ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಕೃಷಿರಂಗ

ಉಂಡು ಸಂತಸದಿಂದಿರು

ಡಾ. ವಿ. ನಾಗಭೂಷಣ
೯೯೦೨೨೦೪೯೯೪

ಸೀಮೆಹಸು: ಏನು? ನನ್ನ ಬಗ್ಗೆನೇ ಮಾತಾಡ್ತಾ ಇದ್ದಂಗಿತ್ತು ! ನಾನೆಲ್ಲಾ ಕೇಳಿಸ್ಕಂಡೆ. ಹೌದು, ನಂದೇನೋ ರಾಣಿ ತರ ಜೀವನ ಕಣಮ್ಮ. ಕೂತಲ್ಲೇ ಎಲ್ಲಾ ಬಂದು ಬೀಳತ್ತೆ. ಹಾಲು ಕರೆಯಕ್ಕೆ ಮುಂಚೆ ಹಿಂಡಿ. ಅದೂ ಹಾಲಿನ ಇಳುವರಿಗೆ ಸರಿಯಾಗಿ. ಬಾಳಾ ಲೆಕ್ಕಾಚಾರದ ಮನುಷ್ಯ ನಮ್ಮ ಯಜಮಾನ. ಆದಾದ ಮೇಲೆ ಹಸಿಮೇವು. ಅದ್ರಲ್ಲೂ ವೆರೈಟಿ ಏಕದಳ ಅಂತೆ, ದ್ವಿದಳ ಅಂತೆ. ಆಮೇಲೆ ಸ್ನಾನ. ಮತ್ತೆ ಒಣ ಹುಲ್ಲಂತೂ ಸದಾ ಇರುತ್ತೆ. ಮತ್ತೆ ಸಂಜೆ ಹೊತ್ತಿಗೆ ಹಿಂಡಿ ಬೂಸಾ ಅಂತ ಮತ್ತೆ ತಿನ್ನಕ್ಕೆ ಕೊಡ್ತಾನೆ. ಯಾರಿಗುಂಟು ಯಾರಿಗಿಲ್ಲ.

ಬರಡು ಹಸು: ನೀನು ಪುಣ್ಯ ಮಾಡಿದ್ದೀಯಮ್ಮಾ. ನಮ್ಮ ಯಜಮಾನನಿಗೆ ಯಾವಾಗ ಬುದ್ಧಿ ಬರತ್ತೋ ಏನೋ. (ಅಷ್ಟರಲ್ಲಿ ಅವರವರ ಯಜಮಾನರು / ಮಾಲೀಕರು ಬರುವರು. ಜಾನುವಾರುಗಳೆಲ್ಲ ಮಾತ ನಾಡುವುದನ್ನು ನಿಲ್ಲಿಸಿ ವಿಶ್ರಾಂತಿಗೆ ಜಾರುವುವು.)

ದೃಶ್ಯ – ೩ : (ಮುಂಜಾನೆ ಜಾತ್ರೆಯ ಸಡಗರ ಆರಂಭ, ವಾಲಗ, ಡೊಳ್ಳು, ಹಲಗೆ ಶಬ್ದ, ಜಾನುವಾರುಗಳ ಮಾಲೀಕರು ತಮ್ಮ ತಮ್ಮ ರಾಸುಗಳನ್ನು ಅಲಂಕರಿಸಿ ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಕಾಯುತ್ತಿರುವರು. ಎಲ್ಲೆಲ್ಲೂ ಗುಜು ಗುಜು ಗದ್ದಲ, ಜನಗಳಿಂದ ವಾತಾವರಣ ತುಂಬಿ ಹೋಗುತ್ತದೆ.)

ಶಾಮಣ್ಣ: ಹೇ ಎಷ್ಟೊಂದು ಜಾನುವಾರುಗಳು!, ಈರಣ್ಣ: ಅಲ್ನೋಡು ಆ ಎತ್ತಿನ ಜೋಡಿ ಬಾಳ ಚೆನ್ನಾಗಿದೆ. ಹಳ್ಳಿಕಾರ್ ಎತ್ತು ಅಲ್ವಾ?

ಶಾಮಣ್ಣ: ಹಳ್ಳಿಕಾರ್ ಹೋರಿ ಸಹ ಬಂದಿದೆ., ಈರಣ್ಣ: ಅಲ್ಲಿ ನೋಡು ಸೀಮೆ ಹಸುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ.

