ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಕೃಷಿರಂಗ

ಬಾಳು ಬೆಳಗಿದ ಕಿರುಕಾಮಧೇನು

ಡಾ. ಪಿ. ರವಿಕುಮಾರ್
೯೦೦೮೫೯೮೮೩೫

ರಾಮಣ್ಣ: ಒಳ್ಳೇ ಜಾತಿ ಕುರೀ ನೀವಾ ಕೊಡುಸ್ಬೇಕು ನೋಡ್ರೀ ಮತ್ತ.

ವೈದ್ಯರು: ಆಗ್ಲಿ ರಾಮಣ್ಣ. ಶನಿವಾರ ಸಂತಿಗೆ ಹೋಗಿ ಕುರಿಗೋಳ್ನ ಕೊಂಡ್ಕಂಡು ಬರಣಾಂತ ಬಿಡು.

ದೃಶ್ಯ ೪ : ಹಿಮ್ಮೇಳದಲ್ಲಿ: ಲಾಲ, ಲಾಲ ಲ, ಲಾಲ, ಲಾಲ, ಲ,ನೋಡಿ ನೋಡಿ ಒಂದು ವರ್ಷ ಕಳೆದುಹೋಯಿತು, ಲಾಲ, ಲಾಲ ಲ, ಲಾಲ, ಲಾಲ, ಲ,ಹತ್ತರಿಂದ ಇಪತ್ತು ಕುರಿಯಾಯಿತು.ಲಾಲ, ಲಾಲ ಲ, ಲಾಲ, ಲಾಲ, ಲ,ಟುರ್, ಟುರ್, ಉರ್ ರ್ ರ್, ಆದರೆ ಒಂದು ದಿನ ಎರಡು ಕುರಿ ಮರಿ ಸತ್ತು ಹೋಯಿತು.ಲಲಾ, ಲಲಾ, ಲಲಾ,ಲಾ

ವೈದ್ಯರು: ಯಾಕೋ ರಾಮಣ್ಣ? ಏನಾತೋ ಮರೀಗೆ?

ರಾಮಣ್ಣ: ನನ್ ನಸೀಬೇ ಖೊಟ್ಟಿ ಆಗೇದರಿ ಸಾಹೇಬ್ರ. ಚಂದ ಮೇಯ್ತಿದ್ದ ಮರೀ ಹಂಗಾ ಬಿದ್ದು ಒದ್ದಾಡಿ ಪ್ರಾಣಬಿಡ್ತರೀ. ಏನ್ಮಾಡೋದೋ ತಿಳ್ಳಾಂಗಿಲ್ರೀ. ಬ್ಯಾರೆ ಕುರಿಗೋಳ್ಗೂ ಹೀಂಗ ಆದ್ರ ನಾ ಏನ್ ಮಾಡಿಲ್ರೀ ಯಪ್ಪಾ

ವೈದ್ಯರು: ಸ್ವಲ್ಪಮ ಇರೋ ರಾಮಣ್ಣಾ, ಸುಮ್ನೆ ಬಡಬಡಿಸ್ಬೇಡ. ಇದುಕ್ಕ ಏನಾಗೈತೋ ಪರೀಕ್ಷೆ ಮಾಡಿ ನೋಡತೇನು. ನೀ ಹೇಳೋದ ನೋಡಿದ್ರೆ ಇದು ಕರುಳುಬ್ಯಾನಿ ಅನ್ನಾಂಗ ಕಾಣಿಸ್ತದ. ಮುಂಚಿಕೇನೇ ಹೇಳಿರ್ಲಿ ಲ್ಲೇನೋ ನಿಂಗ, ಎಲ್ಲಾ ಕುರಿಗೋಳ್ಗೂ ಲಸಿಕೆ ಹಾಕಿಸ್ಬೇಕು ಅಂತಾ. ಕುರಿ ಸತ್ಮೇಲ ನಂಬಲ್ಲಿಗೆ ಬಂದೀಯಲ್ಲೋ?

