ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ದೂರಸಂವೇದಿ ಉಪಗ್ರಹಗಳ ಉಪಯೋಗಗಳು

ಡಾ. ಯು. ಕೆ. ಶಾನ್ವಾಡ್,
08532220193
1

ನಮ್ಮ ದೇಶವು ದೂರ ಸಂವೇದಿ ತಂತ್ರಜ್ಞಾನವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಬಳಸಿಕೊಂಡಷ್ಟು ಯಾವ ದೇಶವೂ ಬಹುಶಃ ಬಳಸಿಲ್ಲ. ೧೯೭೦ ರಲ್ಲಿ ಕೇರಳದ ತೆಂಗಿನ ಗಿಡಗಳಿಗೆ ಬಂದ ಬೇರು ಬಾಡುವ (Root Wilt) ರೋಗವನ್ನು ವಿಮಾನದಿಂದ ತೆಗೆದ ಚಿತ್ರಗಳೊಂದಿಗೆ ಅಧ್ಯಯನ ಮಾಡುವುದರ ಮೂಲಕ ಆರಂಭವಾದ ದೂರ ಸಂವೇದಿ ತಂತ್ರಜ್ಞಾನ ಬಳಕೆ ಅಮೇಲೆ ನಮ್ಮ ಬೆಳೆ, ವನಸಂಪತ್ತು, ಬಂಜರುಭೂಮಿ, ಜಲಸಂಪನ್ಮೂಲ, ಪರಿಸರ, ಕುಡಿಯುವ ನೀರಿನ ಪೂರೈಕೆ ಪಟ್ಟಣಗಳ ಬೆಳವಣಿಗೆ, ಕರಾವಳಿ ಪ್ರದೇಶ, ಖನಿಜ ಸಂಪತ್ತು ಇತ್ಯಾದಿಗಳ ವಿವರವಾದ ಅಧ್ಯಯನವನ್ನು ನಡೆಸಲು ಸಾಧ್ಯವಾಗಿತ್ತು. ಬೆಳೆಗಳಿಗೆ ತಗುಲಿದ ರೋಗಗಳನ್ನು ಪತ್ತೆ ಹಚ್ಚುವಲ್ಲಿ, ಫಸಲಿನ ಅಂದಾಜು ಮಾಡುವಲ್ಲಿಯೂ ಈ ತಂತ್ರವು ತುಂಬಾ ಸಹಕಾರಿಯಾಗಿದೆ. ಸರೋವರಗಳಿಂದ ಜಲಾಶಯಗಳ, ಕೆರೆಗಳ ಮತ್ತಿತರ ಜಲ ಸಂಪನ್ಮೂಲಗಳ ಅಧ್ಯಯನದಲ್ಲೂ ಮಹತ್ತರ ಪಾತ್ರವಹಿಸುತ್ತವೆ. ಪಟ್ಟಣಗಳ ಬೆಳವಣಿಗೆಯನ್ನು ಕಾಡ್ಗಿಚ್ಚಿನಿಂದ ಸುಟ್ಟುಹೋದ ಕಾಡಿನ ಭಾಗಗಳನ್ನು ವಿವರವಾಗಿ ಅಧ್ಯಯನ ಮಾಡಬಹುದು. ಖನಿಜ ನಿಕ್ಷೇಪಗಳ ಪತ್ತೆಯಲ್ಲಿ, ಕಾಡುಗಳು, ಅಗ್ನಿಪರ್ವತಗಳು, ಬಂಜರು ಭೂಮಿಯ, ಮಣ್ಣಿನ ಅಧ್ಯಯನದಲ್ಲೂ ದೂರಸಂವೇದನೆ ಪ್ರಮುಖ ಪಾತ್ರವಹಿಸುತ್ತದೆ. ಕರಾವಳಿಯ ಅಧ್ಯಯನದಲ್ಲೂ ದೂರ ಸಂವೇದಿಯದು ಮಹತ್ತರವಾದ ಪಾತ್ರವಿದೆ

