ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಏಲಕ್ಕಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ

ಡಾ. ಹೆಚ್. ನಾರಾಯಣಸ್ವಾಮಿ
9448159375
1

ಏಲಕ್ಕಿ ಮುಖ್ಯವಾದ ಸಾಂಬಾರು ಬೆಳೆ. ಈ ಬೆಳೆಗೆ ಬರುವ ಎಲೆ ಚುಕ್ಕೆ ರೋಗವು ಪಿಲ್ಲೋಸ್ಟಿಕ್ಟಾ ಎಲಿಟೀರಿಯೇ ಎಂಬ ರೋಗಾಣುವಿನಿಂದ ಉಂಟಾಗುವುದು. ಮಳೆಗಾಲದ ಮೊದಲು ಎಲೆಗಳ ಮೇಲೆ ಸಣ್ಣ ಸಣ್ಣ ಕಂದು ಬಣ್ಣದ ಮಚ್ಚೆಗಳಾಗಿ ಉಂಟಾಗುತ್ತವೆ, ನಂತರ ಮಳೆಗಾಲದಲ್ಲಿ ಇವು ದೊಡ್ಡದಾಗಿ ಇಡೀ ಎಲೆಗಳಿಗೆ ಹರಡಿದಾಗ ಎಲೆಗಳು ಒಣಗುತ್ತವೆ. ಇದರಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ಎಲೆಗಳ ಸಂಖ್ಯೆ, ಗಾತ್ರ, ಉದ್ದ ಕಡಿಮೆಯಾಗುತ್ತವೆ. ಇದರಿಂದ ಇಳುವರಿ ಗಣನೀಯವಾಗಿ ಕಡಿಮೆಯಾಗುವುದು. ಇದು ಒಂದು ಶಿಲೀಂಧ್ರ ರೋಗ ಸಸಿಮಡಿಯಲ್ಲಿ ಹೆಚ್ಚು ಭಾದೆಯನ್ನುಂಟು ಮಾಡುವುದು, ಇದರಿಂದ ಸಸಿಗಳು ಸಾಯುತ್ತವೆ. ಆರೋಗ್ಯವಂತ ಸಸಿಗಳನ್ನು ಪಡೆಯಲು ಕಷ್ಟವಾಗುವುದು. ರೋಗಪೀಡಿತ ಸಸಿಗಳನ್ನು ನಾಟಿ ಮಾಡಿದಲ್ಲಿ ತೋಟದಲ್ಲಿನ ಬೆಳೆಗೆ ಹಾನಿ ಮಾಡುವುದು. ಬೆಳೆಯ ಎಲೆಗಳು ರೋಗಕ್ಕೆ ಹೆಚ್ಚು ತುತ್ತಾಗುತ್ತವೆ. ಬಿಟ್ಟು ಬಿಟ್ಟು ಬರುವ ಮಳೆ, ಮೋಡ ಕವಿದ ವಾತಾವರಣ ಇದ್ದಲ್ಲಿ ರೋಗ ಹೆಚ್ಚು.

ಹತೋಟಿ :

  • ರೋಗಪೀಡಿತ ಎಲೆಗಳನ್ನು ಕತ್ತರಿಸಿ ತೆಗೆಯುವುದು
  • ಮ್ಯಾಂಕೊಜೆಬ್ ಶಿಲೀಂಧ್ರವನ್ನು ಮಳೆಗಾಲಕ್ಕೆ ಮೊದಲೇ ಏಪ್ರಿಲ್ ತಿಂಗಳಿನಲ್ಲಿ ಸಿಂಪರಣೆ ಮಾಡುವುದು
  • ರೋಗ ಮತ್ತೆ ಕಂಡುಬಂದಲ್ಲಿ ಜೂನ್ ತಿಂಗಳ ೧೫ ದಿನಗಳ ನಂತರ ಎರಡು ಸಿಂಪರಣೆ ಕೈಗೊಳ್ಳುವುದು
  •