ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಅರಿವೆ ಗುರು

ಸೋಲಾರ್ ಆನ್ ಗ್ರಿಡ್ ಆಫ್ ಗ್ರಿಡ್

image_
ಅನಿಲ್ ಕುಮರ್
9449837309
1

ಬಾಪಟ್ ಅವರಿಗೆ ಸೋಲಾರ್ ತಂತ್ರಜ್ಞಾನ ಹಂಚಲು ಹಾಗೂ ಅಳವಡಿಸಿಕೊಂಡು ಮಾದರಿಯಾಗಲು ತುಂಬಾ ಆಸೆ. ಆಸೆಗೆ ತಕ್ಕಂತೆ ಪ್ರಯೋಗಗಳನ್ನು ಮಾಡುವ ಪ್ರಯತ್ನಶೀಲ ವ್ಯಕ್ತಿ. ಇವರ ಸಾಧನೆ ಬಗ್ಗೆ ನಮ್ಮ ಪತ್ರಿಕೆಯ ಸಂಪುಟ ೧, ಸಂಚಿಕೆ ೧೦, ಅಕ್ಟೋಬರ್, ೨೦೧೫ರಲ್ಲಿ ಬರೆಯಲಾಗಿತ್ತು. ಇವರು ನಮ್ಮೊಡನೆ ಸೋಲಾರ್ ಪಂಪು ಅಳವಡಿಸುವ ಚರ್ಚೆ ಮಾಡುತ್ತಾ ಅಲ್ಲ ಮರಾಯ ಸೂರ್ಯನ ಬೆಳಕು ಕಡಿಮೆಯಾದಾಗ ಪಂಪು ಕಾರ್ಯ ಮಾಡುತ್ತೊ? ಮಾಡುತ್ತೆ ಎಂದೆ. ಮಾಡುತ್ತೆ ಅನ್ನುವುದಾದಲ್ಲಿ ನೀರೆತ್ತುವ ಅಗತ್ಯ ಇಲ್ಲದಾಗ ಅಥವಾ ನನಗೆ ಅಗತ್ಯವಿದ್ದಾಗ ಈ ಸೋಲಾರ್ ಶಕ್ತಿಯನ್ನ ನನ್ನ ಅಡಿಕೆ ಸುಲಿಯುವ ಮಶೀನ್ ಓಡಿಸಬಹುದೆ? ಎಂದು ಕೇಳಿದರು. ಪಂಪ್ಗೆ ಸ್ವಲ್ಪ ಹೆಚ್ಚು ಕಡಿಮೆ ಶಕ್ತಿ ಒದಗಿಸಿದರೆ ನೀರೆತ್ತುವ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಇಂತಹ ಸಂದರ್ಭ ನಿರ್ವಹಿಸಲು ವೇರಿಯಬಲ್ ಪ್ರಿಕ್ವೆನ್ಸಿಡ್ರೈವ್ ಅಳವಡಿಸಿರುತ್ತಾರೆ. ಆದರೆ ವೆಲ್ಡಿಂಗ್ ಮಾಡಲು ನಿಗದಿತ ಶಕ್ತಿ ಅಗತ್ಯವಿದ್ದು ಇದು ವೇರಿಯಬಲ್ ಪ್ರಿಕ್ವೆನ್ಸಿಡ್ರೈವ್ನಿಂದ ಸಾಧ್ಯವಾಗದು.

