ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ವನೌಷಧಿ

ಅಳಲೇಕಾಯಿ

-
1

ಇದು ಮೃದುವಿರೇಚನಕಾರಿ; ಬಾವು, ಶೋಭೆಗಳನ್ನು ಹರಿಸುತ್ತದೆ; ಕಫಘ್ನವೂ ಹೌದು. ಪಿತ್ತವನ್ನು ನಿವಾರಿಸಿ, ಚರ್ಮರೋಗಗಳನ್ನು ಪರಿಹರಿಸಿ ಅಗ್ನಿದೀಪನವನ್ನುಂಟು ಮಾಡುತ್ತದೆ. ರಸಾದಿಧಾತುಗಳನ್ನು ವೃದ್ಧಿಪಡಿಸುವ ಶಕ್ತಿ ಇದಕ್ಕಿರುವುದರಿಂದ ವನೌಷಧಿಗಳಲ್ಲಿ ಇದಕ್ಕೆ ಶ್ರೇಷ್ಠ ಸ್ಥಾನವಿದೆ. ಇದರಲ್ಲಿ ಬಾಲಹರೀತಕೀ ಎಂಬ ಇನ್ನೊಂದು ಜಾತಿಯೂ ಇದೆ. ಇದರ ಹೆಚ್ಚಿನ ಗುಣಧರ್ಮಗಳು ಅದೇ ಆದರೂ ಮೂಲವ್ಯಾಧಿ: ಗುಲ್ಮಗಳೇ ಮೊದಲಾದ ಕೆಲವೊಂದು ವ್ಯಾಧಿಗಳ ಮೇಲೆ ಇದು ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತದೆ. ಇದನ್ನು ಚೂರ್ಣರೂಪವಾಗಿಯೂ, ಕಷಾಯರೂಪವಾಗಿಯೂ ಉಪಯೋಗಿಸುವ ರೂಢಿಯಿದೆ. ಚೂರ್ಣವನ್ನು ಹೊತ್ತಿಗೆ ಕಾಲುತೊಲೆಯಿಂದ ಅರ್ಧ ತೊಲೆಯವರೆಗೆ ಕೊಡುವುದು ಸಾಮಾನ್ಯ ನಿಯಮ; ಅನುಪಾನಕ್ಕೆ ಜೇನು ಅಥವಾ ಬಿಸಿನೀರು ಕಷಾಯವಾದರೆ ೨ ರಿಂದ ೪ ಚಮಚೆಯವರೆಗೆ ಕೊಡಬೇಕು

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಅಣಿಲೇಕಾಯಿ/ಹರೀತಕೀ/ಹರ್, ಹರಡ್, ಹಡ್/ಕರಕೈ, ಕಡಕೈ/ಕರಕಚೆಟ್ಟು/ಹರಿಡಾ, ಹರಿಹಾ

ಅಳಿಲೇಕಾಯಿ/-/-/ಕಡುಕೇಮರಮ್/ಕರಕಾಪ್ಪ/ ಹರಿರಾ

-/-/-/-/ಕರಕಾಮ್/-