ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ವನೌಷಧಿ ಗುಣಧರ್ಮ

ಜೇನುತುಪ್ಪ

ತಿರುಕ

ಆಯುರ್ವೇದಶಾಸ್ತ್ರದ. ರೀತಿಯಲ್ಲಿ ಜೇನುತುಪ್ಪವು ವಾತಕಾರಕವೂ, ಗುರುವೂ, ಶೀತಲವೂ, ರಕ್ತಪಿತ್ತ ಮತ್ತು ಕಫನಾಶಕವೂ ಆಗಿರುತ್ತದೆ. ಅಲ್ಲದೆ ಇದು ಸಂಧಾನಕರವೂ, ಭೇದಕವೂ, ರೂಕ್ಷವೂ, ಕಷಾಯವೂ ಮತ್ತು ಮಧೂರವೂ ಕೂಡ ಆಗಿದೆ. ಆದರೆ ಇದು ಸಾಮಾನ್ಯವಾದ ಜೇನುತುಪ್ಪದ ಗುಣ. ಇದರಲ್ಲಿ ಭಿನ್ನ ಭಿನ್ನವಾದ ಪೌತ್ತಿಕಮಧು, ಭ್ರಮರಮಧು, ಕ್ಷುದ್ರಮಧು, ಮಾಕ್ಷಿಕಮಧು, ಭಾತ್ರಮಧು, ಜಾದ್ದಾಲಕಮಧು, ಆರ್ಧ್ಯಮಧು, ಶರ್ಕರಾಮಧು, (ಮಧುಶರ್ಕರಾ)ಪುರಾತನಮಧು, ನವೀಮಧು, ಪಕ್ವಮಧುಗಳೆಂಬ ಬೇರೆ ಬೇರೆ ಜೇನುತುಪ್ಪಗಳನ್ನು ಹೇಳಿದ್ದಾರೆ. ಆದರೆ ಬಹುತೇಕ ಮೂಲ ಗುಣಧರ್ಮಗಳಲ್ಲಿ ಮಾತ್ರ ಇವುಗಳಲ್ಲಿ ವಿಶೇಷ ವ್ಯತ್ಯಾಸವೇನೂ ಇಲ್ಲ. ಮೂಲತಃ ಇವುಗಳೆಲ್ಲವೂ ಲೇಖನವೂ, ದೀಪನವೂ, ಗ್ರಾಹಿಯೂ ಚಕ್ಷುಷ್ಯವೂ, ಸ್ವರ್ಯವೂ, ವೃಷ್ಯವೂ, ಮೇಧ್ಯವೂ, ವ್ರಣಶೋಧಕವೂ, ವ್ರಣರೋಪಕವೂ ಕೂಡ ಆಗಿರುತ್ತದೆಂದು ಹೇಳಲಾಗಿದೆ. ಆದುದರಿಂದಲೇ ಜೇನುತುಪ್ಪವನ್ನು ವಿಶ್ವವ್ಯಾಪಿಯಾಗಿ ಬಹುಶ್ರೇಷ್ಠವಾದ ಆಹಾರ ವಸ್ತುವಾಗಿ ಪರಿಗಣಿಸಲಾಗಿದೆ. ಶುದ್ಧ ಮಧುವು ಅಮೃತಕ್ಕೆ ಸಮಾನ.

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಜೇನುತುಪ್ಪ/ಮಧು, ಮಾಕ್ಷಿಕ/ಶಹದ್/ಮಧು/ತೇನ್/ತೇನೆ/Honey