3

ನಾನು ಇದನ್ನು ಪ್ರಸ್ತಾಪಿಸಲು ಕಾರಣ ಸೋಲಾರ್ ಅಳವಡಿಸುವಾಗ ಇಂತಹ ಹಲವಾರು ಅಂಶಗಳ ತಿಳುವಳಿಕೆ ಬೇಕು. ಇಲ್ಲವಾದಲ್ಲಿ ಸೋಲಾರ್ನಲ್ಲಿ ಬ್ಯಾಟರಿ ಇಲ್ಲದೆ ಪಂಪು ಓಡುತ್ತೆ. ಹಾಗೆ ಅಡಿಕೆ ಸುಲಿಯೋ ಯಂತ್ರ ಸಹ ಓಡುತ್ತೆ. ಅಂದುಕೊಂಡು ಅಳವಡಿಸಿಕೊಂಡು ಬವಣೆ ಪಡುವುದಕ್ಕಿಂತ ಯಾವ ರೀತಿಯ ಸೋಲಾರ್ ವ್ಯವಸ್ಥೆಗಳು ಲಭ್ಯ. ಪಂಪಿಗೆ ಯಾವ ರೀತಿಯದ್ದು ಬೇಕು. ಅಡಿಕೆ ಸುಲಿಯುವ ಮಶೀನ್ಗೆ ಯಾವ ರೀತಿಯದ್ದು ಬೇಕು ಇತ್ಯಾದಿ ಅರಿತು ಅಳವಡಿಸಿಕೊಂಡರೆ ಉತ್ತಮ. ಈ ಹಿನ್ನೆಲೆಯಲ್ಲಿ ಅನಿಲ್ ಅವರ ಜೊತೆ ಚರ್ಚಿಸಿ ಮಾಹಿತಿ ಒದಗಿಸಲಾಗಿದೆ.ಸೋಲಾರ್ ವಿದ್ಯುತ್ ಫಲಕ ಅಳವಡಿಸುವಾಗ ಆಫ್ಗ್ರಿಡ್ ಅಥವಾ ಗ್ರಿಡ್ ಟೈ ಯಾವುದು ಅಳವಡಿಸಬೇಕು ಅಂತ ಕೇಳುತ್ತಾರೆ. ಹೀಗಂದರೆ ಏನು ಅನ್ನುವುದು ಪ್ರಮುಖ. ಇಲ್ಲಿ ಗ್ರಿಡ್ ಅಂದ್ರೆ ವಿದ್ಯುತ್ ಪ್ರಸರಣ ಸಂಸ್ಥೆಗಳು ವಿದ್ಯುತ್ ಸಾಗಣೆಗಾಗಿ ಮಾಡಿಕೊಂಡ ಪ್ರಸರಣಾ ಜಾಲ. ಈ ಜಾಲಕ್ಕೂ ನಮ್ಮ ಸೋಲಾರ್ ವ್ಯವಸ್ಥೆಗೂ ಸಂಪರ್ಕ ಇಲ್ಲದೆ ಇರುವಂತಹ ವ್ಯವಸ್ಥೆಗೆ ವಿದ್ಯುತ್ ಜಾಲ ಸಂಪರ್ಕರಹಿತ ಸೋಲಾರ್ ವ್ಯವಸ್ಥೆ (ಆಫ್ಗ್ರಿಡ್ ಸೋಲಾರ್ ಸಿಸ್ಟಮ್) ಅಂತಾರೆ. ಇದರಲ್ಲಿ ಎರಡು ಮಾದರಿ ವ್ಯವಸ್ಥೆಗಳಿವೆ. ಒಂದು ಡಿಸಿ ವಿದ್ಯುತ್ ವ್ಯವಸ್ಥೆ ಇನ್ನೊಂದು ಎಸಿ ವಿದ್ಯುತ್ ವ್ಯವಸ್ಥೆ.

