ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಮಿಡಿತ-ತುಡಿತ

image_
ರಘು ಸಂವೇದನ್
9902191549

ಪತ್ರಿಕೆ ಚೆನ್ನಾಗಿ ಬರುತ್ತಿದೆ. ತಿಂಗಳ ೨ನೇ ತಾರೀಖು ಯಾವ ಪತ್ರ ಬರದಿದ್ದರೂ ನೇಗಿಲ ಮಿಡಿತ ಮಾತ್ರ ಬರುವುದು ತಪ್ಪುವುದಿಲ್ಲ. ನಾನು ಮೊದಲು ಓದುವುದು ಸಂಪಾದಕರ ಮಾತು. ಪ್ರತಿ ಬಾರಿ ವಿಭಿನ್ನವಾಗಿ ಮತ್ತು ಹಲವಾರು ವಿಷಯಗಳ ಬಗೆಗಿನ ಮಾತು ಓದಲು ಚೆನ್ನಾಗನಿಸುತ್ತದೆ. ನೇಗಿಲ ಮಿಡಿತದಿಂದ ನಮ್ಮ ಕೃಷಿ ಅರಿವು ಇನ್ನೂ ಹೆಚ್ಚುತ್ತಿದ್ದು, ಮುಂದೆ ಇನ್ನೂ ಹತ್ತು ಹಲವು ಕೃಷಿ ಬಗೆಗಿನ ಮಾಹಿತಿಯನ್ನು ನೇಗಿಲ ಮಿಡಿತ ಹೊತ್ತು ತರಲಿ.

--ಅರುಣಾಚಲ ಕಾರಂತ, ಆನಂದಪುರ, ಸಾಗರ.


ಪತ್ರಿಕೆ ಚೆನ್ನಾಗಿ ಬರುತ್ತಿದೆ. ನನಗೆ ನಿಮ್ಮ ಪತ್ರಿಕೆಯಲ್ಲಿ ಇಷ್ಟ ಆಗುವುದು ಡಾ. ಶಶಿಧರ್ರವರ ಲೇಖನ. ನಾನು ಮೊದಲು ಓದುವುದು ಅದೇ ಲೇಖನವನ್ನು. ನನ್ನ ಅನಿಸಿಕೆ ಎಂದರೆ ಅದು ಒಂದೇ ಲೇಖನ ಸಾಕು ಕೃಷಿಯ ಬಗ್ಗೆ ಹಲವಾರು ವಿಷಯ ತಿಳಿಯುವುದಕ್ಕೆ. ಸಂಪಾದಕರು ಬರೆಯುವ ಲೇಖನದಿಂದ ತುಂಬಾ ಪ್ರಭಾವಿತರಾಗಿದ್ದೇವೆ. ಅವರು ನಮಗೆ ಒಂದು ಸ್ಫೂರ್ತಿ. ಅವರಿಂದ ತುಂಬಾ iಟಿsಠಿiಡಿe ಆಗಿದ್ದೇನೆ. ಏಕೆಂದರೆ ಅವರ ಒಂದು ಲೇಖನ ನಮ್ಮ ಕೃಷಿ ದಿಕ್ಕನ್ನು ಬದಲಾಯಿಸಿತು; ಅದು ನೀರಿನ ಸದ್ಬಳಕೆ ಬಗ್ಗೆ. ನಾವು ಹಲವಾರು ವರ್ಷ ನೀರನ್ನು ಸರಿಯಾದ ರೀತಿ ಬಳಸದೆ ಸುಮ್ಮನೆ ವ್ಯರ್ಥ ಮಾಡುತ್ತಿದ್ದೆವು. ನಮ್ಮ ಜಮೀನಿನಲ್ಲಿ ಎಲ್ಲ ಸೇರಿ ಒಟ್ಟು ೧೭ ಹೆಚ್ಪಿ ಮೋಟಾರ್ ಇದ್ದು ೨೪ ಗಂಟೆ ಓಡಿಸಿದರೂ ನೀರು ಆಗುತ್ತಿರಲಿಲ್ಲ. ಆಗ ನಾನು ಶಶಿಧರ್ರವರ ಲೇಖನ ಓದಿ, ಬೇರೆ ಬೇರೆ ರೀತಿ ಪ್ರಯೋಗ ಮಾಡಿ, ಈಗ ೨ ಗಂಟೆಯಲ್ಲಿ ನನ್ನ ಎಲ್ಲ ಜಮೀನಿಗೆ ನೀರು ಬಿಡುತ್ತಿದ್ದೇನೆ. ಎಲ್ಲದಕ್ಕೂ ಸಮಯ ನಿಗದಿ ಮಾಡಿದ್ದೇನೆ. ಇಷ್ಟೆ ನೀರು ಹೋಗಬೇಕೆಂದು ವೈಜ್ಞಾನಿಕ ಲೆಕ್ಕಾಚಾರ ಮಾಡಿ ನೀರು ಹಾಯಿಸುತ್ತಿದ್ದೇನೆ. ಇದರಿಂದ ಆದ ಉಪಯೋಗ, ವಿದ್ಯುತ್/ಮಾನವ ಸಂಪನ್ಮೂಲ/ಮತ್ತು ಹಣದಲ್ಲಿ ಉಳಿತಾಯ. ಇದೇ ರೀತಿ ನಮ್ಮ ಸ್ನೇಹಿತರಾದ ಮಲ್ಲಿಕಾರ್ಜುನ, ರಿಪ್ಪನ್ಪೇಟೆ ಅವರ ಜಮೀನಿನಲ್ಲಿ ೧೨ ಎಕರೆ ಜಮೀನಿಗೆ ೪ ಬೋರ್ ೨ ಹೊಳೆ ಮೋಟರ್ ಎಲ್ಲ ಸೇರಿ ೩೫ ಹೆಚ್ಪಿ ಇದ್ದರೂ ನೀರು ಹಾಯಿಸಲು ಆಗುತ್ತಿರಲಿಲ್ಲ. ಈಗ ಶಶಿಧರ್ ಸರ್ ಅವರು ಹೇಳಿದ ಹಾಗೆ ಮಾಡಿದ ಮೇಲೆ, ೧೨.೫ ಹೆಚ್ಪಿ ೩ ಗಂಟೆಯಲ್ಲಿ ಎಲ್ಲ ಜಮೀನಿಗೆ ಸೇರಿ ಹಾಯಿಸುತ್ತಿದ್ದಾರೆ. ಬೇರೆಯಲ್ಲ ಮೋಟಾರ್ ಅನ್ನು ಆಫ್ ಮಾಡಿದ್ದಾರೆ. ಈಗ ರೈತರಿಗೆ ಒಬ್ಬ ಮಾರ್ಗದರ್ಶಕರ ಅಗತ್ಯ ಇದ್ದು ಇನ್ನು ಕೃಷಿಯಲ್ಲಿ ಹಲವಾರು ಬದಲಾವಣೆ ತರಬಹುದು.

