ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಬರದ ನಾಡಿಗೆ ವರವಾದ ಜಲ ಕೃಷಿ ಹಸಿರು ಮೇವು

ಗಜೇಂದ್ರ ಟಿ ಎಚ್
9743252552
1

ಕೃಷಿ ಹಾಗೂ ಪಶುಸಂಗೋಪನೆ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪಶು ಪೋಷಣೆ ಶಾರೀರ ಕ್ರಿಯಾ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಇತರೆ ಸಂಸ್ಥೆಗಳು ಹೈನುಗಾರಿಕೆಯನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಹಲವಾರು ತಂತ್ರಜ್ಞಾನಗಳನ್ನು ರೈತರಿಗೆ ಸಂಶೋಧನೆ ಮೂಲಕ ಪರಿಚಯಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಇತ್ತಿಚ್ಚಿನ ದಿನಗಳಲ್ಲಿ ಜಲಕೃಷಿಯಿಂದ ರಾಸುಗಳಿಗೆ ಮೆಕ್ಕೆಜೋಳದ ಹಸಿರು ಮೇವಿನ ಪೂರೈಕೆಯು ಸಹ ಒಂದು

ಜಲ ಕೃಷಿ ಎಂದರೇನು?:ನಿರ್ದಿಷ್ಟ ಬೆಳೆಗಳನ್ನು ಕೇವಲ ನೀರು ಹಾಗೂ ನೀರಿನಲ್ಲಿ ಕರಗುವ ಪೋಷಕಾಂಶಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೊಗಿಸಿಕೊಂಡು ಬೆಳೆಯುವ ಪದ್ಧತಿಗೆ ಜಲಕೃಷಿ ಎಂದು ಕರೆಯುತ್ತಾರೆ. ಜಲಕೃಷಿಗೆ ಸೂಕ್ತವಾದ ಹಸಿರು ಮೇವಿನ ಬೆಳೆಗಳು: ಮೆಕ್ಕೆಜೋಳ, ಗೋಧಿ, ಜವೆ ಗೋಧಿ ಹಾಗೂ ಹುರುಳಿ

4

ಬೇಕಾಗುವ ಪರಿಕರಗಳು: ಮೇವಿನ ಬೀಜ, ಪ್ಲಾಸ್ಟಿಕ್ ಟ್ರೇ (೩೪ ಘಿ ೯೦ ಸೆಂ. ಮೀ), ಫ್ರೇಮ್ (೪ ಘಿ ೬ ಅಡಿ), ನೀರು ಚಿಮುಕಿಸುವ ಸಾಧನ, ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳು, ಸೆಣಬಿನ ಚೀಲ(ಗೋಣಿ ಚೀಲ)

ಬೆಳೆಯುವ ವಿಧಾನ

 • ಆರೋಗ್ಯಕರ ಮೆಕ್ಕೆಜೋಳದ ಬೀಜವನ್ನು ೪ ರಿಂದ ೫ ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು
 • ನೀರನ್ನು ಬಸಿದು ನಂತರ ತಂಪಾದ ಹವೆಯಲ್ಲಿ ಆರಿಸಬೇಕು
 • ಸೆಣಬಿನ ಚೀಲದಲ್ಲಿ ಆರಿಸಿದ ಬೀಜಗಳನ್ನು ತುಂಬಿ ನಂತರ ೪೮ ತಾಸು ನೆರಳಿನಲ್ಲಿ ಇಟ್ಟು ೪ ರಿಂದ ೫ ಬಾರಿ ನೀರು ಸಿಂಪರಣೆ ಮಾಡಬೇಕು
 • ನಂತರ ಮೊಳಕೆ ಬಂದ ೪೦೦ ರಿಂದ ೫೦೦ ಗ್ರಾಂ ಬೀಜವನ್ನು ಪ್ರತಿ ಪ್ಲಾಸ್ಟಿಕ್ ಟ್ರೇನಲ್ಲಿ ಸಮಾನವಾಗಿ ಹರಡಬೇಕು
 • ಮೇವಿನ ಬೀಜವಿರುವ ಟ್ರೇಗಳನ್ನು ಫ್ರೇಮ್ನಲ್ಲಿ ಕೂರಿಸಬೇಕು
 • ೮ ರಿಂದ ೧೦ ದಿನಗಳವರೆಗೆ ಪ್ರತಿ ನಿತ್ಯ ೩ ರಿಂದ ೪ ಬಾರಿ ನೀರನ್ನು ಚಿಮುಕಿಸುವ ಸಾಧನದಿಂದ ನೀರನ್ನು ಸಿಂಪಡಿಸಬೇಕು
 • ೮ ರಿಂದ ೧೦ ದಿನಗಳಲ್ಲಿ ಹಸಿರು ಮೇವು ಕೊಯ್ಲಿಗೆ ಬರುತ್ತದೆ
 • ಪ್ರತಿ ಕಿಲೋ ಗ್ರಾಂ ಮೆಕ್ಕೆಜೋಳದಿಂದ ೮ ರಿಂದ ೧೦ ಕಿ.ಗ್ರಾಂ ಹಸಿರು ಮೇವು ದೊರೆಯುತ್ತದೆ
 • ಹೀಗೆ ಪಡೆದ ಹಸಿರು ಮೇವನ್ನು ರಾಷ್ಟ್ರಿಯ ಪಶು ಪೋಷಣೆ ಶಾರೀರಾ ಕ್ರಿಯಾ ವಿಜ್ಞಾನ ಸಂಸ್ಥೆಯು ಶಿಫಾರಸು ಮಾಡಿದ ಪ್ರಕಾರ ಪ್ರತಿ ನಿತ್ಯ ೨೦ ರಿಂದ ೨೪ ಕಿ.ಗ್ರಾಂ ಅಷ್ಟನ್ನು ಪ್ರತಿ ರಾಸುವಿಗೆ ಒದಗಿಸಬಹುದು
 • 16

