ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಸಸ್ಯ ಪೋಷಕಾಂಶಗಳು, ಕೊರತೆಯ ಲಕ್ಷಣಗಳು ಮತ್ತು ಕೊರತೆಗೆ ಕಾರಣಗಳು

9964204571
1

ಒಂದು ಸಸ್ಯ ತನ್ನ ಜೀವನ ಚಕ್ರವನ್ನು ಪೂರ್ತಿಗೊಳಿಸಲು ಒಟ್ಟು ೧೬ ಪೋಷಕಾಂಶಗಳ ಅಗತ್ಯವಿದೆ. ಒಟ್ಟು ೧೬ ಗತ್ಯ ಪೋಷಕಾಂಶಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಗಾಳಿ ಮತ್ತು ನೀರಿನಿಂದ ದೊರೆಯುತ್ತವೆ. ಇವುಗಳ ನಿರ್ವಹಣೆಯಲ್ಲಿ ಮನುಷ್ಯನ ಪಾತ್ರ ನಗಣ್ಯ, ಉಳಿದ ೧೩ ಪೋಷಕಾಂಶಗಳು ಮಣ್ಣಿನಿಂದಲೆ ದೊರೆಯ ಬೇಕಾಗುತ್ತದೆ. ಅದ್ದರಿಂದ ಇವುಗಳ ನಿರ್ವಹಣೆ ಯಲ್ಲಿ ಮನುಷ್ಯನ ಪಾತ್ರವು ಸಾಕಷ್ಟಿದೆ. ಈ ಪೋಷಕಾಂಶಗಳನ್ನು ಬೆಳೆಗಳಿಗೆ ಬೇಕಾಗುವ ಪ್ರಮಾಣದ ಆಧಾರದ ಮೇಲೆ ಈ ಕೆಳಗಿನ ರೀತಿಯಲ್ಲಿ ವಿಂಗಡಿಸಲಾಗಿದೆ.

ಪ್ರಮುಖ ಪೋಷಕಾಂಶಗಳು: ಸಾರಜನಕ, ರಂಜಕ

ಲಘು ಪೋಷಕಾಂಶಗಳು:ಕ್ಯಾಲ್ಸಿಯಂ, ಮೆಗ್ನೆಷಿಯಂ, ಗಂಧಕ, ಕಬ್ಬಿಣ, ಮ್ಯಾಂಗನೀಸ್, ಬೋರಾನ್, ತಾಮ್ರ, ಸತು, ಕ್ಲೋರಿನ್, ಮಾಲಿಬ್ಡಿನಂ ಮಣ್ಣಿನಲ್ಲಿ ಸಸ್ಯಗಳಿಗೆ ಬೇಕಾಗುವ ವಿವಿಧ ಪೋಷಕಾಂಶಗಳ ಲಭ್ಯತೆಯನ್ನು ವಿವಿಧ ಹಂತಗಳಾಗಿ ವಿಂಗಡಿಸಬಹುದು.

 • ಅಧಿಕ ಪೋಷಕಾಂಶದ ಕೊರತೆ:ಇಂತಹ ಸ್ಥಿತಿಯಲ್ಲಿ ಸಸ್ಯಗಳಿಗೆ ಬೇಕಾಗುವ ಪೋಷಕಾಂಶಗಳು ದೊರೆಯದೆ ಸಸ್ಯಗಳು ಕೊರತೆಯ ಚಿಹ್ನೆಗಳನ್ನು ವ್ಯಕ್ತಪಡಿಸುತ್ತವೆ ಮತ್ತು ಇಳುವರಿಯಲ್ಲಿ ಅಧಿಕ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ.
 • ಮಧ್ಯಮ ಪೋಷಕಾಂಶದ ಕೊರತೆ (ಅದೃಶ್ಯ ಕೊರತೆ):ಈ ಹಂತದಲ್ಲಿ ಸಸ್ಯಗಳಿಗೆ ಅವಶ್ಯವಿರುವ ಪೋಷಕಾಂಶಗಳು ಕೊರತೆಯಲ್ಲಿರುತ್ತವೆ ಆದರು ಸಸ್ಯಗಳು ಯಾವುದೇ ಕೊರತೆಯ ಚಿಹ್ನೆಗಳನ್ನು ವ್ಯಕ್ತಪಡಿಸುವುದಿಲ್ಲ ಅದರೆ ಇಳುವರಿಯಲ್ಲಿ ಕೊಂಚ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
 • ಪೋಷಕಾಂಶಗಳ ಕೊರತೆ ಇರುವುದಿಲ್ಲ: ಈ ಹಂತದಲ್ಲಿ ಸಸ್ಯಗಳಿಗೆ ಅವಶ್ಯವಿರುವ ಪ್ರಮಾಣದಲ್ಲಿ ಪೋಷಕಾಂಶಗಳು ದೊರೆಯುತ್ತಿರುತ್ತವೆ. ಬೆಳೆಯ ಇಳುವರಿಯಲ್ಲಿ ವ್ಯತ್ಯಾಸವಿಲ್ಲದೆ ಅಧಿಕ ಇಳುವರಿ ಪಡೆಯಬಹುದು.
 • ಹೆಚ್ಚಿನ ಪೋಷಕಾಂಶ ಒದಗುವಿಕೆ (ವಿಷಕಾರಿ): ಮಣ್ಣಿನಲ್ಲಿ ಅವಶ್ಯವಿರುವ ಪೋಷಕಾಂಶಳು ಸಸ್ಯಗಳಿಗೆ ಬೇಕಾಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿರುತ್ತವೆ ಮತ್ತು ಇಳುವರಿಯಲ್ಲಿ ಕುಂಠಿತಗೊಳ್ಳಬಹುದು
 • ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದ ಕಂಡು ಬರುವ ಚಿಹ್ನೆಗಳು

