ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಬಯಲಿದ್ರೆ ಅಡಿಕೆ ಬರೋದು ಅನ್ನೋದೆ ತಪ್ಪು ಕಲ್ಪನೆ-ವಿಜಯೇಂದ್ರ ಭಟ್

image_
ರಘು ಸಂವೇದನ್
9902191549
1

ನಂದಿ ಎರಡು ಸಾವಿರದ ಎಂಟನೂರು ಮರ ಜೊತೆಗೆ ಜಂಬೆ, ಬೀಟೆ ಮತ್ತಿ, ಹೊನಾಲ್, ಬಿದಿರು ಹೀಗೆ ನೂರಾರು ಜಾತಿ ಮರಗಳು, ಅದರಲ್ಲಿ ಬಹುಪಾಲು ಮರಗಳಿಗೆ ೩೫೦ರಿಂದ ೪೫೦ ವರ್ಷ ಹರೆಯ. ಅಬ್ಬಾ ಇದೆಂತಾ ಕಾಡು ಇರಬಹುದು ಅಂತಿರಾ! ಇದು ಕಾಡಲ್ಲ ವಿಜಯೇಂದ್ರ ಭಟ್ ಅವರ ಅಡಿಕೆ ತೋಟ, ಅದರಲ್ಲೆ ೧೫೦೦ ಕಾಳುಮೆಣಸಿನ ಬಳ್ಳಿ ಇವೆ, ಜಾಯಿಕಾಯಿ ಇದೆ, ೫೦೦ ನಿಂಬೆ ಇವೆ, ಮಿಡಿ ಮಾವು, ಹಪ್ಪಲಿ, ಚಕ್ಕೆ, ಲವಂಗ, ಇನ್ನೇನು ಬೆಳೆ ಇವೆ ಎಂದು ಪಟ್ಟಿ ಮಾಡುತ್ತಿದ್ದರೆ ಪುಟ ಸಾಲದು ನೋಡಿಯೇ ತಿಳಿಯಬೇಕು. ಈ ನೈಸರ್ಗಿಕ ಕೃಷಿಯ ಪರಿ

4

ವಿಜಯೇಂದ್ರ ಅವರು ಶರಾವತಿ ಮುಳುಗಡೆಯಿಂದ ಇಲ್ಲಿಗೆ ವಲಸೆ ಬಂದವರು. ಇವರು ಕೊಂಡ ನಾಲ್ಕು ಎಕರೆ ಕಾಡು ಭೂಮಿಯಲ್ಲಿ ಕಾಡು ಕಡಿಯದೆ ಕೃಷಿ ಮಾಡುವ ಕಾರ್ಯ ಮಾಡಿದ್ದಾರೆ. ಬಯಲಿದ್ರೆ ಅಡಿಕೆ ಬರೋದು ಅನ್ನೋದೆ ತಪ್ಪು ಕಲ್ಪನೆ ಎನ್ನುವ ವಿಜಯೇಂದ್ರ ಅದನ್ನು ಸಾಧಿಸಿ ತೋರಿಸಿದ್ದಾರೆ. ನೆಲ, ಮಣ್ಣು ಕಾಣುವಷ್ಟು ಖಾಲಿ ಜಾಗ ಇರಬಾರದು ಅನ್ನುವುದು ಅವರ ತತ್ವ. ಉಳುಮೆ ರಹಿತ ಕೃಷಿಯನ್ನ ೧೯೮೩ರಿಂದ ಮಾಡುತ್ತಿದ್ದಾರೆ. ಜಮೀನು ಖರೀದಿಸಿದ ನಂತರ ಎಷ್ಟು ಬೇಕೋ ಅಷ್ಟು ಸ್ವಚ್ಛ ಮಾಡಿಕೊಂಡು ಯಾವುದೇ ಮರ ಕಡಿಯದೆ ತೋಟ ಕಟ್ಟಿದ್ದಾರೆ. ಅವರ ಜಮೀನಿನಲ್ಲಿ ಅಡ್ಡಾಡಿದರೆ ದಟ್ಟ ಕಾಡಲ್ಲಿ ಓಡಾಡಿದ ಅನುಭವ ಆಗುತ್ತದೆ. ತೋಟಕ್ಕೆ ಅಂತ ಸಾವಯವ ಗೊಬ್ಬರ ಹಾಕೊಲ್ಲ. ಅಲ್ಲೆ ಬೀಳುವ ಎಲೆ ಸೊಪ್ಪುಗಳೇ ಸಾಕು. ಇದರಿಂದ ೧೫ ರಿಂದ ೨೦ ಸಾವಿರ ಉಳಿತಾಯ ಆಗಿದೆ. ಕಳೆನಾಶಕ ಬಳಸೋಲ್ಲ ಅಷ್ಟೇ ಅಲ್ಲ ಕಳೆ ಮಿಶಿನ್ ಸಹ ಇಲ್ಲ, ಕಳೆ ತೆಗೆಯೋಕೆ ಅಂತ ವಿಶೇಷ ಕೂಲಿ ಆಳಿನ ನೇಮಕ ಮಾಡಿಕೊಂಡಿಲ್ಲ. ವಾರ್ಷಿಕ ಮುಖ್ಯ ಬೆಳೆಗಳಿಂದ ಆದಾಯ ಹೊರತುಪಡಿಸಿ ತಿಂಗಳಿಗೆ ೧೫-೨೦ ಸಾವಿರ ಆದಾಯ ಬರುತ್ತೆ. ಜೊತೆಗೆ ವಾರ್ಷಿಕ ೩೫ರಿಂದ ೪೦ ಕ್ವಿಂಟಾಲ್ ಅಡಿಕೆ, ೨೦ ರಿಂದ ೨೫ ಕ್ವಿಂಟಾಲ್ ಕಾಫಿ, ೩೦ ಟನ್ ೪ ರಿಂದ ೫ ಕೆ.ಜಿ. ಗೇರು, ಕಾಳುಮೆಣಸು ಅಯ್ಯೋ ಪಟ್ಟಿ ಮಾಡುವುದೇ ಕಷ್ಟ. ಭಟ್ಟರ ಈಗಿನ ನಿರ್ವಹಣೆ ಎಂದರೆ ತಿಂಗಳಿಗೆ ಎರಡು ಬಾರಿ ೩ ರಿಂದ ೪ ಗುಂಟೆ ನೀರು ಒದಗಿಸುವುದು ಅಷ್ಟೆ. ಅಡಿಕೆ ಕೊಯ್ಲು ಸ್ವತಃ ಭಟ್ಟರೇ ಮಾಡುತ್ತಾರೆ. ಯಾಕೆಂದರೆ ಕಾಳು ಮೆಣಸು ಹಾಳಾಗದಂತೆ ಎಚ್ಚರಿಕೆ ಅಗತ್ಯ ಎನ್ನುತ್ತಾರೆ