ದೂರಸಂವೇದನೆಯಲ್ಲಿ ಉಪಗ್ರಹಗಳು ತೆಗೆದ ಛಾಯ ಚಿತ್ರಗಳನ್ನು ಉಪಯೋಗಿಸಿ ಸಿಗಬಹುದಾದ ಜಾಗಗಳನ್ನು (Ground Water Potential Zones) ಪ್ರತ್ಯೇಕಿಸಬೇಕು. ಆನಂತರ ಹಾಗೆ ಗುರುತಿಸಿದ ಜಾಗಗಳನ್ನು ವಿಮಾನದಿಂದ ತೆಗೆದ ಚಿತ್ರಗಳನ್ನು (Aerial Photographics) ಉಪಯೋಗಿಸಿ ಇನ್ನೂ ವಿವರವಾದ ಅಧ್ಯಯನ ಮಾಡಬೇಕು ತದನಂತರ ಭೂಭೌತಿಕ (ಉeoಠಿhಥಿsiಛಿಚಿಟ) ಮತ್ತು ಜಲ ಭೂವೈಜ್ಞಾನಿಕ (Hydrogeological) ತಂತ್ರಗಳನ್ನು ಉಪಯೋಗಿಸಿ ಎಲ್ಲಿ ಬಾವಿ ಕೊರೆಯಬಹುದೆಂದು ಹೇಳಬಹುದು. ನದಿಗಳ ಗಾತ್ರ ಉದ್ದ ಇತ್ಯಾದಿ ಸ್ವಭಾವಗಳನ್ನು ವಿವರವಾದ ಅಧ್ಯಯನವನ್ನು ದೂರಗ್ರಹಣದ ಮುಖಾಂತರ ಮಾಡಬಹುದು. ನದಿಗಳಿಗೆ ಎಲ್ಲಿ ಅಣೆಕಟ್ಟು ಕಟ್ಟಬಹುದೆಂಬುದನ್ನು ನಿರ್ಣಯಿಸುವಲ್ಲೂ ಈ ತಂತ್ರವು ಪ್ರಯೋಜನಕಾರಿಯಾಗಿದೆ. ನೆರೆ ಬಂದಾಗ ನೀರಿನಿಂದಾವೃತ ಪ್ರದೇಶದ ಚಿತ್ರಗಳು ನೆರೆಯಿಂದಾದ ಹಾನಿಯನ್ನು ಅಂದಾಜು ಮಾಡುವಲ್ಲಿ ಸಹಾಯಮಾಡುತ್ತದೆ. ಹಿಮಾಲಯದಂತಹ ಪರ್ವತ ಶ್ರೇಣಿಯನ್ನು ನೆಲದ ಮೇಲಿಂದ ಅಧ್ಯಯನ ಮಾಡುವುದು ಕಷ್ಟ. ಇಂತಹ ಕಷ್ಟ ಸಾಧ್ಯವಾದ ಪರ್ವತ ಶ್ರೇಣಿಗಳು, ದಟ್ಟವಾದ ಕಾಡುಗಳು, ಜವುಗು ಭೂಮಿಗಳು, ಮರುಭೂಮಿಗಳು ಮತ್ತಿತರ ಪ್ರದೇಶಗಳ ಅಧ್ಯಯನವನ್ನು ದೂರಗ್ರಹಣದ ಮೂಲಕ ಮಾಡಬಹುದು

ಇಲ್ಲಿ ಒಂದು ಮಾತನ್ನು ಒತ್ತಿ ಹೇಳಬೇಕಾಗಿದೆ. ದೂರ ಸಂವೇದಿ ತಂತ್ರ ಒಂದರಿಂದಲೇ ಯಾವುದೇ ರೀತಿಯ ಅಧ್ಯಯನವನ್ನು ಪೂರ್ಣಗೊಳಿಸಲಾಗದು. ಇದರ ಜೊತೆಗೆ ಸಾಂಪ್ರಾದಾಯಿಕ ಪದ್ಧತಿಗಳಿಂದ (Conventional Methods) ಸಂಗ್ರಹಿಸಿದ ಮಾಹಿತಿಗಳನು ಉಪಯೋಗಿಸಿದಾಗ ಮಾತ್ರ ಅಧ್ಯಯನವು ಪೂರ್ಣಗೊಳ್ಳುವುದು. ದೂರಸಂವೇದಿ (Remote Sensing) ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು (Convential Methods) ಒಂದಕ್ಕೆ ಇನ್ನೊಂದನ್ನು ಪೂರಕವಾಗಿ ಬಳಸಿದಾಗ ಮಾತ್ರ ನಮಗೆ ಒಳ್ಳೆಯ ಫಲಿತಾಂಶ ದೊರಕುವುದು