  ಜಲಕೃಷಿಯಿಂದ ಹಸಿರು ಮೇವಿನ ಉತ್ವಾದನೆಯ ಉಪಯೋಗಗಳು: ಸಣ್ಣ, ಅತೀ ಸಣ್ಣ ಹಾಗೂ ಭೂಹಿಡುವಳಿ ರಹಿತ ರೈತರಿಗೆ ಬಹು ಉಪಯುಕ್ತ ವಿಧಾನ . ಕೇವಲ ೬ ಘಿ ೪ ಅಡಿ ಅಂತರದ ಫ್ರೇಮ್ನಲ್ಲಿ ೭೨ ಪ್ಲಾಸ್ಟಿಕ್ ಟ್ರೇಗಳನ್ನು ಅಳವಡಿಸಿ ಪ್ರತಿ ಫ್ರೇಮ್ನಿಂದ ೨೦೦-೨೨೦ ಕಿ. ಗ್ರಾಂ ನಷ್ಟು ಹಸಿರು ಮೇವು ಪಡೆಯಬಹುದು. ಕಡಿಮೆ ನೀರಿನ ಪ್ರಮಾಣದಿಂದ ಹೆಚ್ಚಿನ ಹಸಿರು ಮೇವು ಪಡೆಯಬಹುದು. ಅತೀ ಕಡಿಮೆ ಅವಧಿಯಲ್ಲಿ ಪೋಷಕಾಂಶಯುಕ್ತ ಹಸಿರು ಮೇವಿನ ಉತ್ಪಾದನೆ (೮-೧೦ ದಿನಗಳು) ಈ ರೀತಿ ಬೆಳೆದ ಮೇವು ಹೆಚ್ಚಿನ ಪೋಷಕಾಂಶಗಳಿಂದ ಕೂಡಿರುವುದರಿಂದ ಕ್ರಮೇಣವಾಗಿ ದಾಣಿ ಮಿಶ್ರಣದ ಪ್ರಮಾಣವನ್ನು ಕಡಿಮೆ ಮಾಡಬಹುದು

  ರೈತರ ಅನಿಸಿಕೆಗಳು : ಜಲ ಕೃಷಿಯಿಂದ ಮೆಕ್ಕೆ ಜೋಳದ ಹಸಿರು ಮೇವಿನ ಉತ್ಪಾದನಾ ತಾಂತ್ರಿಕತೆಯು ಅತ್ಯಂತ ಸರಳ ವಿಧಾನವಾಗಿದೆ. ಕಡಿಮೆ ನೀರು ಹಾಗೂ ಬಂಡವಾಳದಲ್ಲಿ ಹೆಚ್ಚಿನ ಹಸಿರು ಮೇವುನ್ನು ಉತ್ಪಾದನೆ ಮಾಡಬಹುದು. ಹಾಲಿನ ಉತ್ವಾದನೆ ಹಾಗೂ ಪ್ರೋಟೀನ್ ಅಂಶದಲ್ಲೂ ಹೆಚ್ಚಳವನ್ನೂ ಕಾಣುತ್ತಿದ್ದೇವೆ