ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಈರುಳ್ಳಿ ಬೀಜೋತ್ಪಾದನೆಗೆ ಅನುಸರಿಸುವ ತಂತ್ರಜ್ಞಾನಗಳು ರೈತರ ಮಾತುಗಳಲ್ಲಿ

ರಘು ಸಂವೇದನ್

ಬೀಜ ಆಯ್ಕೆ ಮಾಡುವಾಗ ನಾವೇ ಬೆಳೆದ ಈರುಳ್ಳಿ ಗಡ್ಡೆಗಳಲ್ಲಿ ಮಧ್ಯಮ ಗಾತ್ರದ ಈರುಳ್ಳಿ (೩೦ ರಿಂದ ೪೦ ಗ್ರಾಂ ತೂಗುವಂತಹ) ಗಡ್ಡೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆಯ್ದ ಗಡ್ಡೆಗಳನ್ನು ೧ ತಿಂಗಳು ನೆರಳಿನಲ್ಲಿ ಇರಿಸಿ ನಾಟಿ ಮಾಡಲು ತಯಾರಿಸಿಕೊಂಡು ನವೆಂಬರ್ ೧೫ ರಿಂದ ೨೦ ನೇ ತಾರೀಖಿನಂತೆ ನಾಟಿ ಮಾಡುತ್ತೇವೆ.

ಳಿ ಎಕರೆ ಈರುಳ್ಳಿ ಬೀಜ ನಾಟಿ ಮಾಡಲು ಭೂಮಿ ಸಿದ್ಧತೆ ಮಾಡಿಕೊಳ್ಳುವಾಗ ಮೂಲ ಗೊಬ್ಬರವಾಗಿ ೨ ರಿಂದ ೩ ಟನ್ ಕೊಟ್ಟಿಗೆ ಗೊಬ್ಬರಕ್ಕೆ ಟ್ರೈಕೋಡರ್ಮಾ/ ಸೂಡೊಮೊನಾಸ್/ ರೈಜೋಬಿಯಂ ಅನ್ನು ಮಿಶ್ರಣ ಮಾಡಿಕೊಂಡು ನೆರಳಿನಲ್ಲಿ ನೀರು ಹಾಕಿಕೊಳ್ಳುತ್ತ ೧ ತಿಂಗಳು ಸಿದ್ಧಪಡಿಸಿಕೊಂಡು ಅದನ್ನು ಭೂಮಿಗೆ ಸೇರಿಸುತ್ತೇವೆ. ಕೃಷಿ ವಿಜ್ಞಾನ ಕೇಂದ್ರ, ಹಿರಿಯೂರು ವಿಜ್ಞಾನಿಗಳ ಸಲಹೆಯಂತೆ ಗೊಬ್ಬರವನ್ನು ಹಂತ ಹಂತವಾಗಿ ನಾಟಿ ಮಾಡಿದ ಎರಡು ತಿಂಗಳ ನಂತರ ಮೇಲುಗೊಬ್ಬರವಾಗಿ ಡಿಐಪಿ/ಪೊಟ್ಯಾಶ್/ಡಿಎಸ್ಪಿ ಹಾಗೂ ಅಮೋನಿಯಂ ಸಲ್ಫೇಟ್ ಮತ್ತು ೨೦:೨೦:೧೦:೨೬ (ಳಿ ಎಕರೆಗೆ ೫೦ ಕೆಜಿಯಂತೆ) ನೀಡುತ್ತಿದ್ದೇವೆ.

