂತ್ರದಿಂದ ಗೋ ಅರ್ಕ, ಗೋ ಫಿನಾಯಿಲ್, ಹಲವು ತರಹದ ಗುಳಿಗೆಗಳನ್ನು ಜನರ ಬಳಕೆಗೆ ಇವರು ಸಿದ್ಧಪಡಿಸಿದ್ದಾರೆ. ಇದಲ್ಲದೆ ಆಯುರ್ವೇದ ವೈದ್ಯರ ಅಗತ್ಯಕ್ಕೆ ತಕ್ಕಂತೆ ವಿವಿಧ ಮೂಲಿಕೆಗಳನ್ನು ಸಹ ಬೆಳೆಸಿ ಅವರಿಗೆ ಬೇಕಾಗುವ ಸಂಯೋಜನೆಯ ಉತ್ಪನ್ನಗಳನ್ನು ತಯಾರಿಸಿಕೊಟ್ಟಿರುವುದು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುತ್ತಿರುವುದಕ್ಕೆ ಗವ್ಯ ಚಿಕಿತ್ಸೆಯ ಹಲವು ಸಾಧ್ಯತೆಗಳಿಗೆ ತೆರೆದಿಟ್ಟಿದೆ.ಇವರು ಗೋ ಸಾಕಣೆಯನ್ನು ಮುಖ್ಯ ಕಸುಬಾಗಿ ಮಾಡಿಕೊಂಡಿದ್ದಾರೆ. ಹೈನುಗಾರಿಕೆಯಲ್ಲಿ ಗೋಮೂತ್ರ, ಸಗಣಿ, ಗಂಜಲಗಳಿಂದ ವಿಶಿಷ್ಟ ಉತ್ಪನ್ನವನ್ನು ತಯಾರಿಸುತ್ತಿದ್ದಾರೆ. ಅಲ್ಲದೆ ಕ್ಷೀಣಿಸುತ್ತಿರುವ ಮಲೆನಾಡು ಗಿಡ್ಡ ತಳಿಗಳ ಕುರಿತಂತೆ ಮಲೆನಾಡು ಗಿಡ್ಡದ ಗೋವುಗಳ ಸಾಕಣೆ ಬಗ್ಗೆ ಸಾಕಷ್ಟು ಕಡೆಗಳಲ್ಲಿ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ.

6

ಇವರು ಔಷಧೀಯ ಗುಣ, ಕಡಿಮೆ ಆಹಾರದ ಪ್ರಮಾಣ, ಎಲ್ಲ ಪರಿಸರಕ್ಕೂ ಹೊಂದಿಕೊಳ್ಳುವ ಗುಣ, ರೋಗ ನಿರೋಧಕ ಶಕ್ತಿ ಹೊಂದಿರುವ ಮಲೆನಾಡು ಗಿಡ್ಡ ತಳಿಗಳು ವಿಶಿಷ್ಟ ಗುಣಗಳನ್ನು ಕಂಡುಕೊಂಡು ಈ ತಳಿಯ ಗೋವುಗಳ ಸಾಕಣೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಭಟ್ಟರು ತನ್ನ ಸುತ್ತಮುತ್ತಲಿನ ರೈತರಿಗೆ ಈ ತಳಿಯ ಸಾಕಣೆ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಗೋವುಗಳ ಸಂರಕ್ಷಣೆ, ಸಾಕಣೆ, ಗೋಮೂತ್ರಗಳ ಬಳಕೆ ಈ ಎಲ್ಲದರ ಬಗ್ಗೆ ಶ್ರೀ ಶಂಕರನಾರಾಯಣ ಭಟ್ ಮಜ್ಜಿಗೆ ಹೊಳೆ ಇವರನ್ನು ಸಂಪರ್ಕಿಸಿ ಮಾಹಿತಿ ಪಡೆದು ಮಲೆನಾಡು ಗಿಡ್ಡ ತಳಿಗಳ ಸಾಕಣೆದಾರರಾಗಿ ಭಾಗಿಯಾಗಬಹುದು.