5

ಡಿಸಿ ವಿದ್ಯುತ್ ವ್ಯವಸ್ಥೆಯಲ್ಲಿ ಸೌರ ಫಲಕದಿಂದ ನೇರವಾಗಿ ಉತ್ಪಾದಿತ ಶಕ್ತಿ ಬ್ಯಾಟರಿಗೆ ತುಂಬುತ್ತದೆ. ಅಂದರೆ ಉತ್ಪಾದಿತ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹ ಆಗುತ್ತದೆ. ಆದರೆ ಸೌರಫಲಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ ಬ್ಯಾಟರಿಗೆ ಚಾರ್ಜ್ ಆಗಲು ಬೇಕಾಗುವ ವಿದ್ಯುತ್ ಪ್ರಮಾಣಗಳ ವ್ಯತ್ಯಾಸ ಸರಿದೂಗಿಸಲು ಚಾರ್ಜ್ ಕಂಟ್ರೋಲರ್ ಬಳಸುತ್ತಾರೆ. ಬ್ಯಾಟರಿಯಿಂದ ವಿದ್ಯುತ್ ಬಳಸಬಹುದು. ಬ್ಯಾಟರಿಯಿಂದ ಬರುವ ವಿದ್ಯುತ್ ಡಿಸಿ ವಿದ್ಯುತ್ ಆಗಿರುವುದರಿಂದ ಹಾಲಿ ಬಳಸುವ ಎಸಿ ವಿದ್ಯುತ್ ಬಳಸುವ ಉಪಕರಣಗಳಿಗೆ ಇದರಿಂದ ಸಂಪರ್ಕ ಕೊಡಲು ಬರುವುದಿಲ್ಲ.ಇದಕ್ಕೆ ಪ್ರತ್ಯೇಕ ವೈರಿಂಗ್ ಡಿಸಿ ಬಲ್ಬು ಪ್ಯಾನ್ ಇತ್ಯಾದಿ ಅಳವಡಿಸಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಎಸಿ-ಡಿಸಿ ಬದಲಾವಣೆ ನಷ್ಟವಿರುವುದಿಲ್ಲ. ಆರ್ಥಿಕವಾಗಿ ತುಂಬಾ ಉತ್ತಮ ವ್ಯವಸ್ಥೆ. ಪ್ರಸ್ತುತ ಸೋಲಾರ್ ಬೀದಿ ದೀಪಗಳು ಈ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಎಲ್ಲಿ ವಿದ್ಯುತ್ ಪ್ರಸರಣಾ ವ್ಯವಸ್ಥೆ ಇರುವುದಿಲ್ಲವೋ ಅಲ್ಲಿಗೆ ಇದು ಸೂಕ್ತ.ಎಸಿ ವಿದ್ಯುತ್ ವ್ಯವಸ್ಥೆಯಲ್ಲಿ ಡಿಸಿ ಉತ್ಪಾದನೆಯಲ್ಲಿ ಬಳಸಿದ ಎಲ್ಲಾ ಉಪಕರಣಗಳ ಜೊತೆ ಸೌರಶಕ್ತಿ ಯು ಪಿ ಎಸ್ ನಿರ್ವಾಹಕ/ ಇನ್ವರ್ಟರ್ ಎಸಿ-ಡಿಸಿ(ಪರಿವರ್ತಕ) ಇರುತ್ತದೆ. ಪರಿವರ್ತಕದಿಂದ ಬಂದ ವಿದ್ಯುತ್ ಅನ್ನು ಹಾಲಿ ಈಗಿರುವ ಮನೆ ವಿದ್ಯುತ್ ವ್ಯವಸ್ಥೆ ಬದಲಾಯಿಸದೆ ಬಳಸಬಹುದು. ನೇರವಾಗಿ ಎಸಿ ಉಪಕರಣಗಳನ್ನು ಬಳಸಬಹುದು. ನಮಗೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಮತ್ತು ಸಂಗ್ರಹಣೆಗೆ ವ್ಯವಸ್ಥೆಯನ್ನು ಲೆಕ್ಕ ಹಾಕಿ ವ್ಯವಸ್ಥೆ ವಿನ್ಯಾಸ ಮಾಡಬೇಕು.