  ಮಣ್ಣಿನಲ್ಲಿ ಪೋಷಕಾಂಶಗಳ ಲಭ್ಯತೆಯು ಕಡಿಮೆಯಾದಾಗ ಸಸ್ಯಗಳಲ್ಲಿ ಹಲವಾರು ರೀತಿಯ ಕೊರತೆಯ ಚಿಹ್ನೆಗಳು ಕಂಡುಬರುತ್ತವೆ. ಅವುಗಳು ಈ ಕೆಳಗಿನಂತಿರಬಹುದು

 • ಸಸ್ಯದ ಬೆಳವಣಿಗೆ ಕುಂಠಿತವಾಗಬಹುದು
 • ಸಸ್ಯಗಳು ಎಳೆಯ ವಯಸ್ಸಿನಲ್ಲಿಯೇ ಒಣಗಿ ಹೋಗಬಹುದು
 • ಸಸ್ಯದ ಶರೀರದೊಳಗೆ ಸರಿಯಾಗಿ ಆಹಾರ ಉತ್ಪಾದನೆಯಾಗದೆ ವಿವರ್ಣವಾಗಬಹುದು
 • ಸಸ್ಯದ ಶರೀರದೊಳಗೆ ನೀರು/ಆಹಾರವು ಚಲಿಸುವ ಮಾರ್ಗದಲ್ಲಿ ತಡೆಯುಂಟಾಗಿ ಸಸ್ಯದಲ್ಲಿ ವೈಪರಿತ್ಯ ಕಾಣಿಸಿಕೊಳ್ಳಬಹುದು
 • ಬೆಳೆಯು ತಡವಾಗಿ ಮಾಗಬಹುದು ಅಥವಾ ಅತಿ ಶೀಘ್ರ ಕೊಯ್ಲಿಗೆ ಬರಬಹುದು
 • ಇಳುವರಿ ಕಡಿಮೆಯಾಗಬಹುದು.
 • ಉತ್ಪನ್ನದ ಗುಣಮಟ್ಟ ಕಡಿಮೆಯಾಗಬಹುದು
 • 18

  ನಿರ್ಧಿಷ್ಟ ಪೋಷಕಾಂಶಗಳ ಕೊರತೆಯ ಚಿಹ್ನೆಗಳು ಮತ್ತು ನಿವಾರಣೆ

  ರಂಜಕ: ಕೊರತೆಯ ಚಿಹ್ನೆಗಳು

 • ಬೇರಿನ ಬೆಳವಣಿಗೆ ಕುಂಠಿತಕೊಂಡು ಎಲೆ ಮತ್ತು ಕಾಂಡದ ಬೆಳವಣಿಗೆಯೂ ಕುಂಠಿತಗೊಳ್ಳುತ್ತದೆ, ಕೆಲವು ಬೆಳೆಗಳಲ್ಲಿ ಎಲೆಗಳು ನೇರಳೆ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ, ಮಾಗಿದ ಎಲೆಗಳು ನೀಲಿ ಮಿಶ್ರಿತ ಹಳದಿ ಬಣ್ಣಕ್ಕ ತಿರುಗುತ್ತವೆ, ಕಾಳು ಕಟ್ಟುವುದು ಕಡಿಮೆಯಾಗುತ್ತದೆ. ತಡವಾಗಿ ಕೊಯ್ಲಿಗೆ ಬರುವುದು
 • ನಿವಾರಣೆ:ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಂಜಕಯುಕ್ತ ಗೊಬ್ಬರಗಳನ್ನು ಒದಗಿಸುವುದು, ರಂಜಕಯುಕ್ತ ನೀರಿನಲ್ಲಿ ಕರಗುವ ಗೊಬ್ಬರಗಳ (೧೨:೬೧:೦೦, ೦೦:೩೨:೫೪, ೧೯:೧೯:೧೯) ಸಿಂಪರಣೆ.