ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಕಡಲೆಯಲ್ಲಿ ಮುಂಜಾಗ್ರತ ಕ್ರಮ ಕೈಗೊಂಡರೆ ತಪ್ಪುವುದು ನೆಟೆ ರೋಗ

ಸುರೇಶ ಚ.ಅಳಗುಂಡಗಿ
೯೫೯೧೩೮೮೮೪೧
1

ಕಡಲೆ ಹಿಂಗಾರಿನ ಒಂದು ಪ್ರಮುಖ ದ್ವಿದಳ ಧಾನ್ಯ ಬೆಳೆಯಾಗಿದ್ದು, ಸಾರಜನಕವನ್ನು ಒದಗಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ. ಕಡಲೆ ಬೆಳೆಯಲ್ಲಿ ಸಾಮಾನ್ಯವಾಗಿ ನೆಟೆ ರೋಗವು ಕಂಡುಬರುತ್ತದೆ.

ನೆಟೆ ರೋಗ / ಸಿಡಿ ರೋಗ / ಸೊರಗು ರೋಗ

ರೋಗದ ಲಕ್ಷಣಗಳು: ಎಲೆಗಳು ಹಳದಿಯಾಗಿ, ಬಾಡಿ, ಜೋತು ಬಿದ್ದು, ಒಣಗಿ ಉದುರದೆ ಗಿಡಕ್ಕೆ ಅಂಟಿ ಕೊಂಡಿರುತ್ತವೆ. ಗಿಡದ ಬೇರುಗಳು ಕೊಳೆಯದೆ ಆರೋಗ್ಯ ದಿಂದಿರುವಂತೆ ಕಾಣುತ್ತವೆ. ಕಾಂಡವನ್ನು ಸೀಳಿ ನೋಡಿದಾಗ ಕಪ್ಪಾಗಿರುವುದು ಕಂಡು ಬರುತ್ತದೆ. ಈ ರೋಗವು ಮಣ್ಣಿನಿಂದ (soil borne) ಬರುವುದಾಗಿದೆ.

ನಿರ್ವಹಣೆ: ಪ್ರತಿ ಕಿ.ಗ್ರಾಂ ಬೀಜಕ್ಕೆ ೨ ಗ್ರಾಂ ಕ್ಯಾಪ್ಟಾನ್ ೮೦ ಡಬ್ಲೂ.ಪಿ. ಅಥವಾ ಥೈರಾಮ್ ೭೫ ಡಬ್ಲೂ.ಪಿ. ಅಥವಾ ಮೆಂಕೋಜೆಬ್ ೭೫ ಡಬ್ಲೂ.ಪಿ. ಅಥವಾ ೪ ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಬೇಕು. ರೋಗ ಬಾಧಿತ ಗಿಡಗಳನ್ನು ಆಗಾಗ ಕಿತ್ತು ಹಾಕುತ್ತಿರಬೇಕು.