ನಾಟಿ ಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಹಿರಿಯೂರು ಅವರ ಸಲಹೆ ಮೇರೆಗೆ ಸಾಲಿನಿಂದ ಸಾಲಿಗೆ ಒಂದು ಗಡ್ಡೆಯಿಂದ ಇನ್ನೊಂದು ಗಡ್ಡೆಗೆ ಳಿ ಅಡಿ ಅಂತರ ನೀಡಿರುತ್ತೇವೆ. ಇದರಿಂದ ನಮಗೆ ಳಿ ಎಕರೆಗೆ ೫ ರಿಂದ ೬ ಕ್ವಿಂಟಾಲ್ ಬೀಜ ಸಾಕಾಗುತ್ತಿದೆ. ನಂತರ ಇದರಲ್ಲಿ ಬೆಳೆಯುವ ಕಳೆಯನ್ನು ಕೈಯಿಂದ ತೆಗೆದು ಒಮ್ಮೆ ಮಾತ್ರ ಕಳೆ ಔಷಧಿಯನ್ನು ಸಿಂಪಡಿಸುತ್ತಾರೆ.

ನೀರಿನ ಬಳಕೆಯಲ್ಲಿ iಟಿಟಿeಡಿ ಟಚಿಣeಡಿಚಿಟ ಜಡಿiಠಿ iಡಿಡಿigಚಿಣioಟಿ ಕ್ರಮವನ್ನು ಅಳವಡಿಸಿಕೊಂಡಿರುತ್ತೇವೆ. ಇದಕ್ಕೆ ಕೃಷಿ ಇಲಾಖೆಯವರು ಬೆನ್ನೆಲುಬಾಗಿ ನಿಂತು ಸಬ್ಸಿಡಿ ನೀಡಿ ನೀರಿನ ಪರಿಕರಗಳನ್ನು ನೀಡಿರುತ್ತಾರೆ. ನಾಟಿ ಆದ ಮೇಲೆ ೨ಳಿ ರಿಂದ ೩ ಅಡಿಗೆ ಒಂದರಂತೆ ೧೬ ಎಂ ಎಂ ಲ್ಯಾಟರಲ್ ಪೈಪ್ ಉಪಯೋಗಿಸಿದ್ದು ೨ ರಿಂದ ೩ ದಿನಕ್ಕೊಮ್ಮೆ ನೀರು ನೀಡುತ್ತಿದ್ದು ಈ ಕ್ರಮದಿಂದ ನೀರಿನ ಬಳಕೆಯಲ್ಲಿ ಉಳಿತಾಯವಾಗಿರುತ್ತದೆ ಹಾಗೂ ಥ್ರಿಪ್ಸ್ ರೋಗ ಕೂಡ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ.

ಇನ್ನು ಈರುಳ್ಳಿ ಬೀಜೋತ್ಪಾದನೆಯಲ್ಲಿ ಥ್ರಿಪ್ಸ್(ನುಸಿ), ನೆರಳು ಮಚ್ಚೆ ರೋಗ, ಬ್ಲಾಟ್ ರೋಗ, ಕೊಳೆರೋಗ ಇವು ಹೆಚ್ಚಾಗಿ ಕಂಡುಬರುವ ರೋಗಗಳು. ಮುಂಗಡವಾಗಿ ಯಾವುದೇ ಔಷಧ ಸಿಂಪಡಣೆ ಅನವಶ್ಯಕವಾಗಿ ಮಾಡದೆ, ರೋಗದ ಲಕ್ಷಣ ಕಂಡುಬಂದಾಗ ಮಾತ್ರ ಔಷಧ ಸಿಂಪಡಣೆ ಮಾಡುತ್ತೇವೆ. ಹಲವು ನೈಸರ್ಗಿಕ ಪದ್ಧತಿಯನ್ನು ಸಹ ಅಳವಡಿಸಿಕೊಂಡಿದ್ದೇವೆ, ಅಂದರೆ ತಾಕಿನಲ್ಲಿ ಅಲ್ಲಲ್ಲಿ ಹಳದಿ ಟ್ರ್ಯಾಪ್ಗಳನ್ನು ಉಪಯೋಗಿಸುತ್ತಿದ್ದು ತಾಕಿನ ಸುತ್ತ ಜೋಳ ಮತ್ತು ಚೆಂಡು ಹೂವನ್ನು ಬೆಳೆದಿದ್ದೇವೆ. ಈ ಎಲ್ಲಾ ಪದ್ಧತಿಯಿಂದ ಶೇ. ೫೦ ರಷ್ಟು ರೋಗ ನಿಯಂತ್ರಣಕ್ಕೆ ಸಹಾಯಕವಾಗಿದ್ದು ಒಂದು ಔಷಧಿಯ ಸ್ಪ್ರೇಯ್ನ ಹಣ ಉಳಿತಾಯವಾಗುತ್ತಿದೆ.

