ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ವಿಭಿನ್ನ ಚಿಂತನೆ

ಹೊಸ ಆಯಾಮಕ್ಕೆ ನಾಂದಿ

image_
ಬಿ. ಎಮ್. ಚಿತ್ತಾಪೂರ,
9448821755

ಎಚ್.ಆರ್. ಚಂದ್ರೇಗೌಡರು ಚಿಕ್ಕಮಗಳೂರಿನ ಲಕ್ಷ್ಮೀಪುರದ ಪ್ರಗತಿಪರ ರೈತರು. ಇವರು ೧೦ ಎಕರೆ ಕ್ಷೇತ್ರದಲ್ಲಿ ದಾಳಿಂಬೆ ಬೆಳೆದಿದ್ದಾರೆ. ಪ್ರತಿ ಬಾರಿಯೂ ಹಣ್ಣು ಮಾಗುವಾಗ ರಸ ಹೀರುವ ಕೀಟದ ಬಾಧೆಯಿಂದಾಗಿ ಪ್ರತಿಶತ ೩೦ರಷ್ಟು ಹಣ್ಣು ಹಾನಿಯಾಗುತ್ತಿತ್ತಂತೆ. ಸೂಕ್ಷ್ಮಗ್ರಾಹಿಯಾದ ಗೌಡರು ಒಮ್ಮೆ ತಮ್ಮ ತೋಟದಲ್ಲಿ ಪೂರ್ಣ ಮಾಗಿದ ಪೇರಲದ ಹಣ್ಣಿನಲ್ಲೂ ಈ ಕೀಟದ ಬಾಧೆ ಕಂಡು ಬಹುಶಃ ಮಾಗಿದ ಹಣ್ಣಿನ ವಾಸನೆಗೆ ಈ ಕೀಟ ಆಕರ್ಷಿತವಾಗುತ್ತಿರಬಹುದೆಂದು ಊಹಿಸಿ ಹುಳಗಳನ್ನು ಆಕರ್ಷಿಸಲು ಬೇರೆಲ್ಲ ಹಣ್ಣುಗಳನ್ನು ಬಳಸಿ ಕೊನೆಯಲ್ಲಿ ಬಾಳೆ ಹಣ್ಣು ಬಹಳ ಪ್ರಯೋಜನಕಾರಿಯೆಂದು ಮನಗಂಡರು. ನಂತರ ತೋಟದ ಬದಿಯಲ್ಲಿ ೧೫ ಅಡಿ ಅಂತರದಲ್ಲಿ ಮತ್ತು ಒಳಗಡೆ ೩೦ ಅಡಿಗಳ ಅಂತರದಲ್ಲಿ ಕಳಿತ ಬಾಳೆ ಹಣ್ಣುಗಳನ್ನು ಕಟ್ಟಿ ಪ್ರತಿದಿನ ಆಕರ್ಷಿತವಾದ ಹುಳಗಳನ್ನು ಭೌತಿಕವಾಗಿ ನಾಶಪಡಿಸುವ ವ್ಯವಸ್ಥೆಯನ್ನು ಇದೀಗ ಮಾಡಿಕೊಂಡಿದ್ದಾರೆ. ಒಂದು ಬಾರಿ ಕಟ್ಟಿದ ಹಣ್ಣು ಒಂದುವಾರ ಬರುವುದಂತೆ, ಹೀಗೆ ಒಂದು ತಿಂಗಳು ಮಾಡಿದರೆ ಸಾಕು