ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಕಿನ್ನೊವಾ

ಡಾ. ವಿಜಯಮಹಾಂತೇಶ
7411628470
1

ಕಿನ್ನೊವಾ ಬೆಳೆಯು ಹೆಚ್ಚು ಪೋಷಕಾಂಶ ಗುಣಗಳನ್ನು ಹೊಂದಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ಬಡರೈತರ ಜೀವನದಲ್ಲಿ ಈ ಬೆಳೆ ಆಶಾದಾಯಕ ವಾಗಿದ್ದು, ಇದರಿಂದ ಆರೋಗ್ಯ ವೃದ್ಧಿ ಹಾಗೂ ಧನ ವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ. ರೈತರು ಇನ್ನೊಬ್ಬ ರೈತ ಬೆಳೆದಿದ್ದನ್ನೂ ನೋಡಿ ಕಿನ್ನೊವಾ ಸಾಗುವಳಿ ಮಾಡುತ್ತಿರುವುದು. ಈ ವರ್ಷ ಬೆಳೆಯ ಕ್ಷೇತ್ರ ಹೆಚ್ಚಾಗುವುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ ರೈತರಿಗೆ ಬೇಕಾಗುವ ತಳಿಗಳ ಅಭಿವೃದ್ಧಿ ಬೀಜಗಳ ಪೂರೈಕೆ ಇತರೆ ಬೇಸಾಯ ಕ್ರಮಗಳ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕಾಗಿದೆ. ದಿನದಿಂದ ದಿನಕ್ಕೆ ಕಿನ್ನೊವಾ ಬೆಳೆಯ ಕ್ಷೇತ್ರ ಹೆಚ್ಚಾಗುತ್ತಿದ್ದು ಈ ಬೆಳೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಭಾರತದಲ್ಲಿ ಭತ್ತ ಮತ್ತು ಗೋಧಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ ರೈತರು ಈ ಬೆಳೆಗಳಿಂದ ಹೆಚ್ಚಿನ ಲಾಭಪಡೆಯುತ್ತಿಲ್ಲ. ಈ ದೃಷ್ಟಿಯಲ್ಲಿ ನಮ್ಮ ರೈತರ ಆರ್ಥಿಕಮಟ್ಟ ಹಾಗೂ ಆರೋಗ್ಯ ಸುಧಾರಿಸುವಲ್ಲಿ ಕಿನ್ನೊವಾ ಬೆಳೆ ಪ್ರಮುಖ ಪಾತ್ರ ವಹಿಸುವುದು. ನಮ್ಮ ದೇಶದ ಸಾಗುವಳಿ ಕ್ಷೇತ್ರದಲ್ಲಿ ಕೇವಲ ಶೇ. ೧ರಷ್ಟು ಪ್ರದೇಶವನ್ನು ಕಿನ್ನೊವಾಗೆ ಮೀಸಲಿಟ್ಟರೆ ೧೮ಲಕ್ಷ ಎಕರೆಗಳಲ್ಲಿ ಈ ಬೆಳೆ ಬೆಳೆಯಲು ಸಾಧ್ಯ. ಆದ್ದರಿಂದ ರೈತರು ಈ ಬೆಳೆಯನ್ನು ಬೆಳೆದರೆ ಅವರಿಗೆ ಮಾರುಕಟ್ಟೆ ಹಾಗೂ ಇತರ ವೈಜ್ಞಾನಿಕ ಬೆಳೆ ಮಾಹಿತಿ ಒದಗಿಸುವ ಕೆಲಸವಾಗಬೇಕಾಗಿದೆ

