ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಆ್ಯಪ್ ಲೋಕ

ಅಗ್ರಿ ಕಿರುತಂತ್ರಾಂಶ

image_
ಪ್ರದೀಪ್ ಕುಮಾರ್
9538125130
1

ಅಗ್ರಿಆಪ್ವು ಒಂದು ಕ್ರಾಂತಿಕಾರಿ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ ಮತ್ತು ಕೃಷಿ ಸಂಬಂಧಿತವಾದ ಮಾಹಿತಿಯನ್ನು ಒದಗಿಸುತ್ತದೆ. ಅಲ್ಲದೆ ಇದು ಆನ್ಲೈನ್ ಕೃಷಿ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತದೆ. ರೈತರು / ಬಳಕೆದಾರರು ತಮಗೆ ಬೇಕಾದ ಜೈವಿಕ ಗೊಬ್ಬರ, ಸಾವಯವ ಗೊಬ್ಬರ, ಎನ್ಪಿಕೆ ಗೊಬ್ಬರ, ಕೀಟನಾಶಕ, ಕಳೆನಾಶಕ, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳನ್ನು ಈ ಆಫ್ನ ಸಹಾಯದಿಂದ ಖರೀದಿ ಮಾಡಬಹುದು. ಇದರಿಂದ ರೈತರಿಗೆ ಪರಿಕರಗಳ ಸಾಗಾಣಿಕೆ ವೆಚ್ಚ ಮತ್ತು ಸಮಯದ ಉಳಿತಾಯವಾಗುತ್ತದೆ. ರೈತರು ಖರೀದಿ ಮಾಡುವಾಗ ಪರಿಕರದ ಬೆಲೆಯನ್ನು ಆನ್ಲೈನ್ನಲ್ಲೆ ಕ್ರೆಡಿಟ್ / ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ನ ಮೂಲಕ ಪಾವತಿಸಬಹುದು ಅಥವಾ ವಸ್ತುವು ಮನೆಯ ವಿಳಾಸಕ್ಕೆ ತಲುಪಿದ ನಂತರ ಹಣವನ್ನು ಪಾವತಿಸಬಹುದು. ಈ ಆಪ್ ಅನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ವುಳ್ಳವರು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಆಪ್ ಡೌನ್ಲೋಡ್ ಯಶಸ್ವಿಯಾದ ನಂತರ ಮೊಬೈಲ್ ಪರದೆಯ ಮೇಲೆ ಅಗ್ರಿ ಆಪ್ನ ಶಾರ್ಟ್ಕಟ್ ಗುಂಡಿಯು ಗೋಚರವಾಗುತ್ತದೆ. ಈ ಗುಂಡಿಯನ್ನು ಒತ್ತಿ ಬಳಕೆದಾರರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮಾಹಿತಿಯನ್ನು ನೀಡಿ ಆಪ್ಗೆ ದಾಖಲಾಗಬೇಕು. ಬಳಕೆದಾರರು ಆಪ್ಗೆ ದಾಖಲಾದ ನಂತರ ಉಪಯೋಗಿಸಲು ತಕ್ಕಮಟ್ಟಿನ ಇಂಟರ್ನೆಟ್ ಸೌಲಭ್ಯ ಹಾಕಿಸಿ ಇಟ್ಟುಕೊಂಡಿರಬೇಕು. ಈ ಆಪ್ವನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಉಪಯೋಗಿಸಬಹುದಾಗಿದ್ದು, ಬಳಕೆದಾರರು ತಮಗೆ ಸುಲಭವೆನಿಸುವ ಭಾಷೆಯನ್ನು ಆಯ್ಕೆ ಮಾಡಿಕೊಂಡು ಉಪಯೋಗಿಸಬಹುದು. ಆಪ್ವನ್ನು