7

ಗ್ರಿಡ್ ಟೈ ಸಿಸ್ಟಮ್ ಅಂದರೆ ವಿದ್ಯುತ್ ಪ್ರಸರಣಾ ಜಾಲಕ್ಕೆ ಸಂಪರ್ಕವಿರುವ ಸೌರ ವಿದ್ಯುತ್ ಉತ್ಪಾದನಾ ಘಟಕ.ಸೌರಫಲಕದಿಂದ ಬಂದ ವಿದ್ಯುತ್ ಸೋಲಾರ್ ವಿದ್ಯುತ್ ಜಾಲ ಸಂಪರ್ಕ ಪರಿವರ್ತಕಕ್ಕೆ ಬರುತ್ತದೆ. ಇಲ್ಲಿಂದ ಒಂದು ಮನೆ ಬಳಕೆ ಅಥವಾ ನೀರಾವರಿ ಪಂಪು ಇತ್ಯಾದಿಗಳ ಬಳಕೆಗೆ ಹೋಗುತ್ತದೆ. ಇನ್ನೊಂದು ಪ್ರಸರಣಾ ಜಾಲಕ್ಕೆ(ಗ್ರಿಡ್)ಗೆ ಹೋಗುತ್ತದೆ. ಪರಿವರ್ತಕ ಮತ್ತು ವಿದ್ಯುತ್ ಜಾಲಕ್ಕೆ ಮಧ್ಯ ವಿದ್ಯುತ್ ಮೀಟರ್ ಇರುತ್ತದೆ. ಇದು ಜಾಲದಿಂದ ನಾವೆಷ್ಟು ವಿದ್ಯುತ್ ತೆಗೆದುಕೊಂಡಿದ್ದೇವೆ ಹಾಗೂ ಜಾಲಕ್ಕೆ ನಾವೆಷ್ಟು ವಿದ್ಯುತ್ ಸೋಲಾರ್ ವ್ಯವಸ್ಥೆಯಿಂದ ಒದಗಿಸಿದ್ದೇವೆ ಎಂದು ಲೆಕ್ಕ ಹಾಕುತ್ತದೆ.ಗ್ರಿಡ್ ಟೈ ಸಿಸ್ಟಮ್ನಲ್ಲಿ ಸಹ ಬ್ಯಾಟರಿಗಳನ್ನು ಬ್ಯಾಕ್ ಅಪ್ಗಾಗಿ ಒದಗಿಸಬಹುದು. ಇಂತಹ ವ್ಯವಸ್ಥೆ ಗ್ರಿಡ್ ಟೈನಲ್ಲಿ ಇರುವ ಸಮಸ್ಯೆಯಾದ ವಿದ್ಯುತ್ ಇಲ್ಲದಾಗ ನಡೆಯದು ಎಂಬುದನ್ನು ಪರಿಹರಿಸಬಹುದು.

ಹೈಬ್ರಿಡ್ ಸೋಲಾರ್ ವ್ಯವಸ್ಥೆ

ಈ ವ್ಯವಸ್ಥೆಯಲ್ಲಿ ವಿವಿಧ ಮೂಲಗಳಿಂದ ಉತ್ಪಾದನೆಯಾಗುವ ವಿದ್ಯುತ್ಗಳನ್ನು ಸಮಗ್ರವಾಗಿ ಬಳಸಬಹುದು. ಸೋಲಾರ್ ವಿದ್ಯುತ್, ಗಾಳಿ ಯಂತ್ರಗಳಿಂದ ಬರುವ ವಿದ್ಯುತ್, ಪ್ರಸರಣ ಜಾಲದಿಂದ ಬರುವ ವಿದ್ಯುತ್, ಇತರೆ ಜೈವಿಕ ವಿದ್ಯುತ್ ಉತ್ಪಾದನಾ ಘಟಕ ಎಲ್ಲವನ್ನೂ ಮೇಳೈಸಿ ಬಳಸುವ ವ್ಯವಸ್ಥೆ ಇದು

ನಮಗೆ ಯಾವುದರ ಅಗತ್ಯವಿದೆ ಎಂಬುದನ್ನು ಅರಿತು ಅಳವಡಿಸಿದರೆ ಸೋಲಾರ್ ವ್ಯವಸ್ಥೆಯ ಪರಿಪೂರ್ಣ ಸಮರ್ಥ ಬಳಕೆ ಸಾಧ್ಯ.

12