ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಗಮ್ಲೆಸ್ ಹಲಸಿನ ತೋಟ

ಅರುಣಾಚಲ ಕಾರಂತ
9448602345
1

ಆರ್. ಪ್ರಕಾಶ್ನಾಯಕ್ ಅವರು ವಿಶೇಷ ಪ್ರಯೋಗಕ್ಕೆ ಕೈ ಹಾಕಿದ್ದು ನನಗೆ ತುಂಬಾ ಮೆಚ್ಚುಗೆ ಆಯಿತು. ನಿಮಗೂ ತಿಳಿಸೋಣ ಅಂತ ಬರೆಯುತ್ತಿದ್ದೇನೆ. ನಾಯಕ್ ಅವರು ಒಂದು ರೀತಿ ಸಂಶೋಧನೆ ಮಾಡುತ್ತಿದ್ದಾರೆ. ಅವರ ತೋಟದಲ್ಲಿ ಒಂದು ಗಮ್ಲೆಸ್ ಹಲಸು ಇತ್ತು. ಇದು ಮಲೇಶಿಯಾದಿಂದ ತಂದಿದ್ದಂತೆ. ಇದನ್ನು ಜವಳಿ ನರ್ಸರಿಯವರು ಕಸಿ ಕಟ್ಟಿ ಸಸಿ ಮಾಡಿ ಈ ತಳಿಗೆ ಚಂದ್ರಪ್ರಕಾಶ ಎಂದು ಹೆಸರಿಟ್ಟಿದ್ದಾರೆ. ಈ ತಳಿಯ ೧೭೨ ಸಸಿ ತಂದು ಇದಕ್ಕಾಗಿ ೨.೭೫ ಎಕರೆ ಜಮೀನು ಕೊಂಡು ತೋಟ ಕಟ್ಟಿದ್ದಾರೆ. ಇದರ ಜೊತೆಗೆ ೧೩ ವಿವಿಧ ಹಲಸಿನ ತಳಿಗಳನ್ನು ನಾಟಿ ಮಾಡಿದ್ದಾರೆ. ಜೊತೆ ಎರಡು ಬದಿ ಸಿಲ್ವರ್ ಹಾಕಿದ್ದಾರೆ. ಅದಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸೋ ಯೋಚನೆ ಇದೆಯಂತೆ. ೬೦ ಕೋಕೊ ಗಿಡ ಹಾಕಿದ್ದಾರೆ. ೩೦ ಕಾಡು ಜಾತಿ ಗಿಡಗಳಿವೆ. ಶಿವಮೊಗ್ಗದಿಂದ ಜೋಗ ಹೋಗುವವರಿಗೆ ಇದೊಂದು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಪಾರ್ಕ್ ರೀತಿ ಕಾಣುತ್ತದೆ. ಹಲಸಿನ ತಳಿ ಸಂಗ್ರಹಕ್ಕೆ ಹಾಗೂ ಅಂಟು ರಹಿತ ಹಲಸಿನ ತೋಟಕ್ಕೆ ಬಹುಶಃ ಇದು ಮೊದಲ ಪ್ರಯೋಗ ಎಂಬುದು ನನ್ನ ಭಾವನೆ. ಇನ್ನು ಮೂರು ವರ್ಷಕ್ಕೆ ಫಲ ಬಂದಾಗ ಇದೊಂದು ರೈತ ಪ್ರೇಕ್ಷಣೀಯ ಸ್ಥಳವಾಗಲಿದೆ ಎಂದು ನನಗೆ ಅನಿಸುತ್ತದೆ

ನರಸೀಪುರದ ಕಾರಂತರು ಶ್ರೀನಿಧಿ ಗೆಳೆಯರ ಬಳಗ ಕಟ್ಟಿ ಹಳ್ಳಿಗರಿಗೆ ಜ್ಞಾನ ಹಾಗೂ ಸಂಸ್ಕೃತಿಯ ನೆಲೆ ಒದಗಿಸುತ್ತಿದ್ದಾರೆ. ಅವರು ಇದಕ್ಕಾಗಿ ಹಲವು ವಿಚಾರ ಸಂಗ್ರಹಿಸುತ್ತಾರೆ. ಅವರು ನೇಗಿಲ ಮಿಡಿತಕ್ಕಾಗಿ ಹಲಸಿನ ರೈತರನ್ನು ಪರಿಚಯಿಸುತ್ತಿದ್ದಾರೆ......ಸಂ