ಶಾಮಣ್ಣ: ಅಬ್ಬಾ ಹಂಗೆ ತೆಳ್ಳಗೆ ಚರ್ಮ ಹೊಳೀತಿದೆ. ಕೆಚ್ಚಲಂತೂ ನೆಲಕ್ಕೆ ತಾಗುವಷ್ಟು ದೊಡ್ಡದು. ಏನಿಲ್ಲ ಅಂದರೂ ಹೊತ್ತಿಗೆ ೧೦-೧೨ ಲೀಟರ್ ಹಾಲು ಕೊಡಬಹುದು.

ಈರಣ್ಣ: ಅರೇ ಇಲ್ನೋಡು ಎಮ್ಮೆನೂ ಬಂದವೆ. ಸೂರ್ತಿ, ಮುರ್ರಾ, ಧಾರವಾಡದ ಎಮ್ಮೆ ಎಲ್ಲಾ ಅವೆ. ನಮ್ಮನೇಲಿ ಕರಾವು ನಿಂತು ಒಂದು ತಿಂಗ್ಳಾತು. ಒಂದು ಒಳ್ಳೆ ಎಮ್ಮೆ ತಗಳಣಾ ಅಂತ ಬಂದೆ.

ಶಾಮಣ್ಣ: ನಮ್ದೂ ಅದೇ ಕಥೆ. ಕಳೆದ ಸಲ ಜಾತ್ರೇಲಿ ಒಂದು ವಳ್ಳೆ ಎಚ್, ಎಫ್. ಕ್ರಾಸ್ ದನ ಒಯ್ದಿದ್ದೆ. ಮೊನ್ನೆ ಮೊನ್ನೆ ಹೊಂಟೋಯ್ತು ಕಣ್ಲಾ., ಈರಣ್ಣ: ಆಂ ಅದ್ಯಾಂಗೆ?

ಶಾಮಣ್ಣ: ಏನ್ಹೇಳ್ಳಿ ಮಾರಾಯ. ರಾತ್ರಿ ಚೆನ್ನಾಗಿದ್ದಿದ್ದು ಬೆಳಿಗ್ಗೆ ನೋಡೋವಷ್ಟರಲ್ಲಿ ಸತ್ತು ಹೋಗಿತ್ತು. ಹೊತ್ತಿಗೆ ೧೦ಲೀ ಹಾಲು ಕೊಡ್ತಿತ್ತು. ಹೊಟ್ಟೆ ಉರ್ದೋೊಯ್ತು, ಈರಣ್ಣ: ಇದ್ದಕ್ಕಿದ್ದಂತೆ ಸಾಯ್ಬೇಕು ಅಂತಂದ್ರೆ ನೀನೇ ಏನೋ ಎಡವಟ್ಟು ಮಾಡ್ಕಂಡಿದೀಯ.

ಶಾಮಣ್ಣ: ಹೌದಪ್ಪ. ಮರ್ದಿೊನ ಡಾಕ್ಟ್ರು ಬಂದೋರು ಹೇಳಿದ್ರು - ಅಕ್ಕಿನೋ ಜ್ವಾಳಾನೋ ಒಟ್ಟಿಗೆ ಜಾಸ್ತಿ ತಿಂದಿರ್ಬೇ1ಕು ಅಂತ. ಅಂಗೇ ಆತು. ಒಳ್ಳೆ ಪಾಠ ಕಲ್ತಕಂಡ ಹಾಗೆ ಆತು. ಅದ್ಸರಿ ಹೋದವರ್ಷದ ಜಾತ್ರೆಲಿ ತಗಂಡ ನಿನ್ನ ಎಮ್ಮೆ ಏನಾತು.

