ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಮೌಲ್ಯವರ್ಧನೆ

ಸಪೋಟ ನಿರ್ಜಲೀಕರಣ

ಕಾಂತರಾಜು ವೈ
9731731842

ಬೇಕಾಗುವ ಸಾಮಗ್ರಿಗಳು: ಸಪೋಟ- ೧ ಕೆ.ಜಿ, ಸಕ್ಕರೆ- ೮೦೦ ಗ್ರಾಂ, ನೀರು- ೧ ಲೀಟರ್

ತಯಾರಿಸುವ ವಿಧಾನ: ಗುಣಮಟ್ಟದ ಬಲಿತಿರುವ, ಗಟ್ಟಿಯಾಗಿ ಇರುವ ತೀರ ಮಾಗಿರದ ಹಣ್ಣುಗಳ ಆಯ್ಕೆ ಮಾಡಬೇಕು. ಆ ಹಣ್ಣುಗಳನ್ನು ಶುದ್ದ ನೀರಿನಲ್ಲಿ ತೊಳೆದು ಹಣ್ಣುಗಳನ್ನು ೨ಮಿ.ಲೀ. ಗಾತ್ರಕ್ಕೆ ಚೂರುಗಳನ್ನಾಗಿ ಕತ್ತರಿಸಿ ತಯಾರಿಸಿದ ಸಕ್ಕರೆ ಪಾಕದಲ್ಲಿ ೨ ಗಂಟೆಗಳ ಕಾಲ ನೆನೆಸಿ. ರಸ ಹೀರಿದ ಸಪೋಟ ಚೂರುಗಳನ್ನು ಪಾಕದಿಂದ ಬೇರ್ಪಡಿಸಿ ನಿರ್ಜಲೀಕರಣ ಘಟಕದಲ್ಲಿ ಇಟ್ಟು ಒಣಗಿಸಬೇಕು. ಪ್ರತಿ ಗಂಟೆಗೊಮ್ಮೆ ಹಣ್ಣುಗಳನ್ನು ತಿರುಗಿಸಿರಿ, ಪೂರ್ಣವಾಗಿ ಒಣಗಿದ ನಂತರ ನಿರ್ಜಲೀಕರಣ ಘಟಕದಿಂದ ಹಣ್ಣುಗಳನ್ನು ಹೊರತೆಗೆದು ಪಾಲಿಥೀನ್ ಕವರ್ನಲ್ಲಿ ಶೇಖರಿಸಿ.