ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
9449623275
1

ಕಿರಿದಲ್ಲಿ ಹಿರಿದನ್ನು ಸಾಧಿಸಿರುವ ಅಪರೂಪದ ರೈತ ಕೊಪ್ಪ ತಾಲ್ಲೂಕಿನ ಹಾಲ್ಮತ್ತೂರಿನ ವೈ.ಎನ್. ಕಿರಣ್ರವರು ಸಾವಯವ ಕೃಷಿಯಲ್ಲಿ ಬಹು ಬೆಳೆ ಪದ್ಧತಿಯನ್ನು ಅನುಸರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಿರಣ್ರವರು ಓದಿದ್ದು ಡಿಪ್ಲೊಮಾ. ಕಂಪನಿಯಲ್ಲಿ ಉತ್ತಮ ವೇತನದ ನೌಕರಿ ದೊರೆಯುತ್ತಿದ್ದರೂ, ಕೃಷಿಯ ಮೇಲಿನ ತೀವ್ರ ಸೆಳೆತ ಇವರನ್ನು ಕೃಷಿಕರನ್ನಾಗಿಸಿತು. ತಮ್ಮ ಕುಟುಂಬದಿಂದ ಬಂದ ಮುಕ್ಕಾಲು ಎಕರೆಯಲ್ಲಿಯೇ ಕೃಷಿಯ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಕನಸು ಇಂದು ನನಸಾಗಿಸಿದೆ. ಇವರು ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿ ಅಡಿಕೆ, ಬಾಳೆ, ಕಾಫಿ, ಕಾಳುಮೆಣಸು, ಏಲಕ್ಕಿ ಹೀಗೆ ಬಹು ಬೆಳೆ ಪದ್ಧತಿಯನ್ನು ಅನುಸರಿಸಿ ಎಲ್ಲರೂ ಇತ್ತ ನೋಡುವಂತೆ ಮಾಡಿದ್ದಾರೆ. ಅಲ್ಲದೇ ಇಡೀ ಜಮೀನಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೇ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಸ್ಲರಿ, ಗಂಜಲಗಳನ್ನು ತೋಟಕ್ಕೆ ಹರಿಸಿ ಭೂಮಿಯನ್ನು ಫಲವತ್ತಾಗಿಸಿದ್ದಾರೆ.

3

ಸಾವಯವ ಪದ್ಧತಿ ಅನುಸರಿಸಲು ೨೦೦೭ರಲ್ಲಿ ಎರಡು ಹಸುಗಳನ್ನು ಸಾಕಿ ಹೈನುಗಾರಿಕೆ ಆರಂಭಿಸಿದ್ದರು. ಇಂದು ಏಳೆಂಟು ಹಸುಗಳಿಂದ ದಿನವೊಂದಕ್ಕೆ ೧೦೦ ಲೀಟರ್ಗೂ ಹೆಚ್ಚು ಹಾಲನ್ನು ಪಡೆಯುತ್ತಿದ್ದಾರೆ. ಇದರಿಂದ ಮನೆಯ ವ್ಯವಹಾರಗಳಿಗೆ ಆರ್ಥಿಕ ಚೈತನ್ಯ ತುಂಬಿದಂತಾಗಿದೆ. ಜಮೀನಿಗೆ ಬೇಸಾಯ, ಗಿಡಕ್ಕಲ್ಲ ಎಂಬ ತಮ್ಮ ತಂದೆಯ ಜೀವನಾನುಭವದ ಪಾಠ ಇವರಿಗೆ ತನ್ನ ಕೃಷಿ ಭೂಮಿಯನ್ನು ಸುಸ್ಥಿತಿಯಲ್ಲಿಡಬೇಕೆಂಬ ಬಗೆಯನ್ನು ಅರಿತು ಇಂದು ಇವರ ತೋಟಗಾರಿಕೆ ಕ್ಷೇತ್ರವೂ ನಳನಳಿಸುವಂತೆ ಮಾಡಿದ್ದಾರೆ. ಇವರು ಬಹು ಬೆಳೆ ಪದ್ಧತಿ ಅನುಸರಿಸು ತ್ತಿರುವುದರಿಂದ ಒಂದಲ್ಲಾ ಒಂದು ಬೆಳೆ ಕೈ ಹಿಡಿಯುತ್ತದೆ ಎಂಬುದು ಇವರ ಆತ್ಮ ವಿಶ್ವಾಸ. ತಮ್ಮಲ್ಲಿರುವ ಅಲ್ಪ ಜಮೀನನ್ನೇ ಸ್ವಲ್ಪವೂ ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಂಡಿರುವ ಯಶಸ್ವಿ ರೈತ ಕಿರಣ್ ಎಂದರೆ ತಪ್ಪಾಗಲಾರದು. ಇದಲ್ಲದೆ ತನ್ನ ಸುತ್ತಲಿನ ರೈತರು ಮಾಹಿತಿಯನ್ನು ಕೇಳಿದಲ್ಲಿ ಅವರಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಇಂತಹ ಅಪರೂಪ ರೈತನನ್ನು ಕಾಣಬೇಕೆಂದಲ್ಲಿ ಕೊಪ್ಪ ತಾಲ್ಲೂಕಿನ ಹಾಲ್ಮತ್ತೂರಿನ ಗ್ರಾಮಕ್ಕೆ ಭೇಟಿ ಕೊಟ್ಟರೆ ತಿಳಿದೀತು.

567