ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಅರ್ಕಾ ಕಲ್ಯಾಣ - ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ಯಶೋಗಾಥೆ

ಚಿತ್ರದುರ್ಗ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಬಬ್ಬೂರುನಲ್ಲಿದೆ. ಇಲ್ಲಿನ ವಿಜ್ಞಾನಿಗಳೆಲ್ಲಾ ಸೇರಿ ಈರುಳ್ಳಿ ಬೀಜೋತ್ಪಾದನೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕಳೆದೈದು ವರ್ಷಗಳಿಂದ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೃಷಿ ವಿಜ್ಞಾನ ಕೇಂದ್ರ. ಈ ವರ್ಷ ಹಳ್ಳಿಗೆ ಹಳ್ಳಿಯನ್ನೇ ತಂತ್ರಜ್ಞಾನ ಅಳವಡಿಕೆಗೆ ಪ್ರೋತ್ಸಾಹಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ೧೯೧೯೩ ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆಯುತ್ತಿದ್ದು ೨ ಲಕ್ಷ ಕೆಜಿ ಬೀಜದ ಅವಶ್ಯಕತೆ ಇದೆ. ಈರುಳ್ಳಿ ಬೀಜದ ಇನ್ನೊಂದು ವಿಶೇಷ ಎಂದರೆ ಬೀಜ ಸಿದ್ಧವಾದ ಮೇಲೆ ಕೇವಲ ೧ ರಿಂದ ೨ ತಿಂಗಳ ಒಳಗಾಗಿ ಇದನ್ನು ಬಿತ್ತನೆಗೆ ಬಳಸಬೇಕು. ಒಂದು ಹಂಗಾಮು ದಾಟಿದರೆ ಮೊಳಕೆಯೊಡೆಯುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೀಜಗ್ರಾಮಗಳು ಅತಿ ಅವಶ್ಯಕ. ಇದನ್ನರಿತ ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು ಗುಣಮಟ್ಟದ ಈರುಳ್ಳಿ ಬೀಜ ಉತ್ಪಾದನೆಗೆ ಯೋಜನೆಯೊಂದನ್ನು ರೂಪಿಸಿತು. ಹಲವು ಯೋಜನೆಗಳ ಸಂಯೋಜನೆ ಮಾಡಿ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ, ಐಐಎಚ್ಆರ್ ಬೆಂಗಳೂರಿಂದ, ಬ್ರೀಡರ್ಸ್ ಸೀಡ್, ಈರುಳ್ಳಿ ಬೆಳೆ ಉತ್ಪಾದನಾ ಪ್ರಾತ್ಯಕ್ಷಿಕೆ, ತರಬೇತಿ, ಬೀಜೋತ್ಪಾದಕರ ಸಂಘ ಮಾಡುವುದು, ಸಲಹಾ ಸೇವೆ ಜೊತೆಗೆ ರೈತರ ಕ್ಷೇತ್ರ ಪಾಠಶಾಲೆಗಳನ್ನು ಈ ಕಾರ್ಯ ಜಾರಿ ಮಾಡಿತು.

೨೦೧೨-೧೩ರಲ್ಲಿ ಪ್ರಾರಂಭಿಸಿದ ಯೋಜನೆ ಮೊದಲಲ್ಲಿ ೮ ರೈತರಿಂದ ೧೨ ಕ್ವಿಂಟಾಲ್ ಬೀಜದಿಂದ ಪ್ರಾರಂಭಿಸಿ ವರ್ಷದಿಂದ ವರ್ಷಕ್ಕೆ ರೈತರ ಸಂಖ್ಯೆ ಹೆಚ್ಚಿ ಸುತ್ತ ಪ್ರಸ್ತುತ ಸಾಲಿಗೆ ಒಟ್ಟು ೮೮ ರೈತರು ೨೭೨ ಕ್ವಿಂಟಾಲ್ ಬೀಜ ಉತ್ಪಾದನೆ ಮಾಡಿದ್ದಾರೆ. ಇಂದು ಹಳ್ಳಿಗೆ ಹಳ್ಳಿಯೇ ಬೀಜ ಉತ್ಪಾದಿಸುತ್ತಿದೆ. ಇಲ್ಲಿ ಉತ್ಪಾದಿಸಿದ ಬೀಜಕ್ಕೆ ರೈತರೆ ಗ್ಯಾರಂಟಿ. ರೈತರಿಂದ ರೈತರಿಗೆ ನೇರವಾಗಿ ಉತ್ತಮ ತಳಿ ಬೀಜ ಹಂಚುವ ಕಾರ್ಯವಾಗುತ್ತಿದೆ. ಇದರಿಂದಾಗಿ ಕಳೆದೈದು ವರ್ಷದಲ್ಲಿ ಅರ್ಕಾ ಕಲ್ಯಾಣ ಬೀಜ ಲಭ್ಯತೆಯಿಂದ ೨೭೨೦ ಹೆಕ್ಟೇರ್ನಲ್ಲಿ ಅರ್ಕಾ ಕಲ್ಯಾಣ ತಳಿ ಬೆಳೆದಿದ್ದಾರೆ. ರೈತರು ಒಂದು ಹೆಕ್ಟೇರ್ ಬೀಜೋತ್ಪಾದನೆಯಿಂದ ನಿವ್ವಳ ೭.೧೦,೦೦೦ ಲಕ್ಷ ಹಾಗೂ ಈರುಳ್ಳಿ ಬೆಳೆಯಿಂದ ಹೆಕ್ಟೇರಿಗೆ ೨,೦೫,೦೦೦ ಆದಾಯ ಗಳಿಸಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಈ ಸಾಧನೆಗೆ ನಮ್ಮ ಅಭಿನಂದನೆಗಳು.