ಕಿನ್ನೊವಾ ಬೆಳೆಯಿರಿ, ತಿನ್ನಿರಿ, ಉಳಿದರೆ ಮಾರಾಟ ಮಾಡಿ:-ಈ ಬೆಳೆಯನ್ನು ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಳೆಯಾಶ್ರಯದಲ್ಲಿ ಬೆಳೆಯ ಬಹುದು, ಈ ಬೆಳೆ ಅಮಾರ್ಯಾಂಥಸ್ (ರಾಜಗಿರಿ) ಜಾತಿಗೆ ಸೇರಿದ ಬೆಳೆಯಾಗಿದ್ದು, ನಾವು ಈ ಬೆಳೆಯನ್ನು ರಸಗೊಬ್ಬರ, ಕೀಟನಾಶಕ, ರೋಗನಾಶಕ ಬಳಸದೆ ಕೇವಲ ಬೇವಿನ ಮೂಲದ ವಸ್ತುಗಳನ್ನು ಬಳಸಿ ಬೆಳೆಯಬಹುದು. ನಾವು ಸಮಗ್ರ ರೋಗ, ಕೀಟನಿರ್ವಹಣೆ ಮಾಡಿದರೆ ಒಂದು ಎಕರೆಗೆ ೮ ಕ್ವಿಂಟಾಲ್ ಕಿನ್ನೊವಾ ಧಾನ್ಯದ ಇಳುವರಿ ಪಡೆಯಬಹುದು. ಬೇರೆ ಬೆಳೆಗಳಿಗೆ ಹೋಲಿಸಿದರೆ ಕಿನ್ನೊವಾ ಬೆಳೆಗೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇರುವುದು. ಈಗ ಇದರ ಇಳುವರಿ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಇಳುವರಿ ಕೊಡುವ ತಳಿಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಯುತ್ತಿದೆ. ರೈತರು ಕಿನ್ನೊವಾ ಬೆಳೆದು ಮೊದಲು ತಮ್ಮ ಆಹಾರವಾಗಿ ಉಪಯೋಗಿಸಿ ಆರೋಗ್ಯವಂತ ಹಾಗೂ ಸದೃಢರಾಗಿ ಉಳಿದದ್ದನ್ನು ಮಾರುವುದು ಸೂಕ್ತ

4

ಸೆಪೊನಿನ್ನಿಂದ ಎಚ್ಚರವಾಗಿರಿ

ಕಿನ್ನೊವಾ ಬೀಜದ ಮೇಲೆ ಒಂದು ಪದರಿದ್ದು ಅದಕ್ಕೆ ಸೆಪೊನಿನ್ ಪದರ ಎನ್ನುವುದು. ಇದು ಕಹಿ ರುಚಿ ನೀಡುವುದು. ಒಟ್ಟು ಬೀಜದ ತೂಕದಲ್ಲಿ ಈ ಪದರ ಶೇ. ೬ರಷ್ಟು ಹೊಂದಿದೆ ಆದ್ದರಿಂದ ಬೀಜಗಳನ್ನು ಸಂಪೂರ್ಣವಾಗಿ ತೊಳೆದು ಈ ಪದರು ನಿರ್ಮೂಲನೆ ಮಾಡಿ ತಿನ್ನಬೇಕು. ಈ ಪದರನ್ನು ತೆಗೆಯಲು ಬೊಲಿವಿಯಾ ದೇಶದಲ್ಲಿ ಯಂತ್ರಗಳನ್ನು ಅಭಿವೃದ್ಧಿ ಪಡಿಸಿರುವುರು. ಆದರೆ ಇದರ ಖರ್ಚು ಹೆಚ್ಚು ಇರುವುದರಿಂದ ಬೊಲಿವಿಯಾದಲ್ಲಿ ರೈತರು ತಮ್ಮದೇ ಆದ ತಂತ್ರಜ್ಞಾನಗಳಾದ ಬೀಜಗಳನ್ನು ಉರಿದು, ಬೀಜಗಳನ್ನು ಕುಟ್ಟಿ ಹಾಗೂ ಬೀಜಗಳನ್ನು ನೀರಿನಿಂದ ತೊಳೆದು ನಂತರ ಬಿಸಿಲಿನಲ್ಲಿ ಒಣಗಿಸಿ ಆಹಾರವಾಗಿ ಉಪಯೋಗಿಸುತ್ತಿರುವುದು. ಇದೇರೀತಿ ಭಾರತದಲ್ಲಿ ಸಹ ಮಾಡುತ್ತಿರುವುದು. ಇದರಲ್ಲಿ ಒಂದು ಸಮಸ್ಯೆ ಇದ್ದು ಬೀಜಗಳು ನೀರಿನ ಸಂಪರ್ಕಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಮೊಳಕೆ ಒಡೆಯುವವು ಅಥವಾ ಶಿಲೀಂಧ್ರ ಜೀವಾಣುಗಳಿಗೆ ಕೊಳೆಯುವುದು.

7

ಈ ಬೆಳೆಯ ಬೀಜಗಳನ್ನು ಪಡೆಯಲು ಹಾಗೂ ಬೆಳೆದ ಬೀಜಗಳನ್ನು ಮಾರಲು ಸಂಪರ್ಕಿಸಿ: ಡಾ. ಶ್ರೀನಿವಾಸ, ಕೆ. ರಾವ, ೮೮೮೬೪೨೫೬೫೬ /೮೮೮೫೪೨೫೬೫೬