ಈರಣ್ಣ: ಅಯ್ಯೋ ಪ್ರತಿ ಸಲ ಅದೇ ಕಥೆ. ಹಾಲು ಕೊಡೋ ತನಕ ಕರೆಯದು. ನಂತರ ಗೊಡ್ಡು ಬೀಳದು. ಮತ್ತೆ ಮಾರದು

ಶಾಮಣ್ಣ: ಅಲ್ಲಯ್ಯ ಗೊಡ್ಡಾಗಕ್ಕೆ ಯಾಕೆ ಬಿಟ್ಟೆ. ಸರಿಯಾಗಿ ಆರೈಕೆ ಮಾಡದಲ್ವಾ, ಈರಣ್ಣ: ಹಾಲೇ ಕೊಡಲ್ಲಾ ಅಂದ್ಮೇಲೆ ಆರೈಕೆ ಎಂತಕ್ಕೆ ಮಾಡದು ಮಾರಾಯ

ಶಾಮಣ್ಣ: ಅದೇ ತಪ್ಪು ನೋಡು. ಕರಾ ಹಾಕಿ ಎರಡು ತಿಂಗ್ಳೀಗೇ ಬೆದೆ ನೋಡಿಕೊಂಡು ಹೋರಿ ಬಿಡಬೇಕು. ಇಲ್ಲಾ ಡಾಕ್ಟ್ರ ಅತ್ರ ಹೋಗಿ ಇಂಜಕ್ಷನ್ ಹಾಕ್ಸಬೇಕು.

ಈರಣ್ಣ: ಹೇಳದು ಬಾಳಾ ಸಲೀಸು. ಬೆದೆಗೆ ಬಂದಿದ್ದೇ ತಿಳೀಲಿಲ್ಲಾ ಅಂತೀನಿ, ಶಾಮಣ್ಣ: ಅಯ್ಯೋ ದಡ್ಡ. ಎಮ್ಮೆಗಳಲ್ಲಿ ಬೆದೆ ಲಕ್ಷಣ ಸರಿಯಾಗಿ ಗೊತ್ತಾಗಲ್ಲ ಅಂತಾರೆ. ಅದಕ್ಕೆ ಜಾಸ್ತಿ ಗಮನ ಬೇಕು. ಮತ್ತೆ ಹಾಲು ಕೂಡಾ ಕರು ಹಾಕತನಕಾನೂ ಕರ್ಯಬದಲ್ಲ. ಗಬ್ಬಕಟ್ಟಿ ಎಂಟು ತಿಂಗ್ಳು ಆದ ಮೇಲೆ ಹಾಲು ಕರ್ಯಗದು ನಿಲ್ಸಿ ಹೆಚ್ಚಿಗೆ ಹಿಂಡಿ - ಬೂಸಾ ಕೊಡಬೇಕು. ಒಟ್ಟಲ್ಲಿ ಒಂದೂವರೆ ವರ್ಷಕ್ಕೆ ಒಂದಾದರೂ ಕರ ಹಾಕೂ ಹಂಗೆ ಆಹಾರದ ನಿಗಾ ವಹಿಸಬೇಕು. ಏನಂತೀಯ.

ಈರಣ್ಣ: ಇನ್ಮೇಲೆ ನೀನು ಹೇಳಿದ ಹಾಗೇ ಮಾಡ್ತೀನಿ. ಅದ್ಯಾಕಾಗಲ್ಲ ನೋಡಣ, ಶಾಮಣ್ಣ: ಅರೇ. ಮಲ್ಲಿಗೆಹಳ್ಳಿ ಶಂಕ್ರಪ್ಪ ಬಂದವ್ನೆ. ಈರಣ್ಣ ನೀ ನಡಿ ಮುಂದೆ. ನಾನು ಶಂಕ್ರಪ್ಪನ್ನ ಮಾತಾಡ್ಸಕಂಡು ಬತ್ತೀನಿ. ಏ ಶಂಕ್ರಪ್ಪ ಯಾವಾಗ ಬಂದ್ಯೋ. ಏನ್ ಸಮಾಚಾರ!

ಶಂಕ್ರಪ್ಪ: ಏನಿಲ್ಲ ಶಾಮಣ್ಣ ಎಲ್ಲಾ ಚಂದಾಗದೆ ಈ ಸಲ ಬ್ಯಾಸಾಯಕ್ಕೆ ಎತ್ತು ಇಲ್ದಿದ್ದಂಗಾಗೋಗದೆ ಶಾಮಣ್ಣ. ಅಂಗೆ ಒಂದು ಜತೆ ಎತ್ತು ಕೊಂಡ್ಕಳಾವಾ ಅಂತ ಬಂದೆ

ಶಾಮಣ್ಣ: ಅಂಗಾ. ಅಂದ್ರೆ ಬಾಳಾ ದುಡ್ಡ ಮಡಿಕ್ಕಂಡೆ ಬಂದಿದೀಯಾ ಅಂದ ಹಾಗಾಯ್ತು. ಯಾಕಂದ್ರೆ ಎತ್ತು ಕೊಂಡ್ಕಳಾದು ಒಂದೇ, ಒಂದು ಮೋಟಾರ್ ಬೈಕ್ ಕೊಂಡ್ಕಳಾದೂ ಒಂದೆ ಈಗಿನ ಕಾಲ್ದಾಗೆ.

