ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ದೊಣ್ಣೆ ಮೆಣಸಿನ ಹಣ್ಣುಕೊಳೆ ರೋಗ

ರಾಜು ಜೆ.,
9844525164
12

ರೋಗ ಕೊಲ್ಯಾಟೋಟ್ರೈಕಮ್ ಕ್ಯಾಪ್ಸಿಸೈ ಶಿಲೀಂಧ್ರವು ರೋಗಪೀಡಿತ ಬೀಜ ಅಥವಾ ನೆಲದ ಮೇಲೆ ಬಿದ್ದಿರುವಂತಹ ರೋಗಪೀಡಿತ ಗಿಡದ ಭಾಗಗಳಿಂದ ಉಂಟಾಗುತ್ತದೆ. ನಂತರ ಶಿಲೀಂಧ್ರದ ಬೀಜಾಣುಗಳು ಗಾಳಿಯ ಮುಖಾಂತರ ಪ್ರಸಾರ ಹೊಂದಿ ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಎಲೆ ಮತ್ತು ಹಣ್ಣಿನ ಮೇಲೆ ವೃತ್ತಾಕಾರದ ತಗ್ಗಾದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕೆಗಳು ಉಂಗುರಾಕಾರವಾಗಿ ದೊಡ್ಡ ಮಚ್ಚೆಗಳಾಗಿ ಹರಡುತ್ತವೆ. ರೋಗದ ತೀವ್ರತೆ ಹೆಚ್ಚಾದಂತೆ ಹಣ್ಣು ಕೊಳೆಯಲಾರಂಭಿಸುತ್ತದೆ. ಮಳೆಗಾಲದಲ್ಲಿ, ವಾತಾವರಣದಲ್ಲಿನ ಉಷ್ಣಾಂಶ (೨೫-೩೦ ಡಿಗ್ರಿ ಸೆ.) ಹಾಗೂ ತೇವಾಂಶ ಶೇ. ೮೫ಕ್ಕಿಂತ ಹೆಚ್ಚಾದಲ್ಲಿ ರೋಗ ಹೆಚ್ಚಾಗುವುದು, ಈ ರೋಗದ ನಿರ್ವಹಣೆಗಾಗಿ ೧ ಮಿ.ಲೀ. ಡೈಫೆನ್ಕೊನಾಜೋಲ್ ಅಥವಾ ೧ ಗ್ರಾಂ ಕಾರ್ಬನ್ಡೈಜೆಮ್ ಅಥವಾ ೨ ಗ್ರಾಂ ಮ್ಯಾಂಕೋಜೆಬ್ ಅಥವಾ ೨ ಮಿ. ಲೀ. ಕ್ಲೋರೋಥ್ಯಾಲೊನಿಲ್ ಆಥವಾ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇದೇ ಸಿಂಪರಣೆಯನ್ನು ೧೫ ದಿವಸಗಳ ನಂತರ ಪುನಃ ಸಿಂಪಡಿಸುವುದು (ಹೆಕ್ಟೇರಿಗೆ ೪೫೦ - ೫೦೦ ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು)