ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ವನೌಷಧಿ ಗುಣಧರ್ಮ

ಅಶ್ವಗಂಧಿ - (ಹಿರೇಮದ್ದು)

1

ಇದು ಒಗರು ಮತ್ತು ಸ್ವಲ್ಪ ಕಹಿಯಾಗಿದ್ದು ವಿಪಾಕದಲ್ಲಿ ಕಾರವಾಗಿಯೂ, ಲಘವುವಾಗಿಯೂ, ಉಷ್ಣವೀರ್ಯವುಳ್ಳದ್ದಾಗಿಯೂ ಇರುತ್ತದೆ. ಅಲ್ಲದೆ ಇದು ಅತ್ಯಂತ ವೀರ್ಯವರ್ಧಕವೂ, ರಸಧಾತುಗಳ ಪೋಷಕವೂ, ಕಾಂತಿದಾಯಕವೂ ಮತ್ತು ಪುಷ್ಟಿದಾಯಕವೂ ಕೂಡ ಆಗಿರುತ್ತದೆ. ವೃದ್ಧಾಪ್ಯದಲ್ಲಿ ಬರತಕ್ಕ ಎಲ್ಲ ರೋಗಗಳನ್ನೂ ಮತ್ತು ಕೆಮ್ಮು, ದಮ್ಮು, ಕ್ಷಯ, ವಾತ, ಶೋಭೆ, ರಕ್ತದೋಷ, ವಿಷಕ್ರಿಮಿ, ತೊನ್ನು, ವ್ರಣ ಮೊದಲಾದುವುಗಳನ್ನೂ ಗುಣಪಡಿಸತಕ್ಕ ಸಾಮರ್ಥ್ಯ ಇದರಲ್ಲಿರುತ್ತದೆ. ಆದುದರಿಂದಲೇ ಹಳ್ಳಿಗಾಡಿನಲ್ಲಿ ಗೊತ್ತಿಲ್ಲದ ವ್ಯಾಧಿಗೆ ಹಿರೇಮದ್ದು ಎಂಬೊಂದು ವಾಡಿಕೆಯ ಮಾತು ರೂಢಿಯಲ್ಲಿದೆ. ಹಿರೇಮದ್ದನ್ನು ಒಂದು ವರ್ಷದವರೆಗೆ ಬಿಡದೆ ಸೇವಿಸಿದರೆ ಎಂತಹ ರೋಗವನ್ನಾದರೂ ತಡೆಯುವ ಶಕ್ತಿಯುಂಟಾಗುತ್ತದೆಯಲ್ಲದೆ ಮುಪ್ಪನ್ನೂ ಗೆಲ್ಲುವ ಶಕ್ತಿಯನ್ನುಂಟು ಮಾಡುತ್ತದೆ. ಹಿರೇಮದ್ದಿನಲ್ಲಿ ದಪ್ಪ ಜಾತಿಯ ಬೇರಿನವುಗಳು ಮತ್ತು ತೆಳ್ಳನೆಯ ಜಾತಿಯ ಬೇರಿನವುಗಳೆಂದು ಎರಡು ಭೇದಗಳುಂಟು. ಈ ಎರಡರ ಗುಣಧರ್ಮಗಳೂ ಒಂದೇ ಇದ್ದು ದಪ್ಪನೆಯ ಬೇರಿನವು ದಕ್ಷಿಣ ಪ್ರಾಂತಗಳಲ್ಲೂ, ಸಣ್ಣನೆಯ ಬೇರಿನವು ಉತ್ತರ ಪ್ರಾಂತಗಳಲ್ಲೂ ಬೆಳೆಯುತ್ತವೆ. ಇವುಗಳ ಬೇರುಗಳನ್ನು ಹಸುವಿನ ಹಾಲಿನಲ್ಲಿ ಬೇಯಿಸಿ ಒಣಗಿಸಬೇಕೆಂದಿದೆ. ಇದನ್ನು ಚೂರ್ಣ ರೂಪದಲ್ಲಿ ಉಪಯೋಗಿಸುವ ಪದ್ಧತಿಯುಂಟು. ಕಾಲುತೊಲೆಯಿಂದ ಅರ್ಧ ತೊಲೆಯವರೆಗಿನ ಪ್ರಮಾಣದಲ್ಲಿ ಜೇನುತುಪ್ಪ, ತುಪ್ಪ, ಸಕ್ಕರೆ, ಹಾಲುಗಳ ಅನುಪಾನವನ್ನು ಹೇಳಿದೆ

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಅಶ್ವಗಂಧಿ/ಅಶ್ವಗಂಧ,ಬಾಜಿಕರೀ,/ಅಸಗಂಧ/ಅಶ್ವಗಂಡಿ/ ಪೈನ್ನೆರುಗಡ್ಡು, ಪಿಲ್ಲಿ/ವಿಂಟರ್ ಚೆರಿ

ಹಿರೇಮದ್ದಿನ ಬೇರು/ಕಂಚುಕ, ಪುಷ್ಟಿದಾ/ನಾಗೋರೀ/ಮಲಾ, ಪಿವರೆ/ಆಂಡಾ, ಅಶ್ವಗಂಧಿ/-