--ರೇಣುಕೇಶ್, ರಿಪ್ಪನ್ಪೇಟೆ


ಪತ್ರಿಕೆ ಚೆನ್ನಾಗಿ ಬರುತ್ತಿದೆ. ೨೦೧೫ರ ಕೃಷಿಮೇಳದಲ್ಲಿ ಪತ್ರಿಕೆಗೆ ಚಂದಾದಾರನಾಗಿದ್ದೆ. ಪ್ರತಿ ತಿಂಗಳು ಪತ್ರಿಕೆ ತಪ್ಪದೆ ಬಂದಿದೆ. ಪತ್ರಿಕೆಯಿಂದ ಹಲವಾರು ಕೃಷಿ ವಿಷಯ ತಿಳಿದುಕೊಂಡಂತೆ ಆಗಿದೆ. ಪತ್ರಿಕೆ ಓದುವುದರಿಂದ ಬೇರೆ ನನ್ನ ಸ್ನೇಹಿತರು ಯಾವುದಾದರೂ ಬೆಳೆಯ ಸಮಸ್ಯೆ ಹೇಳಿದಾಗ, ಪತ್ರಿಕೆಯಲ್ಲಿ ಓದಿದ ವಿಷಯ ತಿಳಿಸಿದ್ದೀನಿ ಮತ್ತು ಲೇಖಕರ ದೂರವಾಣಿ ನಂಬರ್ ಅನ್ನು ಸಹ ಅವರಿಗೆ ನೀಡಿದ್ದೇನೆ. ಪತ್ರಿಕೆ ತುಂಬಾ ಉಪಯುಕ್ತವಾಗಿದೆ ಮತ್ತು ಇದು ರೈತರಿಗೆ ಸಹಾಯಕವಾಗಿದೆ.

--ಪವನ್ ಎಸ್. ಪಟೇಲ್, ಶಿವಮೊಗ್ಗ


ಈ ಪತ್ರಿಕೆ ವಿಶ್ವವಿದ್ಯಾಲಯದ್ದು ಎನ್ನುವುದೇ ನಮ್ಮ ಹೆಮ್ಮೆ. ಎಲ್ಲರಿಗೂ ಉಪಯುಕ್ತ ಮಾಹಿತಿ ಇದೆ.

--ಅಶ್ವಿನಿ, ವಿದ್ಯಾರ್ಥಿನಿ ,ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