ರಾಮಣ್ಣ: ನಂದು ತಪ್ಪಾಯ್ತ್ರೀ ಯಪ್ಪಾ, ನಿಮ್ಮ ಮಾತು ಕೇಳ್ಲಿಲ್ಲ. ಈಗ ಏನ್ಮಾಡೋದು ಹೇಳ್ರಿ. ನೀವ್ ಹ್ಯಾಂಗ ಹೇಳ್ತೀರೋ ಹಂಗ ಕೇಳ್ತೀನ್ರಿ

ವೈದ್ಯರು: ಚಿಂತಿ ಮಾಡಬ್ಯಾಡ ಬಿಡು. ಬ್ಯಾರೇ ಕುರಿಗೋಳ್ಗೆಲ್ಲಾ ಇವತ್ತೇ ಸಂಜೀಕ ಲಸಿಕೆ ಹಾಕಾಣಂತೆ. ನಿನ್ ಕುರಿಗೋಳ್ಗೆಲ್ಲಾ ವಿಮಾನೂ ಆಗೇದ. ಈ ಕುರಿಗೂ ವಿಮಾ ಹಣ ಬರ್ತಲದೇನೋ ನೋಡಾಣಂತೆ. ನಾ ಪತ್ರ ಬರ್ದುದ ಕೊಡ್ತೇನು. ನೀ ಒಯ್ದು ವಿಮಾ ಕಂಪನೀಗೆ ಕೊಟ್ಟು ಬಾ

ರಾಮಣ್ಣ: ಆತ್ರಿಯಪ್ಪಾ

ವೈದ್ಯರು: ಅಷ್ಟೇ ಅಲ್ಲೋ ರಾಮಣ್ಣ. ಇನ್ಮುಂದ ಹೀಂಗ ಆಗಾಕ ಬಿಡಬ್ಯಾಡ. ಕಾಲಕಾಲಕ್ಕೆ ನಾ ಹೇಳ ಲಸಿಕೆ, ಔಷಧಿ ಕೊಡ್ತಾ ಇರ್ಬೇಷಕು. ಕುರಿಗೋಳ್ನ ಹೊರಗ ಮೇಸಿಕೊಂಡು ಬಂದಮ್ಯಾಗ ಮನೀ ಒಳ್ಗೂ ಒಂದೊಂದ್ ಕುರೀಗೆ ೫೦ ಗ್ರಾಂನಷ್ಟು ಹಿಂಡಿ ನೀರಾಗ ಕಲ್ಸಿ ಕೊಡ್ಬೇಕು. ಜೊತೀಗೆ ಅಗಸೆ ಸೊಪ್ಪು, ಹೆಬ್ಬೇವಿನ ಸೊಪ್ಪು ಸುಬಾಬುಲ್, ಎಲ್ಲ ಕಡ್ದು ಹಾಕಬೇಕು. ತಿಳೀತಿಲ್ಲೋ?

ರಾಮಣ್ಣ: ಹಂಗೇ ಮಾಡ್ತೇನ್ರೀ ಸರ

ದೃಶ್ಯ–೫(ಎರಡು ವರ್ಷಗಳ ನಂತರ ರಾಮಣ್ಣ ಈಗ ೩೦-೪೦ ಕುರಿಗಳ ಒಡೆಯ. ಆತನ ಮನೆಯ ಸ್ಥಿತಿ ಗತಿ ಸಾಕಷ್ಟು ಸುಧಾರಿಸಿರುತ್ತದೆ. ವೈದ್ಯರು ಕುರಿಗಳಿಗೆ ಲಸಿಕೆ ಹಾಕಲು ಅವನ ಮನೆಗೇ ಬಂದಿರುತ್ತಾರೆ)

ಬಾಳಜ್ಜ: ಯಾರೂ? ಲಸಿಕೆ ಹಾಕಾಕೆ ಡಾಕುಟ್ರು ಬಂದಂಗದ. ಬರ್ರೀ ಯಪ್ಪಾ, ನಿಮ್ ಹೊಟ್ಟೀ ತಣ್ಣಗಿರ್ಲಿ ನೋಡ್ರಿ. ನಮ್ ಹುಡುಗಾಗ ಒಳ್ಳೇ ದಾರಿ ತೋರಿದ್ರಿ. ನಿಮ್ಮುನ್ನ ತಂಪು ಹೊತ್ನಾಗ ನೆನೀಬೇಕ್ರೀಯಪ್ಪಾ

