ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಕತ್ತೆಯ ಹಾಲೆಂಬ ಅಮೃತ...!

ಡಾ. ವಿನೂತನ್ ಎಂ. ಕೆ
8970415197
1

ದೇಶದ ಅನೇಕ ರಾಜ್ಯಗಳಲ್ಲಿ ಅಸಂಘಟಿತ ಕತ್ತೆಯ ಹಾಲಿನ ಮಾರಾಟಗಾರರನ್ನು ನೋಡಬಹುದು. ಉತ್ತರ ಭಾರತ ಹಾಗು ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ಕರ್ನಾಟಕ, ಆಂದ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಬೀದಿ ಬೀದಿಗಳಿಗೆ ತೆರಳಿ ಪ್ರತಿ ೧೦ ಮಿ.ಲೀ. ಹಾಲಿಗೆ ಸುಮಾರು ರೂ. ೫೦ ರಿಂದ ೧೦೦ ಗಳವರೆಗೆ ಮಾರುವುದನ್ನು ನಾವು ಕಾಣಬಹುದು. ಪ್ರಾಚೀನ ಕಾಲದಿಂದಲೂ ದೇಶ ವಿದೇಶಗಳಲ್ಲಿ ವಿಶೇಷ ಸ್ಥಾನ ಹೊಂದಿರುವ ಕತ್ತೆಯ ಹಾಲು ಔಷಧಗಳಲ್ಲಿ ಮತ್ತು ಸ್ವಾದಿಷ್ಟ ಪಾನೀಯವಾಗಿ ಬಳಕೆಯಲ್ಲಿತ್ತು. ಹಾವು, ಚೇಳು ಕಡಿತದಂತಹ ವಿಷ ಬಾಧೆಗೆ ಒಳಗಾದವರಿಗೆ, ಕೀಲು ನೋವು, ಗಾಯಗಳಿಗೆ ಹಾಗೂ ಹಸುವಿನ ಹಾಲಿಗೆ ಅಲರ್ಜಿ ಹೊಂದಿದವರಿಗೆ ಕತ್ತೆಯ ಹಾಲು ದಿವ್ಯೌಷಧವಾಗಿದೆ. ಹೆಚ್ಚಿನ ಪ್ರಮಾಣದ ಲೀನೋಲಿಕ್ ಆಮ್ಲ ಮತ್ತು ವಿಟಮಿನ್ ಸಿ ಹೊಂದಿರುವ ಇದು ಕಡಿಮೆ ಕೊಬ್ಬಿನ ಪ್ರಮಾಣ ಹೊಂದಿದೆ. ನಿಯಮಿತವಾಗಿ ಕತ್ತೆ ಹಾಲು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಪ್ರಬಲವಾಗುವುದಲ್ಲದೇ ರಕ್ತಹೀನತೆಯು ನಿವಾರಣೆಯಾಗುತ್ತದೆ

ಕತ್ತೆ ಹಾಲಿನ ಮಹತ್ವ: ಮರಿಹಾಕಿದ ಆರಂಭದ ೨ ತಿಂಗಳಲ್ಲಿ ಕತ್ತೆಯ ಹಾಲಿನಲ್ಲಿರುವ ಖನಿಜಾಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು ನಂತರ ಕಡಿಮೆಯಾಗುತ್ತ ಹೋಗುತ್ತದೆ. ಸಾಮನ್ಯವಾಗಿ ೬ ತಿಂಗಳ ನಂತರ ಹಸುಗೂಸುವಿಗೆ ಹಸುವಿನ ಹಾಲನ್ನು ಕುಡಿಸಲು ಆರಂಭಿಸುತ್ತಾರೆ. ಆದರೆ ಹಸುವಿನ ಹಾಲಿನಲ್ಲಿರುವ ಬೀಟಾ-ಲ್ಯಾಕ್ಟಲ್ಬೂಮೀನ್ ಅಂಶವು ಮಕ್ಕಳಲ್ಲಿ ಅಲರ್ಜಿಗೆ ಕಾರಣವಾಗಬಹುದು. ಈ ಬೀಟಾ-ಲ್ಯಾಕ್ಟಲ್ಬೂಮೀನ್ ಅಂಶ ಕತ್ತೆ ಹಾಲಿನಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿರುವುದರಿಂದ ಅದು ಯಾವುದೇ ರೀತಿಯ ಅಲರ್ಜಿಗಳನ್ನು ಉಂಟುಮಾಡುವುದ್ದಿಲ್ಲ. ಹಸುವಿನ ಹಾಲಿನಲ್ಲಿರುವ ಕೆಸೀನ್ ಅಂಶವು ಸಹ ಕೆಲವು ಶಿಶುಗಳಲ್ಲಿ ಅಲರ್ಜಿಯುಂಟು ಮಾಡಬಹುದು. ಆದರೆ ಕತ್ತೆ ಹಾಲಿನಲ್ಲಿರುವ ಕೆಸೀನ್ ತಾಯಿ ಎದೆ ಹಾಲಿನಲ್ಲಿರುವ ಕೆಸೀನ್ನಂತೆಯೇ ಇದ್ದು ಉಪಯುಕ್ತ ಅಮಿನೋ ಆಮ್ಲಗಳಿಂದ ಸಮೃದ್ಧವಾಗಿದೆ.