ಬಳಸುವಾಗ ಮೊಬೈಲ್ ಪರದೆಯಲ್ಲಿ ತೋರಿಸುವ ಪ್ಯಾಕೇಜ್ ಆಫ್ ಪ್ರಾಕ್ಟಿsಸ್ಸ್ (Package of practices) ಗುಂಡಿಯನ್ನು ಒತ್ತುವ ಮೂಲಕ ರೈತರು / ಬಳಕೆದಾರರು ವಿವಿಧ ಕೃಷಿ ಬೆಳೆಗಳ ಸಮಗ್ರ ಬೇಸಾಯ ಪದ್ಧತಿ ಮಾಹಿತಿಯನ್ನು ಪಡೆಯಬಹುದು. ಈ ಆಪ್ವು ಕಬ್ಬು, ಭತ್ತ, ಮುಸುಕಿನ ಜೋಳ, ಕಲ್ಲಂಗಡಿ, ಹತ್ತಿ, ಗೋಧಿ, ಬಾಳೆ, ತೆಂಗು, ಅಡಿಕೆ, ಹಸಿಮೆಣಸಿನಕಾಯಿ, ನೆಲಗಡಲೆ, ಆಲೂಗೆಡ್ಡೆ, ಟೊಮೆಟೊ, ಮಾವು, ಪಪ್ಪಾಯ, ಕಾಫಿ, ದ್ರಾಕ್ಷಿ, ದಾಳಿಂಬೆ, ಗುಲಾಬಿ, ಮೆಣಸು, ಬೆಂಡು, ಅರಿಶಿನ, ಶುಂಠಿ, ಬಟಾಣಿ, ತೊಗರಿ, ಬದನೆ, ಮೂಲಂಗಿ, ಸಪೋಟಾ, ಕುಂಬಳಕಾಯಿ, ಸೀಬೆ, ಕಡಲೆ, ಬೆಟ್ಟದನಲ್ಲಿ, ನುಗ್ಗೆಕಾಯಿ, ಹಲಸು, ಸೌತೇಕಾಯಿ, ರಾಗಿ, ಕೋಸು, ನಿಂಬೆ, ಸೂರ್ಯಕಾಂತಿ, ಚೆಂಡುಹೂ, ಹಾಗಲಕಾಯಿ, ಸೋಯಾಅವರೆ, ಬೆಳ್ಳುಳ್ಳಿ, ಮಟ್ಟೆಕೋಸು, ಕೊತ್ತಂಬರಿ, ಏಲಕ್ಕಿ, ಈರುಳ್ಳಿ, ದೊಡ್ಡಮೆಣಸಿನಕಾಯಿ, ಕ್ಯಾರೆಟ್ ಮೊದಲಾದ ಬೆಳೆಗಳ ಸಮಗ್ರ ಬೇಸಾಯ ಪದ್ಧತಿಯ ಮಾಹಿತಿಯನ್ನು ಹೊಂದಿದೆ. ಸಾಮಾನ್ಯವಾಗಿ ಪ್ರತಿ ಬೆಳೆಯ ಸಮಗ್ರ ಬೇಸಾಯ ಪದ್ಧತಿಯು ಆ ಬೆಳೆಯ ತಳಿಗಳು, ಬೆಳೆ ಬೆಳೆಯಲು ಸೂಕ್ತವಾದ ಮಣ್ಣು, ಬೆಳೆ ಬೆಳೆಯಲು ಸೂಕ್ತವಾದ ಹವಾಮಾನ, ಬೆಳೆ ಬೆಳೆಯುವ ಪದ್ಧತಿ, ರಸಗೊಬ್ಬರಗಳ ಬಳಕೆ, ಸಸ್ಯ ಸಂರಕ್ಷಣೆಯ ಮಾಹಿತಿಯನ್ನು ಒಳಗೊಂಡಿರುತ್ತದೆ. ರೈತರು / ಬಳಕೆದಾರರು ಆಫ್ ಪರದೆಯಲ್ಲಿ ತೋರಿಸುವ ಬೆಳೆಗಳ ಪಟ್ಟಿಯಲ್ಲಿ ತಮಗೆ ಬೇಕಾದ ಬೆಳೆಯ ಚಿತ್ರದ ಮೇಲೆ ಕ್ಲಿಕ್ ಮಾಡಿ ಅ ಬೆಳೆಯ ಸಮಗ್ರ ಬೇಸಾಯ ಪದ್ಧತಿಯ ಪಿಡಿಎಫ್ ಕಡತವನ್ನು ಪಡೆದುಕೊಳ್ಳಬಹುದು. ಆಪ್ವು ಮೊಬೈಲ್ ಪರದೆಯಲ್ಲಿ ತೋರಿಸುವ ಕೃಷಿ ಪರಿಣಿತರ ಜೊತೆ ಸಂಭಾಷಣೆ / ಚಾಟ್ ವಿಥ್ ಎಕ್ಸ್ಪರ್ಟ್ (chat with expert) ಗುಂಡಿಯನ್ನು ಒತ್ತಿ ಕೃಷಿ ಪರಿಣಿತ ತಜ್ಞ / ವಿಜ್ಞಾನಿಗಳ ಜೊತೆ ಸಂಭಾಷಣೆ ಮಾಡಬಹುದು. ರೈತರು ತಮ್ಮ ಬೆಳೆಗೆ ಬಂದಿರುವ ರೋಗ / ಸಮಸ್ಯೆಯ ಚಿತ್ರ, ವೀಡಿಯೊ, ಆಡಿಯೊ ಅಪ್ಲೋಡ್ ಮಾಡಬಹುದು. ತಜ್ಞರು ಸಮಸ್ಯೆಯನ್ನು ವಿಶ್ಲೇಷಿಸಿ ಸೂಕ್ತ ಸಲಹೆಯನ್ನು ನೀಡುತ್ತಾರೆ