ವೈದ್ಯರು: ನಂದೇನೈತಿ ಬಿಡು ಬಾಳಜ್ಜಾ. ನನ್ನ ಡ್ಯೂಟಿ ನಾ ಮಾಡೇನ ಅಷ್ಟೇ. ನಿಮ್ಮ ರಾಮಣ್ಣಗ ಕೆಲ್ಸದಾಗ ನಿಯತ್ತು, ಶ್ರದ್ಧಾ ಎಲ್ಲಾ ಅದಾವ ನೋಡು. ಅದಕ್ಕಾ ಆತ ಉದ್ಧಾರ ಆಗಾಕ ಹತ್ಯಾನ

ರಾಮಣ್ಣ: ಎಲ್ಲಾ ತಮ್ಮಂತೋರ ಆಶೀರ್ವಾದ ಸ್ವಾಮೀ, ನಾನೂ ಇಷ್ಟರಮಟ್ಟಿಗೆ ಆಗೇನಿ. ನನ್ನ ಹತ್ತಿರ ಈಗ ೪೦ ಕುರಿ ಅದಾವು. ಅ ದ್ಯಾವ್ರ ದಯದಿಂದ ಈ ಸರ್ತಿ ಬೆಳೀನೂ ತಕ್ಕಮಟ್ಟಿಗೆ ಆಗ್ಯಾದ

ಬಾಳಜ್ಜ: ಕಷ್ಟ ಪಡೋರ್ನರ ಆ ದ್ಯಾವ್ರ ಯಾವತ್ತೂ ಕೈ ಬಿಡಾಂಗಿಲ್ಲ ತಿಳ್ಕ. ಕಷ್ಟ ಬಂತು ಅಂತ ಗೋಳಾಡಿದ್ರ ಬಾಳೇವು ನಡ್ದಾವೇನು? ಸೆಟ್ದು ನಿಂತ್ಕಾಬೇಕು, ಬದುಕಿ ತೋರುಸ್ಬೇಕು

ವೈದ್ಯರು: ಅಜ್ಜಾ, ನಿಮ್ಮಂಥಾ ಹಿರಿಯರ ಮಾರ್ಗದರ್ಶನ ಎಲ್ರಿಗೂ ಬೇಕು ನೋಡ್ರೀ

ಬಾಳಜ್ಜ: ನಂದೇನೈತ್ರೀ? ಊರು ಹೋಗು ಅಂತೈತಿ, ಕಾಡು ಬಾ ಅಂತೈತಿ. ನನ್ನ ಅನುಭವದಾಗ ಏನೈತೋ ಅದುನ್ನ ನನ್ನ ಮಗನೀಗೂ ಹೇಳತೇನ್ರಿ ಅಷ್ಟ

ವೈದ್ಯರು: ಇನ್ನೂ ನೂರ್ಕಾಲ ಸುಖವಾಗಿ ಬಾಳ್ರೀ ಅಜ್ಜ. ನಾ ಇನ್ನ ಬರ್ತೇ ನು. ಇನ್ಮುಂದ ಎಲ್ರೂ ಆರಾಮಾಗಿ ಇರ್ರೀ. ನಾ ಬರ್ತೇನನೋ ರಾಮಣ್ಣ

ಕಾಮಧೇನು ಕಾಮಧೇನು, ಕಿರುಕಾಮಧೇನು, ಮೇಕೆ, ಕುರಿ ಇದುವೆ ನಮ್ಮ ಕಿರುಕಾಮಧೇನು,ನಮ್ಮ ಬಾಳ ಸವಿ ಜೇನು ನೆರೆ ಬರ ಕಷ್ಟ ಕಾಲದಿ ನೀನು ಬಂದು ಜೊತೆಗಿರುವೇನು,ಹಾಲು, ಉಣ್ಣೆ, ಮಾಂಸ ಗೊಬ್ಬರ ಕೊಡುವೆ ನೀನು,ಕಾಮಧೇನು ಕಾಮಧೇನು, ಕಿರುಕಾಮಧೇನು,,ನೀ ಬಾಳ ಬೆಳಗಿದ ಕಿರುಕಾಮಧೇನು ||

-: ಮುಕ್ತಾಯ :-