ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಚವಳಿಕಾಯಿ ಬೇರು ಕೊಳೆ ರೋಗ ನಿರ್ವಹಣೆ

Dr. H. Narayanswamy
9448159375
1

ಚವಳಿಕಾಯಿ ಉಷ್ಣವಲಯದ ತರಕಾರಿ ಬೆಳೆ. ಬಯಲು ಪ್ರದೇಶಗಳಲ್ಲಿ ಮರಳು ಮಿಶ್ರಿತ ಗೋಡು ಮಣ್ಣು ಈ ಬೆಳೆಗೆ ಸೂಕ್ತ. ಈ ಬೆಳೆಗೆ ಅಲ್ಪ ಮಳೆ ಇದ್ದರೆ ಸಾಕು. ಇದರಲ್ಲಿ ಎ ಮತ್ತು ಸಿ ಅನ್ನಾಂಗ ಅಲ್ಲದೆ ಕಬ್ಬಿಣ ಅಂಶ ಹೆಚ್ಚು ಇರುತ್ತದೆ.ಈ ಬೆಳೆಯನ್ನು ಅನೇಕ ರೋಗಗಳು ಬಾಧಿಸುತ್ತವೆ. ಎಲೆಚುಕ್ಕೆ, ಚಿಬ್ಬು ರೋಗ, ಬೂದಿ ರೋಗ ಮತ್ತು ಬೇರು ಕೊಳೆ ರೋಗ ಮುಖ್ಯವಾದವುಗಳು. ಬೇರು ಕೊಳೆ ರೋಗ ನೀರು ನಿಲ್ಲುವ ಕಡೆ ಹೆಚ್ಚು ಕಾಡುವುದು. ಈ ರೋಗ ತೀವ್ರವಾದಲ್ಲಿ ಶೇ. ೭೫ ಕ್ಕಿಂತ ಹೆಚ್ಚಿನ ನಷ್ಟ ಉಂಟಾಗುವುದು. ಈ ಕೊಳೆಗೆ ಶಿಲೀಂಧ್ರ ರೋಗಾಣುಗಳು ಕಾರಣವಾಗಿರುತ್ತದೆ

34

ರೋಗ ಲಕ್ಷಣಗಳನ್ನು ಗುರುತಿಸುವಿಕೆ ಎಳೆಸಸಿ ಮತ್ತು ಹೂ ಕಾಯಿ ಬೆಳೆಯುವ ಹಂತಗಳಲ್ಲಿ ಈ ರೋಗ ಕಾಣಬಹುದು. ಮಣ್ಣಿಗೆ ಹೊಂದಿಕೊಂಡಂತಹ ಕಾಂಡ ಕತ್ತಿನ ತೊಗಟೆ ಮತ್ತು ಬೇರುಗಳನ್ನು ಕೊಳೆಸುವುದು. ಇದರಿಂದ ರೋಗಪೀಡಿತ ಗಿಡಗಳ ಎಲೆಗಳು ಹಳದಿಯಾಗಿ ನಂತರ ಬಾಡಿ ಉದುರುತ್ತವೆ. ಬುಡದ ಕಾಂಡ ಮತ್ತು ಬೇರುಗಳು ಕಂದು ಬಣ್ಣಕ್ಕೆ ತಿರುಗಿ ಕಪ್ಪಾಗಿ ಸಾಯುತ್ತವೆ. ರೋಗಪೀಡಿತ ಕತ್ತಿನ ಭಾಗ ಮತ್ತು ಬೇರುಗಳ ಮೇಲೆ ಬಿಳಿ ಬಣ್ಣದ ದಾರದಂತಹ ಶಿಲೀಂಧ್ರ ಬೆಳೆಯುವುದು. ಸಾಸಿವೆ ಕಾಳಿನಂತಹ ಶಿಲೀಂಧ್ರ ಬೀಜಗಳು ಹೇರಳವಾಗಿ ಬೆಳವಣಿಗೆಯಾಗುತ್ತವೆ

ನಿರ್ವಹಣೆ:

  • ನಾಟಿ ಮಾಡಿದಾಗ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿ ಜೊತೆ ಅಭಿವೃದ್ಧಿಪಡಿಸಿದ ಜೈವಿಕನಾಶಕವಾದ ಟ್ರೈಕೋಡರ್ಮವನ್ನು ಪ್ರತಿ ಎಕರೆಗೆ ೨೫೦ ಕಿ.ಗ್ರಾಂ ನಂತೆ ಮಣ್ಣಿಗೆ ಬೆರೆಸುವುದು.
  • ಬೇರು ಕೊಳೆ ರೋಗ ಕಂಡುಬಂದಲ್ಲಿ ೨ ಗ್ರಾಂ ಕ್ಸಾಪ್ಟಾನ್ ಅಥವಾ ೦.೫ ಗ್ರಾಂ ಕಾರ್ಬನ್ ಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡದ ಸುತ್ತಲೂ ತೆಳುವಾಗಿ ಉಣಿಸಬೇಕು. ಪ್ರತಿ ಹೆಕ್ಟೇರಿಗೆ ೩೬೦ ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
  •