ಇದರಲ್ಲಿ ಇನ್ನೊಂದು ವಿಧಾನ ಜೇನು ಪೆಟ್ಟಿಗೆಯನ್ನು ತಾಕಿನಲ್ಲಿ ಇರಿಸಿರುವುದು. ಇದರಿಂದ ಪಾಲಿನೇಶನ್ನ ಪ್ರಮಾಣ ಗಾಳಿಯಿಂದ ಆಗುವ ಪ್ರಮಾಣಕ್ಕಿಂತ ಜೇನು ನೊಣದಿಂದ ಪಾಲಿನೇಶನ್ ಆಗುವ ಪ್ರಮಾಣ ಹೆಚ್ಚು ಹಾಗೂ ಈ ಪದ್ಧತಿಯಿಂದ ಇಳುವರಿಯು ಹೆಚ್ಚಾಗಿದೆ.

ಸಾಮಾನ್ಯ ನವೆಂಬರ್ನಲ್ಲಿ ನಾಟಿ ಮಾಡಿದರೆ, ಮುಂಗಾರು ಬೀಳುವ ಮುನ್ನ ಅಂದರೆ ನಾಟಿ ಮಾಡಿ ನಾಲ್ಕು ತಿಂಗಳಿಗೆ ಬೆಳೆ ಕಟಾವಿಗೆ ಬರುತ್ತದೆ. ಒಂದು ತೆನೆಯಲ್ಲಿ ಬೀಜದ ಮೇಲಿನ ಸಿಪ್ಪೆ ತೆಗೆದುಕೊಂಡರೆ ಸಾಕು ಕಟಾವು ಶುರು ಮಾಡಬಹುದು. ತಾಕಿನಲ್ಲಿ ಮಡಿಗಳನ್ನು ಮಾಡಿಕೊಳ್ಳುವಾಗ ಔಷಧಿ ಸಿಂಪಡಣೆಗೆ ಮತ್ತು ಕಟಾವು ಮಾಡುವುದಕ್ಕೆ ಅನುಕೂಲವಾಗುವಂತೆ ಜಾಗ ಬಿಟ್ಟುಕೊಂಡಿರಬೇಕು. ಆಗ ತೆನೆ ಕಟಾವಿಗೆ ಬಂದ ಹಾಗೆಲ್ಲ ಕಟಾವು ಮಾಡಿಕೊಳ್ಳಬಹುದು.

ತೆನೆ ಮುರಿದ ಮೇಲೆ ಎಲ್ಲ ತೆನೆಗಳನ್ನು ಒಂದು ಪ್ಲಾಸ್ಟಿಕ್ ಟಾರ್ಪಲ್ನಲ್ಲಿ ಹಾಕಿ ಒಂದು ಕತ್ತಲ ಕೋಣೆಯಲ್ಲಿ ಗಾಳಿ ಆಡದ ಹಾಗೆ ೨ ರಿಂದ ೩ ದಿನ ಮುಚ್ಚಿಡಬೇಕು. ಹೀಗೆ ಮಾಡುವುದರಿಂದ ಕಾವು ಹೆಚ್ಚಾಗಿ ಬೀಜ ಬೇಗ ಉದುರುವುದಕ್ಕೆ ಸಹಾಯವಾಗುವುದು. ನಂತರ ಟಾರ್ಪಲ್ ಮೇಲೆ ೨ ದಿನ ಬಿಸಿಲಿನಲ್ಲಿ ಹಾಕಿಕೊಂಡು ಬಡಿದುಕೊಳ್ಳಬಹುದು. ಇದಾದ ೧ ವಾರದ ನಂತರ ಮಾರಾಟ ಮಾಡುತ್ತೇವೆ.