ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಮೌಲ್ಯವರ್ಧನೆ

ಹಲಸಿನ ಬೀಜದ ಲಾಡು

ಡಾ. ಅಕ್ಕಮಹಾದೇವಿ ಡಿ. ಅಗಸಿಮನಿ
9448933679
1

ಬೇಕಾದ ಸಾಮಗ್ರಿಗಳು

ಬೇಯಿಸಿದ ಹಲಸಿನ, ಬೀಜದ ಪೇಸ್ಟ್ - ೧ ಲೋಟ, ತೆಂಗಿನ ತುರಿ - ೧ ಲೋಟ, ಬೆಲ್ಲ- ೧ ಲೋಟ, ಏಲಕ್ಕಿ ಪುಡಿ - ೧/೨ ಚಮಚ, ಉಪ್ಪು - ಚಿಟಿಕೆ , ಮೈದಾ ಹಿಟ್ಟು - ೧/೪ ಲೋಟ, ಸಕ್ಕರೆ ೧/೨ ಟೀ ಚಮಚ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಗಸಗಸೆ ೨ ಟೀ ಚಮಚ (ಬೇಕಾದಲ್ಲಿ)

ಮಾಡುವ ವಿಧಾನ: ಹಲಸಿನ ಬೀಜದ ಪೇಸ್ಟ್, ತೆಂಗಿನ ತುರಿ ಹಾಗೂ ಬೆಲ್ಲ ಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ಮಿಶ್ರಣವು ನೀರು ಬಿಡುವುದರಿಂದ ಇದನ್ನು ದಪ್ಪನೆಯ ತಳದ ಪಾತ್ರೆಯಲ್ಲಿ ಮಂದ ಉರಿಯಲ್ಲಿ ನೀರು ಹೋಗುವವರೆಗೂ ಬೇಯಿಸಬೇಕು. ಆರಿದ ನಂತರ ಇದಕ್ಕೆ ಏಲಕ್ಕಿ ಪುಡಿ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಗಸಗಸೆ ಹಾಕಿ ಮಿಶ್ರಣ ಮಾಡಬೇಕು. ನಂತರ ಅದರಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಬೋಂಡಾ ಹದಕ್ಕೆ ಕಲಸಿಟ್ಟ ಮೈದಾ ಹಿಟ್ಟಿನಲ್ಲಿ ಅದ್ದಿ (ಬೋಂಡಾ ತರಹ) ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಬೇಕು.