ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಒಣಹೂಗಳ ತಯಾರಿಕೆ ಆಗಬಹುದೇ ಮಹಿಳೆಯರಿಗೊಂದು ಆದಾಯ ಕೊಡುವ ಉದ್ಯಮ?

ಡಾ. ಸುಧಾರಾಣಿ, ಎನ್
9482024908
1

ಭಾರತದಲ್ಲಿ, ಇತ್ತೀಚಿನ ದಿನಗಳಲ್ಲಿ ಒಣಹೂಗಳ ಉದ್ಯಮವು ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮ ದೇಶವು ಸುಮಾರು ಶೇ ೬೦% ರಷ್ಟು ಒಟ್ಟು ಹೂವಿನ ಉಧ್ಯಮದಲ್ಲಿ ಪಾಲನ್ನು ಪಡೆದುಕೊಂಡಿದೆ. ಪ್ರತಿ ವರ್ಷದಲ್ಲಿ ಅಂದಾಜು ರೂ. ೧೫೦ ಕೋಟಿಗಳಷ್ಟು ವಹಿವಾಟನ್ನು ನಡೆಸುತ್ತಿದೆ. ಆದರೆ ನಮ್ಮ ದೇಶದ ರಫ್ತಿನ ಪಾಲು, ಯೂರೋಪಿನಲ್ಲಿ ಶೇ. ೧-೫ ಕ್ಕಿಂತ ಕಡಿಮೆ ಮತ್ತು ನಮ್ಮ ದೇಶದ ಅವಶ್ಯಕತೆಯಲ್ಲಿ ಶೇ ೧% ಕ್ಕಿಂತ ಕಡಿಮೆ ಇದೆ. ನೆದರ್ಲ್ಯಾಂಡ್ ದೇಶವು ಒಣ ಹೂಗಳ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದೂ ನಂತರ ಸ್ಥಾನ ಕೊಲಂಬಿಯಾ, ಮೆಕ್ಸಿಕೊ, ಭಾರತ ಹಾಗೂ ಇಸ್ರೇಲ್ಗಳದ್ದಾಗಿದೆ. ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ, ಲಾಭದಾಯಕ ಆದಾಯ ಹಾಗೂ ಕಡಿಮೆ ಸ್ಪರ್ಧೆ ಇರುವ ಕಾರಣ ಹೊಸ ಉದ್ದಿಮೆದಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ಈ ಒಣ ಹೂವಿನ ಉದ್ಯಮವೊಂದು ಆಶಾದಾಯಕವಾಗುವುದರಲ್ಲಿ ಅಚ್ಚರಿಯಿಲ್ಲ.

ಒಣಹೂಗಳ ಉದ್ದಿಮೆಯಿಂದಾಗುವ ಲಾಭಗಳು

ಪರಿಸರ ಸ್ನೇಹಿ: ನೈಸರ್ಗಿಕವಾದ ಒಣಹೂಗಳನ್ನು ಆಸ್ಪತ್ರೆಗಳಲ್ಲಿ ಹಾಗೂ ಪರಾಗ (ಪೋಲೆನ್) ಗಳಿಗೆ ಅಲರ್ಜಿ ಇರುವವರಿಗೆ ಕೊಡಬಹುದು, ಆರ್ಥಿಕವಾಗಿ ಲಾಭ ಹಾಗೂ ದೀರ್ಘಕಾಲದ ಬಾಳಿಕೆ, ತಾಜಾಹೂಗಳ ಬದಲು ಒಣ ಹೂಗಳನ್ನು ಎಷ್ಟು ಬಾರಿಯಾದರೂ ಮರು ಬಳಕೆ ಮಾಡಬಹುದು, ಬೇಸಿಗೆ ಹಾಗೂ ಚಳಿಗಾಲದಲ್ಲೂ ಉತ್ತಮವಾಗಿರುತ್ತವೆ, ತೂಕಬಹಳ ಕಡಿಮೆ ಇರುವ ಕಾರಣ ಸಾಗಾಣಿಕಾ ಸ್ಥಳ ಹಾಗೂ ಸಾಗಾಣಿಕಾ ವೆಚ್ಚವೂ ಸಹ ಕಡಿಮೆಯಾಗುತ್ತದೆ, ತಾಜಾ ಹೂಗಳಲ್ಲಾಗುವ ಕೊಯ್ಲೋತ್ತರ ನಷ್ಟವನ್ನು ತಡೆಗಟ್ಟಬಹುದು, ಒಣಹೂಗಳು ಜೈವಿಕವಾಗಿವೆ, ಉಷ್ಣ ವಾತಾವರಣಕ್ಕೆ ತಡೆದುಕೊಳ್ಳುವ ಶಕ್ತಿಯಿದೆ.

