ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಚಿತ್ರ ಲೇಖನ:

ಬಾಳೆಯಲ್ಲಿ ಸಸ್ಯಹೇನು (ಪೆಂಟಲೋನಿಯಾ ನಿಗ್ರೋನರ್ವೋಸ, Pentalonia nigronervosa)

image_
ಡಾ.ಎಸ್.ಟಿ. ಪ್ರಭು
9448182225
1

ಬಾಳೆಯ ಸಸ್ಯಹೇನು ಒಂದು ರಸ ಹೀರುವ ಕೀಟವಾಗಿದ್ದು, ಸುಮಾರು ೧ ರಿಂದ ೨ ಮಿ.ಮೀ. ಗಾತ್ರದ ನೂರಾರು ಕಂದು ಬಣ್ಣದ ಸಸ್ಯ ಹೇನುಗಳು ಸುಳಿಯಲ್ಲಿ ಸೇರಿ, ಎಲೆಗಳ ಕೆಳಗೆ ಕುಳಿತು ರಸ ಹೀರುತ್ತಿರುತ್ತವೆ. ಸಸ್ಯಹೇನುಗಳ ಗುಂಪಿನಲ್ಲಿ ಪ್ರೌಢ ಮತ್ತು ಮರಿಕೀಟಗಳು ಒಟ್ಟಾಗಿ ಹಾವಳಿ ಮಾಡುತ್ತವೆ. ಪ್ರೌಢ ಕೀಟಗಳಲ್ಲಿ ರೆಕ್ಕೆ ಇರುವ ಮತ್ತು ರೆಕ್ಕೆ ಇಲ್ಲದಿರುವ ಎರಡು ವಿಧಗಳು ಕಂಡುಬರುತ್ತವೆ. ಸಸ್ಯಹೇನುಗಳ ಸಂತಾನೋತ್ಪತ್ತಿ ಬಹಳ ವಿಶಿಷ್ಟವಾಗಿದ್ದು, ಗಂಡುಗಳ ಸಹಾಯವಿಲ್ಲದೇ ಹೆಣ್ಣು ಮೊಟ್ಟೆ ಇಡದೇ, ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತವೆ. ವರ್ಷದಲ್ಲಿ ಸುಮಾರು ೩೫-೪೦ ಸಂತತಿಗಳನ್ನು ಪೂರೈಸುತ್ತವೆ. ಸತತವಾದ ರಸ ಹೀರುವಿಕೆಯ ಪರಿಣಾಮವಾಗಿ ಎಲೆಗಳು ಮುದುಡಿಕೊಳ್ಳುತ್ತವೆ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತ್ತವೆ. ಈ ಸಸ್ಯಹೇನುಗಳು ಎಲೆಗಳ ಮೇಲೆ ಸಿಹಿಯಾದ ಅಂಟುದ್ರವವನ್ನು ಸ್ರವಿಸುವುದರಿಂದ ಎಲೆಗಳ ಮೇಲೆ ಕಪ್ಪು ಬೂಷ್ಟು ಬೆಳವಣಿಗೆಯಾಗಿ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯಾಗುತ್ತದೆ. ಅಲ್ಲದೆ, ಮತ್ತೊಂದು ಮುಖ್ಯ ಸಮಸ್ಯೆಯೆಂದರೆ ಬಾಳೆಯಲ್ಲಿ ಎಲೆ ಗೊಂಚಲು ಸುಳಿ ರೋಗ ವು (ಬಂಚಿಟಾಪ್ ನಂಜು ರೋಗ) ಸಸ್ಯ ಹೇನುಗಳಿಂದ ಹರಡಲ್ಪಡುತ್ತದೆ

ನಿರ್ವಹಣಾ ಕ್ರಮಗಳು:

45

ಸಸ್ಯ ಹೇನುಗಳ ಬಾಧೆ ಕಾಣಿಸಿಕೊಂಡಾಗ ನಿಯಂತ್ರಣಕ್ಕಾಗಿ ೦.೫ ಮಿ.ಲೀ. ಫಾಸ್ಪೊಮಿಡಾನ್ ೮೬ ಡಬ್ಲ್ಯೂ.ಎಸ್.ಸಿ. ಅಥವಾ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಅಥವಾ ೦.೨೫ ಮಿ.ಲೀ. ಇಮಿಡಾಕ್ಲೋಪ್ರಿಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪರಣಾ ದ್ರಾವಣ ಸುಳಿಯಲ್ಲಿ ಬೀಳಬೇಕು. ನಂಜು ರೋಗ ಬಾಧಿತವಾದ ಬಾಳೆ ಗಿಡಗಳು ಕಂಡಕೂಡಲೆ ಅವುಗಳನ್ನು ಬೇರುಸಹಿತ ಕಿತ್ತು ನಾಶಮಾಡಬೇಕು. ಕಿತ್ತ ಗಿಡಗಳನ್ನು ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು.

7

ಬಾಳೆಯ ಬಂಚಿಟಾಪ್ ಅಥವಾ ಎಲೆ ಗೊಂಚಲು ಸುಳಿ ರೋಗ ಕುರಿತ ಮಾಹಿತಿ ೨೦೧೬ ರ ಜನವರಿ ತಿಂಗಳ ನೇಗಿಲ ಮಿಡಿತದಲ್ಲಿ ಪುಟ. ೩ ರಲ್ಲಿ ಪ್ರಕಟವಾಗಿದೆ.