ಅವರ ಅನುಭವದ ಪ್ರಕಾರ ಹಳೆ ತೋಟದಲ್ಲಿ ಗೊನೆ ತೆಗೆಯೋದು ಸುಲಭ ಹಾಗೂ ನೆರಳಲ್ಲಿ ಅಡಿಕೆ ಬೆಳೆದದ್ದರಿಂದ ಸುಲಿಯೋದು ಸುಲಭ ಹಾಗೆ ಸಿಪ್ಪೆ ಸಹ ತೆಳುವಾಗಿರುತ್ತದೆ.೪೫೦ ವರ್ಷದ ಬೀಟೆ ಮರ ತೋರಿಸಿ ಇದರ ಆಯಸ್ಸು ಮುಗಿದಿದ್ದು ಒಣಗಿದೆ ಎಂದು ಅರಣ್ಯ ಇಲಾಖೆಗೆ ಹೇಳಿದ್ದೇನೆ. ಅವರು ಬಂದು ನಮಗೆ ಶೇ.೨೫ ರಷ್ಟು ಕೊಟ್ಟು, ಉಳಿದದ್ದು ಅವರು ಕೊಂಡು ಒಯ್ಯುತ್ತಾರೆ. ಹೀಗೆ ಆಗಾಗ ಇಂತಹ ಆದಾಯವೂ ಮರಗಳಿಂದ ಬರುತ್ತದೆ ಅಂತಾರೆ. ಭಟ್ಟರೆ ನೀವೆ ಕೊಯ್ಲು ಮಾಡಬಹುದಲ್ಲಾ ಅರಣ್ಯದವರಿಗೆ ಯಾಕೆ ಹೇಳ್ತಿರಿ ಅಂದೆ. ಕಾನೂನು ಇರೋದೆ ಮುರಿಯುವುದಕ್ಕೆ ಅಂತ ತಿಳಿದುಕೊಳ್ಳಬಾರದು ಅಂತ ಹೇಳ್ತಾರೆ. ಇಂತಹ ಶಿಸ್ತಿನ ಸಿಪಾಯಿ ಅವರ ಜೀವನ ಶೈಲಿ ಸಾಧನೆ ನೋಡಿಯೇ ಅರಿಯಬೇಕು

7