ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಬಾಲವನ

ಮಸಾಲೆ ದೋಸೆಯ ಪಕ್ಕ ಜೋಡಿ ಆಲೂಗೆಡ್ಡೆ

image_
ಶಶಿಕಲಾ ಎಸ್ ಜಿ
9945082141
1

ಮಕ್ಕಳೇ ಮಸಾಲಾ ದೋಸೆಯ ಉತ್ತಮ ಜೋಡಿ ಯಾವುದು ಹೇಳಿ?, ಎಂಥವರಿಗೂ ಮಸಾಲಾ ದೋಸೆ ಅಂದ ತಕ್ಷಣ ಅದರ ಜೊತೆ ಆಲೂಗೆಡ್ಡೆ ಪಲ್ಯ ಸಹ ನೆನಪಾಗುತ್ತೆ. ಇವೆರಡು ಒಂದನ್ನೊಂದು ಬಿಟ್ಟು ಇರಲಾರವು. ಇನ್ನು ಆಲೂಗೆಡ್ಡೆ ಚಿಪ್ಸ್ ಯಾರಿಗೆ ತಾನೆ ಇಷ್ಟ ಇಲ್ಲ. ವಿಶ್ವದಲ್ಲಿ ಅತಿ ಹೆಚ್ಚು ರಾಷ್ಟ್ರಗಳಲ್ಲಿ ಆಲೂಗೆಡ್ಡೆಯನ್ನು ತರಕಾರಿ ಬೆಳೆಯಾಗಿ ಉಪಯೋಗಿಸಲಾಗುತ್ತಿದ್ದು, ೧೨೫ ಕ್ಕೂ ಹೆಚ್ಚು ದೇಶಗಳಲ್ಲಿ ಆಲೂಗೆಡ್ಡೆಯನ್ನು ಬೆಳೆಯಲಾಗುತ್ತದೆ. ಆಲೂಗೆಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಗೆಡ್ಡೆ ಬೆಳೆ, ಇದರ ವೈಜ್ಞಾನಿಕ ಹೆಸರು ಸೊಲ್ಯಾನಮ್ ಟ್ಯೂಬರೋಸಮ್ (Solanum Tuberosum). ಆಲೂಗೆಡ್ಡೆ ಬೆಳೆಯು ಒಂದು ಗೆಡ್ಡೆ ಜಾತಿಯ ಬೆಳೆಯಾಗಿದ್ದು, ಬೇರಿನ ವಿಸ್ತಾರವಾದ ಭಾಗವೇ (Rhizome) ತಿನ್ನುವ ಆಲೂಗೆಡ್ಡೆಯಾಗಿ ಪರಿವರ್ತನೆಗೊಳ್ಳುತ್ತದೆ. ಬಿತ್ತನೆಯಾದ ಮೂರರಿಂದ ನಾಲ್ಕು ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಬೀಜದ ಗೆಡ್ಡೆಗಳನ್ನು ಬಳಸಿ ಆಲೂಗೆಡ್ಡೆಯನ್ನು ಬೆಳೆಯಲಾಗುತ್ತದೆ. ನೀವು ಸಹ ಮನೆಯಲ್ಲಿ ಮೊಳಕೆ ಬಂದಿರುವ ಆಲೂಗೆಡ್ಡೆಯನ್ನು ಹಿತ್ತಲಿನಲ್ಲಿ ಅಥವಾ ಕುಂಡಗಳಲ್ಲಿ ನೆಟ್ಟು ಆಲೂಗೆಡ್ಡೆ ಬೆಳೆದು ನೋಡಬಹುದು

ಆಲೂಗೆಡ್ಡೆ ಬೆಳೆಯ ಮೂಲ ದಕ್ಷಿಣ ಅಮೆರಿಕಾದ ಪೆರು, ಚೈನಾ, ಭಾರತ, ರಷ್ಯಾ, ಉಕ್ರೈನ್ ಮತ್ತು ಅಮೆರಿಕ ದೇಶಗಳು ಆಲೂಗೆಡ್ಡೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ನಮ್ಮ ದೇಶದಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ಹೆಚ್ಚು ಬೆಳೆಯುತ್ತಾರೆ, ಕರ್ನಾಟಕ ಆಲೂಗೆಡ್ಡೆ ಉತ್ಪಾದನೆಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹಾಗೆಯೇ ಅಕ್ಕಿ, ಗೋಧಿ ಮತ್ತು ಮೆಕ್ಕೆ ಜೋಳದ ನಂತರ ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿದೆ. ಆಲೂಗೆಡ್ಡೆ ತಿನ್ನುವುದರಿಂದ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಬಹುದು, ಆಲೂಗೆಡ್ಡೆಯ ಸಿಪ್ಪೆಯಿಂದ ಎಂತಹ ಗಾಯಗಳನ್ನು ಸಹ ವಾಸಿ ಮಾಡಬಹುದು, ಸುಟ್ಟ ಗಾಯಕ್ಕಂತೂ ಇದು ರಾಮಬಾಣ. ಮೆದುಳನ್ನು ಚುರುಕುಗೊಳಿಸುವ ಕಾರ್ಯವನ್ನು ಸಹ ಆಲೂಗೆಡ್ಡೆ ಮಾಡುತ್ತದೆ. ಆಲೂಗೆಡ್ಡೆಗೆ ಕ್ಯಾನ್ಸರ್ ರೋಗ, ಸ್ಕರ್ವಿ ರೋಗ ಮತ್ತು ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಡೆಗಟ್ಟುವ ಶಕ್ತಿ ಇದೆ. ಜೀರ್ಣಕ್ರಿಯೆಯನ್ನು ವೃದ್ಧಿಸುವುದರೊಂದಿಗೆ ಮೂಳೆಯನ್ನು ಗಟ್ಟಿಮಾಡುತ್ತದೆ