4

ಕತ್ತೆ ಹಾಲು ಹಾಗೂ ಜೀವ ನಿರೋಧಕ ಪ್ರಕ್ರಿಯೆ: ದೇಹದ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾ ಮುಂತಾದ ಸೂಕ್ಷಾಣು ಜೀವಿಗಳನ್ನು ನಿಯಂತ್ರಿಸುವ ಲೈಸೋಜೈಮ್ಗಳ ಜೊತೆಗೆ ಲ್ಯಾಕ್ಟೋಫೆರಿನ್ ಮತ್ತು ಲ್ಯಾಕ್ಟೋಪೆರಾಕ್ಸಿಡೇಸ್ ಕಿಣ್ವಗಳೂ ಸಹಾ ಕತ್ತೆ ಹಾಲಿನಲ್ಲಿ ಹೇರಳವಾಗಿರುವುದರಿಂದ ಹುಟ್ಟಿದ ಮಕ್ಕಳಲ್ಲಿ ಉದರ ಹಾಗು ಕರುಳಿಗೆ ಸಂಬಂಧಿಸಿದ ರೋಗಗಳನ್ನು ನಿಯಂತ್ರಿಸಲು ಕತ್ತೆ ಹಾಲು ನೆರವಾಗುತ್ತದೆ. ಇದರೊಂದಿಗೆ ಲ್ಯಾಕ್ಟೊಸ್ ಅಂಶ ಸಹ ಹೆಚ್ಚಾಗಿರುವುದರಿಂದ ಕರುಳಿನಲ್ಲಿ ಜೈವಿಕ ಕ್ರಿಯೆಗೆ ಪೂರಕ ಸೂಕ್ಷಣುಗಳಾದ ಲ್ಯಾಕ್ಟೊಬ್ಯಾಸಿಲ್ಲಸ್ ಜೀವಿಗಳು ಹುಲುಸಾಗಿ ಬೆಳೆಯಲು ಕಾರಣವಾಗುತ್ತವೆ. ಕತ್ತೆಯ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಖನಿಜಾಂಶ ಸಹಾ ಹೇರಳವಾಗಿದ್ದು, ಲ್ಯಾಕ್ಟೊಸ್ನ ಸಹಾಯದೊಂದಿಗೆ ಕರುಳಿನಲ್ಲಿ ಇದು ಸುಲಭವಾಗಿ ಜೀರ್ಣವಾಗಿ ಮಕ್ಕಳ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಾಮನ್ಯವಾಗಿ ಕತ್ತೆಗಳು ಫೆಬ್ರವರಿ - ಜುಲೈ ಅವಧಿಯಲ್ಲಿ ಹೆಚ್ಚಾಗಿ ಮರಿಗಳನ್ನು ಹಾಕುತ್ತವೆ. ಉಳಿದ ಅವಧಿಯಲ್ಲಿ ಕತ್ತೆ ಹಾಲಿನ ಲಭ್ಯತೆ ಕಡಿಮೆಯೆಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಂವರ್ಧನೆ ಹಾಗು ಕತ್ತೆ ಹಾಲಿನ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿರುವುದು ಚೇತೋಹಾರೀ ಬೆಳವಣಿಗೆಯಾಗಿದೆ

ಪರಿಸಂಹಾರ: ಒಟ್ಟಿನಲ್ಲಿ ಕತ್ತೆಯ ಹಾಲು ಒಂದು ಸ್ವಾದಿಷ್ಟ, ಸಮೃದ್ದ ಹಾಗು ಸಂಪೂರ್ಣ ಆಹಾರವೆಂದು ಕರೆಯಲು ಯಾವುದೇ ಅಡ್ಡಿಯಿಲ್ಲ. ಕಾರಣಾಂತರಗಳಿಂದ ಎದೆ ಹಾಲಿನ ಲಭ್ಯತೆ ಮಕ್ಕಳಿಗೆ ಕಡಿಮೆಯಾದಲ್ಲಿ ಕತ್ತೆ ಹಾಲೇ ಅತ್ಯುತ್ತಮ ಪರ್ಯಾಯ. ಹಸುವಿನ ಹಾಲಿನ ಅಲರ್ಜಿಯುಳ್ಳ ಮಕ್ಕಳಿಗಂತೂ ಇದು ವರದಾನವೇ ಸರಿ. ಆಬಾಲವೃದ್ದರಾದಿಯಾಗಿ ಪ್ರತಿಯೊಬ್ಬರಿಗೂ ಉತ್ಕೃಷ್ಟ ಪೋಷಕಾಂಶಗಳನ್ನು ಒದಗಿಸುವ ಜೊತೆಗೆ ಅನೇಕ ರೋಗ- ರುಜಿನಗಳಿಗೂ ದಿವ್ಯೌಷದಿಯಾದ ಕತ್ತೆಯ ಹಾಲಿನ ಲಭ್ಯತೆಯನ್ನು ಹೆಚ್ಚಿಸುವ ಜೊತೆಗೆ ಇದರ ಉಪಯುಕ್ತತೆಯ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸುವ ಕೆಲಸವೂ ಹೆಚ್ಚಾಗಬೇಕಿದೆ