5

ಒಣಹೂಗಳನ್ನು ಎಲ್ಲೆಲ್ಲಿ ಬಳಸಬಹುದು

ಅಲಂಕಾರಿಕ ಹೂವಿನ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ, ಶುಭಾಶಯ ಕೋರುವ ಕಾರ್ಡ್ಗಳಲ್ಲಿ, ಗೋಡೆಯ ಫಲಕಗಳಲ್ಲಿ, ಕ್ಯಾಲಂಡರ್ಗಳಲ್ಲಿ, ಹೂವಿನ ಚೆಂಡುಗಳ ತಯಾರಿಕೆಯಲ್ಲಿ, ಹೂ ಗುಚ್ಚಗಳಲ್ಲಿ, ಉದ್ಯಾನ ಕಲಾ ವಿನ್ಯಾಸಗಳಲ್ಲಿ, ಹೂವಿನ ಆಲ್ಬಮ್ ತಯಾರಿಕೆಯಲ್ಲಿ, ಅಲಂಕಾರಿಕ ಗಾಜಿನ ಹೂಜಿಗಳಲ್ಲಿ

8

ಒಣ ಹೂಗಳ ಉತ್ಪಾದನಾ ತಾಂತ್ರಿಕತೆಗಳು:

ಒಣಗಿಸುವಿಕೆ (ನೈಸರ್ಗಿಕ ), ನಿರ್ಜಲೀಕರಣ (ಕೃತಕ ), ನೈಸರ್ಗಿಕವಾಗಿ ಒಣಗಿಸುವಿಕೆ : ಸೂರ್ಯನ ಬಿಸಿಲಿನಲ್ಲಿ ಹೂಗಳನ್ನು ಒಣಗಿಸುವ ತಾಂತ್ರಿಕತೆಯು ಅತ್ಯಂತ ಪ್ರಚಲಿತದಲ್ಲಿದ್ದು ಕಡಿಮೆ ಖರ್ಚಿನಲ್ಲಿ ಮಾಡಬಹುದಾದಂತಹ ಸುಲಭವಾದ ತಾಂತ್ರಿಕತೆ. ಈ ವಿಧಾನದಲ್ಲಿ ಹೂಗಳನ್ನು ದಾರದಲ್ಲಿ ಕಟ್ಟಿ ಒಣಗಿಸಲಾಗುತ್ತದೆ. ಕೃತಕವಾಗಿ ಒಣಗಿಸುವಿಕೆ: ಈ ವಿಧಾನದಲ್ಲಿ ಹೂಗಳನ್ನು ವಿವಿಧ ಆಧುನಿಕ ಉಪಕರಣಗಳ (ಡ್ರೈಯರ್ಸ್) ಸಹಾಯದಿಂದ ಒಣಗಿಸಲಾಗುತ್ತದೆ. ಈ ತಾಜಾ ಹೂಗಳನ್ನು ಟ್ರೇಗಳಲ್ಲಿ ಹರಡಿ ಉಪಕರಣದಲ್ಲಿ ನಿರ್ದಿಷ್ಟ ಉಷ್ಣತೆ ಹಾಗೂ ಸಮಯವನ್ನು ನಿಗದಿಪಡಿಸಿ ಬೇಕಾದ ಒಣ ಹಂತವನ್ನು ಪಡೆಯಬಹುದು. ಪಾಲಿಸೆಟ್ ಒಣಗಿಸುವಿಕೆ: ಇದು ರಾಸಾಯನಿಕ ವಸ್ತುವನ್ನು ಉಪಯೋಗಿಸಿ ಒಣಗಿಸ ಬಹುದಾದಂತಹ ವಿಧಾನ. ಒತ್ತಿ (ಪ್ರೆಸ್ಮಾಡಿ) ಒಣಗಿಸುವಿಕೆ: ಎಲೆ ಅಥವಾ ಹೂಗಳನ್ನು ಬ್ಲಾಟಿಂಗ್ ಪೇಪರ್ ಅಥವಾ ವಾರ್ತಾಪತ್ರಿಕೆಗಳ ಮಧ್ಯದಲ್ಲಿರಿಸಿ ಒಂದರ ಮೇಲೊಂದರಂತೆ ೨೪ ಗಂಟೆಗಳವರೆಗೆ ಜೋಡಿಸಬೇಕು ನಂತರ ನಿರ್ಜಲೀಕರಿಸಬೇಕು. ಎಂಬೆಡೆಡ್ ರೀತಿ ಒಣಗಿಸುವಿಕೆ: ಈ ವಿಧಾನದದಲ್ಲಿ ಎಲೆ ಹೂಗಳನ್ನು ಎಂಬೆಡೆಡ್ ವಸ್ತುಗಳನ್ನು ಉಪಯೋಗಿಸಿ (ಸಿಲಿಕಾ ಜೆಲ್, ಬೋರಾಕ್ಸ್, ಆಲಂ ಇತ್ಯಾದಿ) ಒಣಗಿಸುವುದರಿಂದ ಹೂಗಳ, ಮೂಲ ಆಕಾರ ಹಾಗೂ ಬಣ್ಣಗಳನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಬಹುದು. ಡೈಯಿಂಗ್ ವಿಧಾನ: ಬೇಕಾಗಿರುವ ಆಕರ್ಷಕ ಬಣ್ಣಗಳಲ್ಲಿ ಒಣ ಹೂಗಳನ್ನು ಅದ್ದುವ ತಾಂತ್ರಿಕತೆ.

111213