ಶಂಕ್ರಪ್ಪ: ಆದ್ರೆ ಬೈಕಲ್ಲಿ ಹೊಲ ಊಳಕ್ಕೆ ಬರದಿಲ್ವಲ್ಲಪ್ಪೋ. (ಪುಟ್ಟೇಗೌಡ ತನ್ನ ಎತ್ತನ್ನು ತಮಟೆಯೊಂದಿಗೆ ಕರೆದೊಯ್ಯುವನು), ಶಾಮಣ್ಣ: ಒಂದು ಕೆಲ್ಸ ಮಾಡು. ಈಗ ಹೋದ್ವಲ್ಲ. ಆ ಹಳ್ಳಿಕಾರ್ ಜತೆ ಕೊಂಡ್ಕಂಡ್ ಬಿಡು.

ಶಂಕ್ರಪ್ಪ: ಅದೂ ಕೇಳಿದ್ದಾಯಿತು. ನಮ್ಮೂರ ಪುಟ್ಟೇಗೌಡ ಅವನು. ಹೈ ರೇಟ್ ಹೇಳ್ತವ್ನೆ. ಫ್ರೈಜ್ ಬತ್ತದೆ ಅಂತ ರೇಟೇ ಇಳ್ಸಾಕಿಲ್ಲ, ಶಾಮಣ್ಣ: ಹಾಂಗಂತವ್ನಾ?, ಶಂಕ್ರಪ್ಪ: ಅಷ್ಟೇ ಅಲ್ಲ ಮಾತಾಡ್ಸಿದ್ರೆ ಕತೇನೇ ಹೇಳ್ತವ್ನೆ. ಅದಕ್ಕೆ ಬಂಗಾರಾನೇ ತಿನ್ಸೀವ್ನಿ ಅಂತವ್ನೆ

ಶಾಮಣ್ಣ: ಏನಪ್ಪಾ ಅಂತಾದ್ದು ಪ್ರಪಂಚದಾಗೆ ಇಲ್ದಿದ್ದು, ನಾಕಾಣ್ದಿದ್ದು?, ಶಂಕ್ರಪ್ಪ: ಹೊಸಾದು ಏನೂ ಇಲ್ಲ. ಒಣ ಮೇವು, ಹಸಿಮೇವು ಕ್ಯಾಟ್ಲ್ಫೀಡು, ಶಾಮಣ್ಣ: ಅದ್ರಲ್ಲೇನು ವಿಶೇಷ?, ಶಂಕ್ರಪ್ಪ: ಮೇವು ಹಿಂಡೀಲಿ ವಿಶೇಷ ಇಲ್ಲ. ಪ್ರಮಾಣ ಮುಖ್ಯ ಅಂತವ್ನೆ. ಮೇವು ೨/೩ ಭಾಗ ಅಂತೆ. ಕ್ಯಾಟ್ಲ್ಫೀಡು ೧/೩ ಭಾಗ ಅಂತೆ.

ಶಾಮಣ್ಣ: ನಾವೂ ಅಂಗೇ ಹಾಕಾದು ಮತ್ತೆ, ಶಂಕ್ರಪ್ಪ: ಅಂಗಲ್ಲಂತೆ ಮೇವ್ನಾಗೂ ಮುಕ್ಕಾಲು ಭಾಗ ಒಣ ಮೇವು ಇನ್ನು ಕಾಲು ಭಾಗ ಹಸಿ ಮೇವಂತೆ. ಹುರುಳಿ, ಅವರೆ, ಅಲಸಂದಿ ಮೇವು ಇದ್ರೆ ಕ್ಯಾಟ್ಲ್ ಫೀಡ್ ಇನ್ನು ಕಮ್ಮಿ ಸಾಕಂತೆ .... ಇನ್ನೂ ಏನೇನೋ ಅಂತಿದ್ದ. ತಲೆ ಕೆಟ್ಟು ಇತ್ಲಾಕಡೆ ಬಂದೆ