ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಇತ್ತೀಚಿಗೆ ತೆಂಗಿನಲ್ಲಿ ಕಾಣಿಸಿಕೊಂಡ ಸ್ಲಗ್ ಮರಿಹುಳು (ಡರ್ನ್ ನರೇರಿಯ ಮೂರೆ.) ಮತ್ತು ಅದರ ನಿರ್ವಹಣೆ

ಡಾ. ಹೆಚ್.ಪಿ. ಮಹೇಶ್ವರಪ್ಪ
9901093240
12

ಈಣ ಈ ಕೀಟದ ಭಾದೆಯು ಷಣ್ಮುಗಪ್ಪ ಮತ್ತು ಶಂಕರಲಿಂಗಯ್ಯ ಎಂಬುವವರ ತೋಟದಲ್ಲಿ ಸರಿ ಸುಮಾರೂ ೧೫೪ ಮರಗಳಲ್ಲಿ ಕಾಣಿಸಿಕೊಂಡಿದೆ. ಈ ಕೀಟವು ಕರ್ನಾಟಕದಾದ್ಯಂತ ವಿಸ್ತಾರಗೊಳ್ಳದಂತೆ ತಡೆಯುವುದು ಸೂಕ್ತ ಆದ್ದರಿಂದ ಈ ಲೇಖನ.ಸ್ಲಗ್ ಮರಿಹುಳು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ೧೯೯೫ ರಲ್ಲಿ ಕಾಣಿಸಿಕೊಂಡಿತ್ತು. ಹಾಗೆಯೇ ನಮ್ಮ ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ೨೦೦೭, ೨೦೧೦ ಮತ್ತು ೨೦೧೩ ರಲ್ಲಿ ಕಾಣಿಸಿಕೊಂಡಿತ್ತು

 

ಜೀವನ ಚಕ್ರ

56

ಈ ಹುಳುವಿನ ಮೊಟ್ಟೆಯು ತುಂಬಾ ತೆಳು, ಅಗಲ ಹಾಗೂ ಚಪ್ಪಟೆಯಾಗಿರುತ್ತದೆ. ಇದನ್ನು ಗುರುತಿಸುವುದು ಸ್ವಲ್ಪ ಕಷ್ಟಕರ. ಮರಿಹುಳು ಮೇಲ್ಮೈ ಲಕ್ಷಣವು ಕಂದುಮಿಶ್ರಿತ ಹಸಿರು ಬಣ್ಣವಿದ್ದು, ಹಳದಿ ಬಣ್ಣವು ಗೆರೆಯ ಮಧ್ಯದಲ್ಲಿರುತ್ತದೆ. ದೇಹದ ಮೇಲೆಲ್ಲ ತುರಿಕೆ ಬರಿಸುವಂತಹ ಕೂದಲು ಗಳಿರುತ್ತವೆ. ಮರಿಹುಳುವು ೨೨ ರಿಂದ ೪೬ ದಿನಗಳ ನಂತರ ಕೋಶಾವಸ್ಥೆಗೆ ಹೋಗುವುದು.ಕೋಶಾವಸ್ಥೆ ಹುಳು ಕಂದು ಬಣ್ಣದಿಂದ ಕೂಡಿದ್ದು ಆದರ ಸೂತ್ತಲೂ ಕಂದು ರೇಷ್ಮೆಯಂತಹ ನೂಲು ಆವರಿಸಿಕೊಂಡಿರುತ್ತದೆ. ಕೋಶವು ಎಲೆಯ ಭಾಗಗಳಿಗೆ ೯-೧೩ ದಿನಗಳವರೆಗೆ ಅಂಟಿಕೊಂಡಿದ್ದು ನಂತರ ಇದರಿಂದ ಪ್ರಬುದ್ಧ ಪತಂಗವು ಹೊರಹೊಮ್ಮುವುದು. ಪತಂಗ ಗಾತ್ರದಲ್ಲಿ ಚಿಕ್ಕದಿದ್ದು, ಕಪ್ಪನೆಯ ಗೆರೆಗಳನ್ನು ಹೊಂದಿ ಕಂದುಮಿಶ್ರಿತ ಬಣ್ಣ ದಿಂದಿರುತ್ತದೆ. ಹೆಣ್ಣು ಪತಂಗವು ಗಾತ್ರದಲ್ಲಿ ಗಂಡಿಗಿಂತ ದೊಡ್ಡದಿದ್ದು ಸರಿ ಸುಮಾರು ೧೮೦ ರಿಂದ ೨೦೦ ಮೊಟ್ಟೆಗಳನ್ನು ಗುಂಪಾಗಿ ಎಲೆಯ ಮೇಲೆ ಇಡುವುದು

8

ಹಾನಿಯ ಲಕ್ಷಣಗಳು: ಹಾನಿಕಾರಕ ಹಂತವು ಮರಿಹುಳುವಾಗಿದ್ದು, ಇದು ಮೊದಲಿಗೆ ಎಲೆಯ ಅಂಚನ್ನು ತಿನ್ನುವುದು ನಂತರದಲ್ಲಿ ಎಲೆಯನ್ನು ಸಂಪೂರ್ಣವಾಗಿ ತಿಂದು ಬರೀ ಕಡ್ಡಿಯನ್ನು ಮಾತ್ರ ಉಳಿಸುತ್ತದೆ. ಇದಲ್ಲದೆ, ಮೊದಲಿಗೆ ಎಲೆಯ ಮೇಲೆ ದೊಡ್ಡಗಾತ್ರದ ಕಪ್ಪು ಚುಕ್ಕೆಯು ಕಾಣಿಸುವುದು. ಇದರ ಭಾದೆಗೊಳಗಾದ ಗರಿಗಳು ಸುಟ್ಟಂತೆ ಕಾಣುವುದಲ್ಲದೆ ಮರಗಳು ಸಂಪೂರ್ಣವಾಗಿ ಒಣಗಿದಂತೆ ಕಾಣುವುದು

10

ಆಸರೆ ಸಸ್ಯಗಳು: ಮೆಕ್ಕೆ ಜೋಳ, ಜೋಳ, ಅಡಿಕೆ, ಸಜ್ಜೆ ಮತ್ತು ಇತರೆ ಕಳೆಗಳು.

ಹತೋಟಿ ಕ್ರಮ:

  • ೧ ಗ್ರಾಂ/ ಲೀ. ಬ್ಯಾಸಿಲಸ್ ಥುರಂಜನಿಯನ್ಸಿಸ್ ದ್ರಾವಣವನ್ನು ಸ್ಲಗ್ ಭಾದಿತ ಗಿಡಗಳಿಗೆ ಸಿಂಪರಣೆ ಮಾಡುವುದು
  • ತೋಟದಲ್ಲಿ ೪-೫ ಬೆಳಕಿನ ಆಕರ್ಷಣೆ ಬಲೆಗಳನ್ನು ಇಡುವುದು.
  • ಪರತಂತ್ರ ಜೀವಿಗಳನ್ನು ತೋಟದಲ್ಲಿಯೇ ಸಂರಕ್ಷಣೆ ಮಾಡುವುದು
  • 16171819